ಕೊಡಗಿನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ನಾಲ್ವರು ಬಲಿ

ಈ ಭೀಕರ ಅಪಘಾತದಲ್ಲಿ ಮೃತಪಟ್ಟವರು ಒಂದೇ ಕುಟುಂಬಕ್ಕೆ ಸೇರಿದವರು. ಕೊಡಗಿನ ನಾಪೋಕ್ಲು ಸಮೀಪದ ಚೆರಿಯಪರಂಬುವಿನವರು ಎಂದು ತಿಳಿದು ಬಂದಿದೆ. ಇವರು ಪೊನ್ನಂಪೇಟೆ ಮಾರ್ಗವಾಗಿ ಕೇರಳದ ಮಾನಂದವಾಡಿಗೆ ಚಿಕಿತ್ಸೆಗಾಗಿ ತೆರಳುತ್ತಿದ್ದರು.
ಪೊನ್ನಂಪೇಟೆಯ ಸಮೀಪದ ಕಾನೂರು ಜಂಕ್ಷನ್ ಬಳಿ ತಿರುವಿನಲ್ಲಿ ಜೀಪನ್ನು ಹಿಂದಿಕ್ಕಿ ಮುನ್ನುಗ್ಗಿದ ಕೆಎಸ್ಆರ್ ಟಿಸಿ ಬಸ್ಸು, ಮಾರುತಿ ವ್ಯಾನಿಗೆ ಢಿಕ್ಕಿಹೊಡೆದಿದೆ. ಈ ಅಪಘಾತದಲ್ಲಿ ಮೃತಪಟ್ಟವರನ್ನು ಹುಟ್ಟೂ ಶವಗಳನ್ನು ಅವರ ಹುಟ್ಟೂರಿಗೆ ಸಾಗಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಇಬ್ಬರು ಮಕ್ಕಳು ಸೇರಿ ನಾಲ್ವರನ್ನು ಮೈಸೂರಿಗೆ ಸಾಗಿಸಲಾಗಿದೆ.
ಮೃತಪಟ್ಟವರನ್ನು ನಾಪೋಕ್ಲುವಿನ ಪಿಎಂ ಹ್ಯಾರಿಸ್(32)(ಡೈವರ್), ಸಿರಾಜ್(30), ಪೊನ್ನಂಪೇಟೆಯ ಉಮ್ಮರ್(40), ಐಸಮ್ಮ(38) ಎಂದು ಗುರುತಿಸಲಾಗಿದೆ. ಇಬ್ರಾಹಿಂ, ಶಫಿಲಾ, ಸಲ್ಮಾನ್ ಹಾಗೂ ಪಸ್ಮಿಯಾ ಗಾಯಗೊಂಡಿದ್ದು, ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.












Click it and Unblock the Notifications