ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಟ್ಟಪರ್ತಿ ಆಗಿದೆ 'ಅನಂತ' ಸಾಯಿ ಗೋಲ್ಡ್ ಪ್ಯಾಲೇಸ್

By Srinath
|
Google Oneindia Kannada News

saibaba
ಪುಟ್ಟಪರ್ತಿ, ಜುಲೈ 4: ಅತ್ತ ಕೇರಳದ ಅನಂತ ಪದ್ಮನಾಭ ದೇಗುಲದ ಭೂಗತ ಕೋಣೆಗಳಲ್ಲಿ ಟನ್‌ಗಟ್ಟಲೆ ಚಿನ್ನ ಪತ್ತೆಯಾಗುತ್ತಿದೆ. ಇತ್ತ ಪುಟ್ಟಪರ್ತಿಯ ಸಾಯಿಬಾಬಾ ಆಶ್ರಮದಲ್ಲಿ ಮತ್ತಷ್ಟು ಬೆಳ್ಳಿ ಹಾಗೂ ಚಿನ್ನದ ವಸ್ತುಗಳು ಸಿಕ್ಕಿವೆ. ಪುಟ್ಟಪರ್ತಿ ಈಗ ಅನಂತ ಸಾಯಿ ಗೋಲ್ಡ್ ಪ್ಯಾಲೇಸ್ ಆಗಿದೆ.

ಸಾಯಿಬಾಬಾ ಅವರ ಏಕಾಂತ ಕೊಠಡಿ ಯಜುರ್ ಮಂದಿರದ ಪಕ್ಕದಲ್ಲಿರುವ ಕೋಣೆಯಲ್ಲಿ ಶನಿವಾರ (ಜುಲೈ 2) ಸರ್ಕಾರಿ ಅಧಿಕಾರಿಗಳು ಹಾಗೂ ಸತ್ಯ ಸಾಯಿ ಕೇಂದ್ರೀಯ ಟ್ರಸ್ಟ್‌ನ ಸದಸ್ಯರು ನಡೆಸಿದ ಜಂಟಿ ತಪಾಸಣೆ ವೇಳೆ 76 ಲಕ್ಷ ರೂ. ಮೌಲ್ಯದ ಅಮೂಲ್ಯ ವಸ್ತುಗಳು ಪತ್ತೆಯಾಗಿವೆ. 57.96 ಲಕ್ಷ ರೂ. ಮೌಲ್ಯದ 116 ಕೆ.ಜಿ. ಬೆಳ್ಳಿ, 15.83 ಲಕ್ಷ ರೂ. ಬೆಲೆ ಬಾಳುವ 905 ಗ್ರಾಂ ಚಿನ್ನ ಹಾಗೂ 3 ಲಕ್ಷ ರೂ.ನ ಒಂದು ವಜ್ರದ ಉಂಗುರ ದೊರೆತಿದೆ. ಈ ವಸ್ತುಗಳನ್ನು ಸಾಯಿ ಟ್ರಸ್ಟ್‌ನ ಖಾತೆಯಲ್ಲಿಡಲಾಗಿದೆ.

ಯಜುರ್ ಮಂದಿರದ ಪಕ್ಕದ ಕೊಠಡಿಯಲ್ಲಿನ ಅಪೂರ್ವ ವಸ್ತುಗಳ ಬಗ್ಗೆ ಪಟ್ಟಿ ಮಾಡುವಂತೆ ಟ್ರಸ್ಟ್‌ನವರು ಮನವಿ ಮಾಡಿದ ಹಿನ್ನೆಲೆಯಲ್ಲಿ ಟ್ರಸ್ಟಿಗಳು, ಆಡಳಿತ ಮಂಡಳಿ ಸದಸ್ಯರು ಮತ್ತು ರಾಜ್ಯ ಸರ್ಕಾರದ ಪ್ರತಿನಿಧಿಗಳನ್ನು ಒಳಗೊಂಡ ತಂಡವು ತಪಾಸಣೆ ನಡೆಸಿತು. ಅನಂತಪುರ ಜಂಟಿ ಜಿಲ್ಲಾಧಿಕಾರಿ ಅನಿತಾ ರಾಮಚಂದ್ರನ್ ಮತ್ತು ಹೆಚ್ಚುವರಿ ಜಂಟಿ ಜಿಲ್ಲಾಧಿಕಾರಿ ಇದರ ನೇತೃತ್ವ ವಹಿಸಿದ್ದರು.

ಈ ನಡುವೆ, ಯಜುರ್ ಮಂದಿರದಲ್ಲೂ ಜಂಟಿ ಶೋಧ ನಡೆಸಲಾಯಿತಾದರೂ ಯಾವುದೇ ಆಭರಣಗಳು ಪತ್ತೆಯಾಗಿಲ್ಲ. ಆದರೆ ಕೆಲವೊಂದು ಲಕೋಟೆಗಳು ಹಾಗೂ ಕಾಗದಪತ್ರಗಳು ಕಂಡುಬಂದಿವೆ. ಲಕೋಟೆಯಲ್ಲಿ ಭಕ್ತರು ನೀಡಿರುವ ಚೆಕ್‌ ಇರುವ ಅನುಮಾನವಿದೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಯಜುರ್‌ ಮಂದಿರದಲ್ಲಿ ಮತ್ತೆ ತಪಾಸಣೆ ಕಾರ್ಯ ನಡೆಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅನಂತಪುರದ ಜಂಟಿ ಜಿಲ್ಲಾಧಿಕಾರಿ ಅನಿತಾ ರಾಮಂದ್ರನ್‌ ಹಾಗೂ ಹೆಚ್ಚುವರಿ ಜಂಟಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತಪಾಸಣೆ ಕಾರ್ಯ ನಡೆಯಿತು. 15 ದಿನಗಳ ಹಿಂದಷ್ಟೇ ಸಾಯಿ ಬಾಬಾ ಅವರ ಕೋಣೆ ಯಜುರ್ ಮಂದಿರದಲ್ಲಿ 11.56 ಕೋಟಿ ರೂ. ನಗದು, 98 ಕೆ.ಜಿ. ಚಿನ್ನ ಹಾಗೂ 307 ಕೆ.ಜಿ. ಬೆಳ್ಳಿ ಪತ್ತೆಯಾಗಿತ್ತು.

English summary
Silver and gold articles worth over Rs 76 lakh have been found during a joint inspection by government officials and Sri Sathya Sai Central Trust into a room adjoining late Sathya Sai Baba's personal chamber -- the Yajur Mandir, the Trust said on Sunday July 3.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X