ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆ ಹತ್ಯೆ: ಛೋಟಾ ರಾಜನ್ ಗ್ಯಾಂಗಿನ 7 ಪಾತಕಿಗಳ ಸೆರೆ

By Srinath
|
Google Oneindia Kannada News

Journalist Jyotirmoy Dey
ಮುಂಬೈ, ಜೂನ್ 27: ಹಿರಿಯ ಪತ್ರಕರ್ತ ಜ್ಯೋತಿರ್ಮಯಿ ಡೆ ಹತ್ಯೆ ಸಂಬಂಧ ತಮಿಳುನಾಡು ಮತ್ತು ಮಹಾರಾಷ್ಟ್ರದ ಭಾಗಗಳಲ್ಲಿ ಒಟ್ಟು 7 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು, ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಇಂದು (ಜೂನ್ 27) ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬಂಧಿತರನ್ನು ಜುಲೈ 4ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ತಮಿಳುನಾಡಿನ ರಾಮೇಶ್ವರಂನಲ್ಲಿ ಮೂವರು, ಸೋಲಾಪುರದಲ್ಲಿ ಒಬ್ಬರು ಮತ್ತು ಮುಂಬೈನಲ್ಲಿ ಮೂವರನ್ನು ಬಂಧಿಸಲಾಗಿದೆ. ಬಂಧಿತರೆಲ್ಲ ಮಹಾರಾಷ್ಟ್ರಕ್ಕೆ ಸೇರಿದವರು ಎಂದು ಗೃಹ ಸಚಿವ ಆರ್. ಆರ್. ಪಾಟೀಲ್ ತಿಳಿಸಿದ್ದಾರೆ.

ಸತೀಶ್ ಕಲ್ಯಾ, ಅರುಣ್ ಡೇಕ್, ಅನಿಲ್ ವಾಗ್ಮೋರೆ, ಬಬ್ಲು, ಸಚಿನ್ ಗಾಯಕ್ವಾಡ್, ಮಂಗೇಶ್ ಮತ್ತು ಛೋಟು ಎಂದು ಬಂಧಿತರು. ಡೆಗೆ ಸತೀಶ್ ಕಲ್ಯಾ ಗುಂಡಿಟ್ಟವನು. ಕ್ರೈಂ ರಿಪೋರ್ಟರ್ ಆಗಿದ್ದ ಡೆ, ಛೋಟಾ ರಾಜನ್ ನ ಪ್ರಮುಖ ಎದುರಾಳಿ ಛೋಟಾ ಶಕೀಲ್ ಜತೆ ನಿಕಟ ಸಂಪರ್ಕ ಹೊಂದಿದ್ದೇ ಅವರ ಹತ್ಯೆಗೆ ಕಾರಣ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಪ್ರಕರಣವನ್ನು ಭೇದಿಸಿದ ಕ್ರೈಂ ಬ್ರ್ಯಾಂಚ್ ಪೊಲೀಸರನ್ನು ಶ್ಲಾಘಿಸಿದ ಪಾಟೀಲ್, ತಂಡಕ್ಕೆ 10 ಲಕ್ಷ ರು. ಬಹುಮಾನ ಪ್ರಕಟಿಸಿದ್ದಾರೆ. ಈ ಮಧ್ಯೆ, ಪ್ರಕರಣದಲ್ಲಿ ಭೂಗತ ಕೈವಾಡವಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಮಿಡ್ ಡೆ ಪತ್ರಿಕೆಯ ಹಿರಿಯ ಕ್ರೈ ರಿಪೋರ್ಟರ್ ಡೆ ಅವರನ್ನು ಜೂನ್ 11ರಂದು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು.

English summary
Two weeks after crime reporter Jyotirmoy Dey was shot dead here, Maharashtra Government on Monday said the murder case has been cracked with the arrest of seven persons from the state and Tamil Nadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X