ಮುಂಬೈ ರೇವ್ ಪಾರ್ಟಿಯಲ್ಲಿ ವಿನೋದ್ ಖನ್ನಾ ಮಗ ಸಾಕ್ಷಿ

ಸೆರೆ ಸಿಕ್ಕಿರುವವರ ಪಟ್ಟಿಯಲ್ಲಿ ಸಾಕ್ಷಿ ಖನ್ನಾ ಹೆಸರು ಸೇರ್ಪಡೆಯಾಗಿದೆ. ಆದರೆ, ಆತ ರೇವ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಎಂಬುದು ಇನ್ನೂ ಖಾತ್ರಿಯಾಗಿಲ್ಲ. 'ಬಿಯಾಂಡ್ ಲಾಜಿಕ್' ಎಂಬ ಕಂಪನಿ ಮುಂಬೈನಿಂದ ಸುಮಾರು 100 ಕಿ.ಮೀ ದೂರವಿರುವ ಹೋಟೆಲ್ ಮೌಂಟ್ ವ್ಯೂನಲ್ಲಿ ರೇವ್ ಪಾರ್ಟಿಯನ್ನು ಆಯೋಜಿಸಿತ್ತು. ವಿಷಯ ತಿಳಿದ ಪೊಲೀಸರು ಹಠಾತ್ ದಾಳಿ ನಡೆಸಿ, ರೆಸಾರ್ಟ್ ಸುತ್ತ ಮುತ್ತ ಇದ್ದ 300ಕ್ಕೂ ಅಧಿಕ ಜನರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು.
ಈ ಸಂದರ್ಭದಲ್ಲಿ ರಜೆ ಕಳೆಯಲು ರೆಸಾರ್ಟ್ ಬಂದಿದ್ದವರು, ರೇವ್ ಪಾರ್ಟಿ ಗಾಗಿ ಬಂದಿದ್ದರು ಎಲ್ಲರನ್ನು ಬಂಧಿಸಿ ಕರೆದೊಯ್ಯಲಾಯಿತು. ಹೀಗಾಗಿ ಅತಿಥಿಗಳು ಯಾರು ಆರೋಪಿಗಳು ಯಾರು ಸ್ಪಷ್ಟವಾಗಿಲ್ಲ. ಸಾಕ್ಷಿ ಕೈ ಮೇಲೆ ರೇವ್ ಪಾರ್ಟಿ ಅಟೆಂಡ್ ಮಾಡಿದ್ದಕ್ಕೆ ಯಾವ ಸಾಕ್ಷಿ ಇಲ್ಲ. ರೇವ್ ಪಾರ್ಟಿಯಲ್ಲಿ ಭಾಗವಹಿಸುವವರ ಕೈಯ ಮೇಲೆ ಮುದ್ರೆ ಒತ್ತಲಾಗುತ್ತದೆ. ಈ ಬಗ್ಗೆ ಸಾಕ್ಷಿ ಯಾಗಲಿ, ವಿನೋದ್ ಖನ್ನಾ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ಹಿಂದೆ ಶಕ್ತಿ ಕಪೂರ್ ಮಗ ಡಿಜೆ ಸಿದ್ಧಾಂತ್ ಕೂಡಾ ಇದೇ ರೀತಿ ರೇವ್ ಪಾರ್ಟಿ ಕೇಸ್ ನಲ್ಲಿ ಸಿಕ್ಕಿ ಬಿದ್ದಿದ್ದರು. ಆದರೆ, ಸಿದ್ಧಾಂತ್ ಕೈ ಮೇಲೆ ಬ್ಯಾಂಡ್ ಇರಲಿಲ್ಲ. ಯಾವುದೇ ಪುರಾವೆ ಸಿಗದೇ ನಿರ್ದೋಷಿ ಎಂದು ಪೊಲೀಸರು ವಾಪಾಸ್ ಕಳಿಸಿದ್ದರು.












Click it and Unblock the Notifications