ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನಸೌಧದಿಂದ ಬಸವಣ್ಣನ ಪಾದಕ್ಕೆ ಬಿದ್ದ ಕುಮಾರಸ್ವಾಮಿ

By Mahesh
|
Google Oneindia Kannada News

HD Kumaraswamy hunger strike location shift
ಬೆಂಗಳೂರು ಜು 6: ಶನಿವಾರ(ಜು 9) ದಿಂದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅಮರಣಾಂತ ಉಪವಾಸ ಕೂರುವುದು ನಿಶ್ಚಯವಾಗಿದೆ. ಆದರೆ, ಲೋಕೇಷನ್ ಮಾತ್ರ ವಿಧಾನಸೌಧದಿಂದ ಬಸವೇಶ್ವರ ಪ್ರತಿಮೆ ಕಡೆಗೆ ಶಿಫ್ಟ್ ಆಗಿದೆ.

ಯಡಿಯೂರಪ್ಪ ಹೊರ ತಂದಿರುವ 1500 ಕೋಟಿ ರು ಚಾರ್ಚ್ ಶೀಟ್ ಗೆ ಸಂಬಂಧಪಟ್ಟಂತೆ ಸಿಬಿಐ ಇಲ್ಲವೇ ಯಾವುದೇ ತನಿಖೆ ಆದೇಶ ಮಾಡಬೇಕು. ಮೂರು ತಿಂಗಳಲ್ಲಿ ಸತ್ಯ ಹೊರಬೀಳಬೇಕು ಎಂದು ಮಾಜಿ ಸಿಎಂ ಆಗ್ರಹಿಸಿದ್ದಾರೆ. ಇದೇ ತಮ್ಮ ಉಪವಾಸದ ಮೂಲ ಉದ್ದೇಶ ಎಂದು ಪುನರುಚ್ಚರಿಸಿದ್ದಾರೆ.

ವಿಧಾನಸೌಧದ ಮುಂದೆ ಪ್ರತಿಭಟನೆಗೆ ಅವಕಾಶವಿಲ್ಲ ಎಂಬುದು ಗೊತ್ತಿದೆ. ಅದು ಗೊತ್ತಿಲ್ಲದೆ ನಾನು ಸಿಎಂ ಆಗಿರಲಿಲ್ಲ. ಬಸವೇಶ್ವರ ಪ್ರತಿಮೆ ಮುಂದೆ ಧರಣಿ ಮಾಡಲು ಅವಕಾಶ ಕೋರಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.

ಬಿಜೆಪಿ ಶಾಸಕರು ಹಾಗೂ ಮುಖಂಡರು ಪ್ರತಿಮೆ ಮುಂದೆ ಧರಣಿ ನಡೆಸಿದ ಉದಾಹರಣೆಗಳಿವೆ. ನಮಗೂ ಅವಕಾಶ ನೀಡಬೇಕು. ಯಡಿಯೂರಪ್ಪ ಅವರ ಆರೋಪದಿಂದ ಗೌಡರ ಕುಟುಂಬಕ್ಕೆ ಅಂಟಿರುವ ಕಳಂಕ ದೂರಾಗಬೇಕು ಅದಕ್ಕಾಗಿ ಈ ಉಪವಾಸ ಎಂದು ಕುಮಾರಸ್ವಾಮಿ ಬುಸುಗುಟ್ಟಿದರು.

ಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿಯ ಎಡಬಲದಲ್ಲಿ ಮಾಜಿ ಸಿಎಂ ಬಂಗಾರಪ್ಪ, ಪಿಜಿಆರ್ ಸಿಂಧ್ಯಾ, ಡ್ಯಾನಿಷ್ ಅಲಿ, ಬೆಂಕಿ ಮಹದೇವು ಮುಂತಾದವರು ಕಾಣಿಸಿಕೊಂಡರು.

English summary
JD-S leader HD Kumaraswamy said he will undertake a fast-to-death from Saturday(Jun 9) without fail. He has asked police commissioner to permit him to protest against CM BS Yeddyurappa by sitting in front of Basaveshwara Statue Off Vidhanasoudha Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X