ಮಗಳ ಅತ್ಯಾಚಾರಕ್ಕೆ ತಾಯಿ ಕುಮ್ಮಕ್ಕು,ಎಂಗೇಜ್ಡ್ ವರನ ನಕಾರ

ನನ್ನ ಮಗಳಿಗೆ ಎಂಗೇಜ್ ಮೆಂಟ್ ಆಗಿದೆ ಸಾರ್, ಹುಡುಗಿ ಒಪ್ಪಿದ ಮೇಲೆ ಎಂಗೇಜ್ ಮೆಂಟ್ ಮಾಡಿರೋದು. ಯಾವ ತಂದೆ ತಾಯಿ ಆ ರೀತಿ ಮಾಡೋಕೆ ಸಾಕು. ನಾನು ನಿದ್ದೆ ಮಾತ್ರೆ ನೀಡಿಲ್ಲ. ಅವಳು ಮನೇಲೇ ಇದ್ದಳು. ನಾನು ಹೊರಗೆ ಕೆಲಸಕ್ಕೆ ಹೋಗಿದ್ದೆ ಎರಡು ದಿನ ಮನೆಯಿಂದ ನಾಪತ್ತೆಯಾದವಳು ಈಗ ಆನೇಕಲ್ ಆಸ್ಪತ್ರೆಯಲ್ಲಿ ಪ್ರತ್ಯಕ್ಷವಾಗಿದ್ದಾಳೆ ಎಂದು ತಾಯಿ ಟಿವಿ ವಾಹಿನಿಗಳಿಗೆ ಸ್ಪಷ್ಟವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಎಂಗೇಜ್ ಮೆಂಟ್ ಆದ ಹುಡುಗಿ ಮೇಲೆ ರೇಪ್ ಮಾಡಿದ ಆರೋಪ ಹೊತ್ತಿರುವ ಗಂಡು ಮಾತ್ರ ನಿರಾಳವಾಗಿದ್ದಾನೆ. ಒಪ್ಪಿಗೆ ಇದ್ದೇ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇಷ್ಟ ಇಲ್ಲಾಂದ್ರೆ ಯಾರಾದ್ರೂ ಎರಡು ಗಂಟೆ ಫೋನ್ ನಲ್ಲಿ ಮಾತಾಡ್ತಾರಾ ಸಾರ್, ನೀವು ಬೇಕಾದ್ದು ಟೆಸ್ಟ್ ಮಾಡಿ, ಡಿಎನ್ ಎ, ಎಕ್ಸ್ ರೇ ಏನಾದ್ರೂ ತೊಗೊಳ್ಳಿ ನಾನು ರೆಡಿ. ನಾನು ರೇಪ್ ಮಾಡಿಲ್ಲ. ಆಕೆ ದೊಡ್ಡಮ್ಮ ಅವಳ ತಲೆ ಕೆಡಿಸಿ ಹೀಗೆಲ್ಲಾ ಮಾಡಿಸ್ತಾ ಇದ್ದಾರೆ. ಈಗಲೂ ನಾನು ಅವಳಿಗೆ ತಾಳಿ ಕಟ್ಟೋಕೆ ರೆಡಿ ಎಂದು ತನ್ನ ವಾದವನ್ನು ಆರೋಪಿ ಯುವಕ ಮಂಡಿಸುತ್ತಾನೆ.
ಅತ್ಯಾಚಾರ ಒಳಮರ್ಮ: ಇಷ್ಟಕ್ಕೂ ಅತ್ಯಾಚಾರ ನಡೆದಿರುವ ಬಗ್ಗೆ ಜನರಲ್ಲಿ ಸಂಶಯ ಮೂಡಿದೆ. ಹತ್ತಿರದ ಆಸ್ಪತ್ರೆಯನ್ನು ಬಿಟ್ಟು ಅನೇಕಲ್ ಆಸ್ಪತ್ರೆಗೆ ಸೇರಿರುವ ಬಗ್ಗೆ ಕೂಡಾ ಪ್ರಶ್ನೆ ಎದ್ದಿದೆ. ಯುವತಿಯ ವರ್ಷನ್ ಇನ್ನೂ ಸ್ಪಷ್ಟವಾಗಿ ಸಿಕ್ಕಿಲ್ಲವಾದ್ದರಿಂದ ಈ ಕೇಸ್ ಇನ್ನೂ ಗೋಜಲಾಗಿದೆ. ಯುವತಿಯ ತಾಯಿ, ಎಂಗೇಜ್ ಮೆಂಟ್ ಹುಡುಗ ಮಾತ್ರ ಆರೋಪಿಗಳಾಗಿದ್ದಾರೆ. ಈ ಮಧ್ಯೆ ಹುಡುಗಿಗೆ ದರ್ಶನ್ ಎಂಬ ಹುಡುಗನೊಂದಿಗೆ ಫ್ಯಾಶ್ ಬ್ಯಾಕ್ ನಲ್ಲಿ ಪ್ರೇಮಕಥೆ ಕೂಡ ಇತ್ತು ಎನ್ನಲಾಗಿದೆ. ಹೆಚ್ಚಿನ ಮಾಹಿತಿ ಸಿಕ್ಕರೆ ಕೇಸ್ ಹೊಸ ತಿರುವು ಪಡೆಯುವ ಸಾಧ್ಯತೆಯಿದೆ.












Click it and Unblock the Notifications