ಫೇಸ್ ಬುಕ್, ಸ್ಕೈಪ್ ನಿಂದ ವಿಡಿಯೋ ಚಾಟ್ ಸೇವೆ

ಫೇಸ್ ಬುಕ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಝುಕರ್‌ಬರ್ಗ್ ಜುಲೈ 6ರಿಂದ ಹೊಸ ಸೇವೆ ಒದಗಿಸುವುದಾಗಿ ಹೇಳಿದ್ದಾರೆ. ಮೈಕ್ರೋ ಸಾಫ್ಟ್ ಇತ್ತೀಚೆಗೆ 8.5 ಬಿಲಿಯನ್ ಡಾಲರ್ ಹಣ ನೀಡಿ ಖರೀದಿಸಿರುವ ಸ್ಕೈಪ್ ಕೂಡ ವಿಡಿಯೋ ಚಾಟಿಂಗ್ ಸೇವೆ ಒದಗಿಸಲು ಫೇಸ್ ಬುಕ್ ಸಜ್ಜಾಗಿದೆ.
ಈಗ ಫೇಸ್ ಬುಕ್ಕಿಗರು ತಮ್ಮ ಸಂದೇಶ ಹಾಗೂ ಸ್ಥಿತಿಯನ್ನು ಹಾಗೂ ಫೋಟೋಗಳನ್ನು ಪ್ರೊಫೈಲ್ ಮೂಲಕ ಶೇರ್ ಮಾಡುತ್ತಿದ್ದು, ವಿಡಿಯೋ ಚಾಟ್ ಸೇವೆ ಸೇರ್ಪಡೆಗೊಂಡಲ್ಲಿ ಇದು ಆಕರ್ಷಕ ಹಾಗೂ ಆಸಕ್ತಿದಾಯಕ ಬದಲಾವಣೆಯಾಗಲಿದೆ.
ಮೂಲಗಳ ಪ್ರಕಾರ ಫೇಸ್ ಬುಕ್ ಮುಂದಿನ ವಾರ ಸ್ಕೈಪ್ ಜತೆಗೂಡಿ ವಿಡಿಯೋ ಚಾಟ್ ಸೇವೆ ಒದಗಿಸಲಿದೆ. ಇದಕ್ಕೆ ಸ್ಕೈಪ್ ಶಕ್ತಿ ಒದಗಿಸಲಿದೆ. ಇದರಿಂದ ಫೇಸ್ ಬುಕ್ ಶಕ್ತಿ ಹೆಚ್ಚಾಗಲಿದ್ದು, ಇದು ಈಗ ವಿಶ್ವಾದ್ಯಂತ ಸಕ್ರಿಯ 500 ಮಿಲಿಯನ್ ಬಳಕೆದಾರರನ್ನು ಹೊಂದಿದೆ.












Click it and Unblock the Notifications