ಸೀರಿಯಲ್ ನೋಡಿ ಗೆಳೆಯನ ಕೊಲೆ ಸುಪಾರಿ ಕೊಟ್ಟ ಗೆಳತಿ

CID inspires woman to kill boyfriend
ನವ ದೆಹಲಿ ಜೂ 23: ದೆಹಲಿಯಲ್ಲಿದ್ದ ತನ್ನ ಗೆಳೆಯನನ್ನು ಕೊಲ್ಲಲು ಸುಪಾರಿ ಕೊಟ್ಟು ಮುಂಬೈನಲ್ಲಿ ಆರಾಮವಾಗಿ ತಿರುಗಾಡಿಕೊಂಡಿದ್ದ ಪಾತಕಿ ಮಹಿಳೆಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ. ಸೋನಿ ಟೆಲಿವಿಷನ್ ನಲ್ಲಿ ಪ್ರಸಾರವಾಗುವ ಜನಪ್ರಿಯ ಟೆಲಿ ಸರಣಿ "ಸಿಐಡಿ" ನೋಡಿ ಸ್ಪೂರ್ತಿಗೊಂಡು ಕೊಲೆಗೆ ಸುಪಾರಿ ನೀಡಿದೆ ಎಂದು ಆಕೆ ಹೇಳಿಕೊಂಡಿದ್ದಾಳೆ.

ಕಳೆದ ವಾರ ದಕ್ಷಿಣ ದೆಹಲಿಯಲ್ಲಿ ಸೋಮನಾಥ ಸುವರ್ಣ ಎಂಬ ವ್ಯಕ್ತಿಯ ಕಳೆತ ಶವ ಸಿಕ್ಕಿತ್ತು. ಕೊಲೆ ಶಂಕೆಯಿಂಡ ಹಂತಕರ ಜಾಡು ಹಿಡಿದು ಹೊರಟ ಪೊಲೀಸರಿಗೆ ಮುಂಬೈನ ಮನೆಯೊಂದರಲ್ಲಿಪಾತಕಿ ಕೃಷ್ಣಾ ಹಾಗೂ ಕಾಂಟ್ರ್ಯಾಕ್ಟ್ ಕಿಲ್ಲರ್ ರಾಕೇಶ್ ಗೋವಿಂದ್ ಸೆರೆ ಸಿಕ್ಕಿದ್ದಾರೆ. ದೆಹಲಿಯಲ್ಲಿ ಕೃಷ್ಣಾಳ ಗೆಳೆಯ ಸೋಮನಾಥ್ ಇದ್ದ ಬಾಡಿಗೆ ಮನೆ ಮಾಲೀಕ ನೀಡಿದ ಮಾಹಿತಿ ಹಾಗೂ ಮುಂಬೈ ನಿಂದ ಬಂದ ಕರೆ ವಿವರಗಳ ಜಾಡು ಹಿಡಿದು ಬಲೆ ಬೀಸಿದ ಪೊಲೀಸರಿಗೆ ಹಂತಕರು ಸಿಕ್ಕಿದ್ದಾರೆ.

ಚೆಲ್ಲಾಟದ ಹೆಣ್ಣು: ಪೂರ್ವ ದೆಹಲಿ ಮೂಲದ ಕೃಷ್ಣಾ, ತನ್ನ ಪತಿ ರಣಬೀರ್ ಅನ್ನು ತೊರೆದು ಎರಡು ಮಕ್ಕಳನ್ನು ಕರೆದುಕೊಂಡು ಮುಂಬೈಗೆ ಶಿಫ್ಟ್ ಆಗಿದ್ದಳು. ದೆಹಲಿಯ ಡಿಫೆನ್ಸ್ ಕಚೇರಿಯಲ್ಲಿ ಕೆಲಸದಲ್ಲಿರುವ ಪತಿ ರಣಬೀರ್ ಜೊತೆ ಏಳು ವರ್ಷಗಳಿಂದ ಸಂಪರ್ಕದಲ್ಲಿರಲಿಲ್ಲ. ಈ ಸಂದರ್ಭದಲ್ಲಿ ಸೋಮನಾಥ್ ಜೊತೆ ಲಿವ್ ಇನ್ ಸಂಬಂಧ ಆರಂಭಿಸಿದಳು.

ಸೋಮನಾಥ್ ಜೊತೆ ಆರ್ಥಿಕ ವ್ಯವಹಾರದಲ್ಲಿ ಕೃಷ್ಣಾಳ ಜೊತೆ ಮನಸ್ತಾಪ ಉಂಟಾಗಿ ಕೊನೆ ಆತನನ್ನು ಬಲಿ ತೆಗೆದುಕೊಂಡಿದೆ. ಸೋಮನಾಥ್ ನನ್ನು ಕೊಲ್ಲಲು ಗೋವಿಂದ್ ಎಂಬಾತನಿಗೆ 150,000 ರು ಸುಪಾರಿಯನ್ನು ಕೃಷ್ಣಾ ನೀಡಿದ್ದಳು ಎಂದು ಪೊಲೀಸ್ ಆಯುಕ್ತ ಓಜಾ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+