ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಪ್ಪು ಹಣ: ಸುಪ್ರೀಂಕೋರ್ಟಿನಿಂದಲೇ ವಿಶೇಷ ತನಿಖಾ ತಂಡ

By Srinath
|
Google Oneindia Kannada News

Supreme Court
ನವದೆಹಲಿ, ಜುಲೈ 4: ಕಪ್ಪು ಹಣದ ಬಗ್ಗೆ ಸರಕಾರ ಆಲಸ್ಯ ಮಾಡುತ್ತಿರುವ ಬಗ್ಗೆ ಸೋಮವಾರ ತೀವ್ರ ಬೇಸರ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಕಪ್ಪು ಹಣದ ಬಗ್ಗೆ ಕೂಲಂಕಷ ತನಿಖೆ ನಡೆಸಲು ಸ್ವತಃ ವಿಶೇಷ ತನಿಖಾ ತಂಡವನ್ನು (ಎಸ್ ಐಟಿ) ರಚಿಸಿದೆ. ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶರಾದ ಜೀವನ್ ರೆಡ್ಡಿ ಮತ್ತು ಎಂ.ಬಿ. ಷಾ ಸಮಿತಿಯ ನೇತೃತ್ವ ವಹಿಸಲಿದ್ದಾರೆ.

ವಿದೇಶಿ ಬ್ಯಾಂಕುಗಳಲ್ಲಿ ಶೇಖಣೆಯಾಗಿರುವ ಅಗಣಿತ ಕಾಳ ಧನದ ಬಗ್ಗೆ ಸರಕಾರ ಕೈಗೊಂಡಿರುವ ಕ್ರಮದ ಬಗ್ಗೆ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಆದರೆ ಈ ಸಂಬಂಧ ಕೇಂದ್ರ ಸರಕಾರದ ನಿಧಾನಗತಿ ಧೋರಣೆ ಬಗ್ಗೆ ಕೋರ್ಟ್ ಅನೇಕ ಬಾರಿ ಛೀಮಾರಿ ಹಾಕಿದೆ. 'ವಿದೇಶಗಳಲ್ಲಿನ ಕಪ್ಪು ಹಣವೆಂದರೆ ಅದು ರಾಷ್ಟ್ರೀಯ ಸಂಪತ್ತಿನ ಲೂಟಿ ಅಷ್ಟೇ' ಎಂದು ಕೋರ್ಟ್ ಒಮ್ಮೆ ತೀವ್ರ ಖೇದ ವ್ಯಕ್ತಪಡಿಸಿತ್ತು.

English summary
The Supreme Court on Monday (July 4) set up a special investigation team (SIT) led by two retired judges to probe the black money issue and criticised the government in the matter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X