46ಲಕ್ಷ ಲಪಟಾಯಿಸಿ ಮಜಾ ಮಾಡಿದ ಬ್ಯಾಂಕ್ ಉದ್ಯೋಗಿ

lavish life
ಕರೀಂನಗರ, ಜೂನ್ 24: ಐಷಾರಾಮಿ ಜೀವನಕ್ಕೆ ಮನಸೋತ ಡಿ. ಶ್ರೀಲತಾ ಎಂಬ ಪುಣ್ಯಾತಗಿತ್ತಿ ತಾನು ಕೆಲಸ ಮಾಡುತ್ತಿದ್ದ ಬ್ಯಾಂಕಿನಿಂದ ಬರೋಬ್ಬರಿ 46 ಲಕ್ಷ ರುಪಾಯಿ ಲಪಟಾಯಿಸಿದ್ದಾಳೆ.

ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದಿನ ಕ್ಯಾಷಿಯರ್ ಆಗಿದ್ದ ಶ್ರೀಲತಾ, ಬ್ಯಾಂಕ್ ಶಾಖೆಯ ಎಟಿಎಂ ಕೇಂದ್ರದಿಂದ ಈ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾಳೆ. ಆದರೆ ಎರಡೇ ತಿಂಗಳಿಗೇ ಲಕ್ಷುರಿ ಲೈಫ್ ಖತಂ ಆಗಿದೆ ಎಂದು ಕರೀಂನಗರ ಡಿವೈ.ಎಸ್ಪಿ ಗುರುವಾರ ತಿಳಿಸಿದ್ದಾರೆ.

ವಾವಿಳ್ಳಪಲ್ಲಿಯಲ್ಲಿರುವ ಬ್ಯಾಂಕಿನನ ಎಟಿಎಂ ಕೇಂದ್ರಕ್ಕೆ ಹಣ ತುಂಬಿಸುವ ಜವಾಬ್ದಾರಿಯನ್ನು ಶ್ರೀಲತಾಗೆ ವಹಿಸಲಾಗಿತ್ತು. ಆದರೆ ಅವಳು ದಿನೇ ದಿನೆ ಆ ಹಣನ್ನು ಸ್ವಂತಕ್ಕೆ ಬಳಸಿಕೊಳ್ಳಲಾರಂಭಿಸಿದಳು. ಎಸ್ ಬಿಎಂ ಅಧಿಕಾರಿಗಳು ಲೆಕ್ಕ ತಪಾಸಣೆ ಮಾಡಿದಾಗ, 46 ಲಕ್ಷ ಕಾಣೆಯಾಗಿರುವುದು ಪತ್ತೆಯಾಗಿದೆ. ಅದೇ ವೇಳೆಗೆ ಇದರ ಸುಳಿವು ದೊರಕುತ್ತಿದ್ದಂತೆ ಶ್ರೀಲತಾ ಕಾಣೆಯಾಗಿದ್ದಳು.

ಕೊನೆಗೆ ಎರಡು ತಿಂಗಳ ನಂತರ ಸ್ವಯಂಪ್ರೇರಿತಳಾಗಿ ಪೊಲೀಸರಿಗೆ ಶರಣಾಗಿದ್ದಾಳೆ. ಶ್ರೀಲತಾಗೆ ಸಹಕರಿಸಿದ ಆರೋಪದ ಮೇಲೆ ಪೊಲೀಸರು ಬ್ಯಾಂಕಿನ ಮತ್ತೊಬ್ಬ ಉದ್ಯೋಗಿಯನ್ನು ವಿಚಾರಣೆಗೆ ಗುರಿಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+