ಅತಿ ಉದ್ದದ ಸೇತುವೆ ಅಮೆರಿಕಕ್ಕೆ ಸಡ್ಡು ಹೊಡೆದ ಚೀನಾ
ಇದುವರೆವಿಗೂ ಅತಿ ಉದ್ದದ ಸೇತುವೆ ಎಂಬ ದಾಖಲೆಯನ್ನು ಹೊಂದಿರುವ ಅಮೆರಿಕದ ಲೂಸಿಯಾನದ 'ಲೇಕ್ ಪೊಂಚಾರ್ಟ್‌ರೈನ್ ಕಾಸ್‌ವೇ" ಸೇತುವೆಗಿಂತ ಈ ಸೇತುವೆ ಸುಮಾರು ಮೂರು ಮೈಲುಗಳಷ್ಟು ಹೆಚ್ಚು ಉದ್ದವಾಗಿದೆ. ಸೇತುವೆಯನ್ನು ನಿರ್ಮಿಸಲು ಕೇವಲ ನಾಲ್ಕು ವರ್ಷಗಳು ತಗುಲಿದ್ದು, 55.5 ಶತಕೋಟಿ ಪೌಂಡ್ ವೆಚ್ಚವಾಗಿದೆ.
ಷಟ್ಪಥ ರಸ್ತೆಯನ್ನು ಒಳಗೊಂಡಿರುವ ಈ ಸೇತುವೆಯು 5,200ಕ್ಕಿಂತಲೂ ಅಧಿಕ ಸ್ತಂಭಗಳನ್ನು ಆಧರಿಸಿ ನಿಂತಿದೆ. ಈ ಸೇತುವೆಯ ಮೂಲಕ ದಿನವೊಂದಕ್ಕೆ ಸುಮಾರು 30 ಸಾವಿರ ಕಾರುಗಳು ಹಾದುಹೋಗಲಿದ್ದು, ಕಿಂಗ್ದಾವೊ ಹಾಗೂ ಉಪನಗರ ಹ್ವಾಂಗ್ದಾವೊ ನಡುವಿನ ಸಂಚಾರವನ್ನು 20 ರಿಂದ 30 ನಿಮಿಷಗಳಷ್ಟು ಕಡಿತಗೊಳಿಸಲಿದೆ
ಚೀನಾದಲ್ಲಿ ಅತಿ ಉದ್ದದ ರೈಲು ಸೇತುವೆ ಡ್ಯಾನಾಂಗ್-ಕುನ್ಷಾನ್ ಗ್ರಾಂಡ್ ಸೇತುವೆ 16.4 ಕಿ.ಮೀ ಇದೆ. ಒಟ್ಟು 7 ಅತಿ ಉದ್ದದ ಸೇತುವೆಗಳನ್ನು ಈಗ ಚೀನಾ ಹೊಂದಿದೆ. 2016ರ ವೇಳೆಗೆ 48ಕಿ.ಮೀ ಉದ್ದದ ಇನ್ನೊಂದು ಸೇತುವೆ ನಿರ್ಮಿಸಲು ಚೀನಾ ಸಿದ್ಧತೆ ನಡೆಸಿದೆ. ಅತಿ ತೀವ್ರ ಭೂಕಂಪ ಸಂಭವಿಸಿದರೂ, ಚಂಡಮಾರುತ ಬೀಸಿದರೂ, 3 ಲಕ್ಷ ಟನ್ ಸರಕು ಸಾಗಿಸಿದರೂ ಈ ಸೇತುವೆ ಅಲ್ಲಾಡುವುದಿಲ್ಲ ಎಂದು ಚೀನಾ ಹೇಳಿಕೊಂಡಿದೆ.













Click it and Unblock the Notifications