ಯಾದಗಿರಿಯಲ್ಲಿ ಹರಿದಿದೆ ಅಕ್ರಮ ಹೆಂಡದ ಹೊಳೆ

ಲಿಕರ್ ಕುಳಗಳು ಟಂಟಂ, ಟ್ಯಾಕ್ಟರ್, ಸರಕಾರಿ ಬಸ್ ಹಾಗೂ ದ್ವಿಚಕ್ರದ ಮೂಲಕ ಹೆಂಡವನ್ನು ರಾಜಾರೋಷವಾಗಿ ರಾಜ್ಯಕ್ಕೆ ಸರಬರಾಜು ಮಾಡುತ್ತಿದ್ದಾರೆ. ಅಬಕಾರಿ ಇಲಾಖೆಯ ಅಧಿಕಾರಿಗಳು ಮಾತ್ರ ಧ್ಯಾನಸ್ತ ಸ್ಥಿತಿಯಲ್ಲಿ ಕುಳಿತ್ತಿದ್ದಾರೆ. ಜನಪರ ಕಾಳಜಿ ಇರುವವರು ಅವರನ್ನು ಧ್ಯಾನಸ್ತ ಸ್ಥಿತಿಯಿಂದ ಬಡಿದೆಬ್ಬಿಸಬೇಕಾಗಿದೆ.
ಪ್ರತಿನಿತ್ಯ ಕುಡಕರು ನಾರಾಯಣಪೇಟಕ್ಕೆ ತೆರಳಿ ಹೆಂಡವನ್ನು ಸೇವಿಸಿ. ಮರಳಿ ಬರುವಾಗ ತಮ್ಮ ಕುಟುಂಬದವರಿಗೆ ಹೆಂಡವನ್ನು ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ರಾಜ್ಯಕ್ಕೆ ತೆಗೆದುಕೊಂಡು ಬರುತ್ತಿದ್ದಾರೆ. ನೂರಾರು ಹೆಂಡದ ಬೈಕ್‌ಗಳು ಓಡಾಡುತ್ತವೆ. ರಾಜ್ಯದಲ್ಲಿ ಹೆಂಡ ನಿಷೇಧವಿದ್ದರೂ ಗಡಿ ಪ್ರದೇಶದಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಹೆಂಡ ಸಾಗಾಟ ಜೋರಾಗಿಯೇ ನಡೆದಿದೆ.
ಲೆಕ್ಕಕ್ಕಿಲ್ಲದ ಚೆಕ್ ಪೋಸ್ಟ್ : ಯಾದಗಿರಿಯಿಂದ ನಾರಾಯಣಪೇಟ ರಸ್ತೆಯಲ್ಲಿ ಇರುವ ಕುಂಟಿಮಾರಿ ಚೆಕ್ ಪೋಸ್ಟ್ ಇದೆ. ಇದು ಹೆಸರಿಗೆ ಮಾತ್ರ ಚೆಕ್‌ಪೋಸ್ಟ್. ಇಲ್ಲಿ ಯಾವೊಬ್ಬ ಪೊಲೀಸ್ ಇರುವುದಿಲ್ಲ. ಪ್ರತಿದಿನ ಆಂಧ್ರಪ್ರದೇಶದಿಂದ ಅಕ್ರಮವಾಗಿ ಹೆಂಡ, ಲಿಕ್ಕರ‍್ಸ್ ಕರ್ನಾಟಕಕ್ಕೆ ಪ್ರವೇಶಿಸುತ್ತಿದ್ದೆ. ಇದನ್ನು ರಾಜ್ಯಕ್ಕೆ ನುಸುಳದಂತೆ ಎಚ್ಚರಿಕೆ ವಹಿಸಬೇಕಾಗಿದೆ.
ವಿವೇಚನೆಯಿಲ್ಲದ ಜನರು ಮದ್ಯದ ದಾಸರಾಗಿ ಕುಟುಂಬವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಅಷ್ಟಾದರೂ "ಮದ್ಯಾಸುರ"ನನ್ನು ಪೂರ್ಣವಾಗಿ ಮಟ್ಟ ಹಾಕಲು ಯಾವ ಸರಕಾರಕ್ಕೂ ಸಾಧ್ಯವಾಗಿಲ್ಲ. ಆದಷ್ಟು ಬೇಗ ವರಿಷ್ಠ ಪೊಲೀಸ್ ಅಧಿಕಾರಿ ಹಾಗೂ ಅಬಕಾರಿ ಇಲಾಖೆಯವರು ಅಕ್ರಮ ಹೆಂಡ ತಡೆಯಲಿ ಮತ್ತು ಚೆಕ್‌ಪೋಸ್ಟ್‌ಗೆ ಯಾರೊಬ್ಬರನ್ನಾದರೂ ನಿಯೋಜನೆ ಮಾಡಲಿ ಎಂಬುದು ದಟ್ಸ್ ಕನ್ನಡದ ಆಶಯ.












Click it and Unblock the Notifications