ಚಿಲ್ಲರೆ ವ್ಯಾಪಾರ ಕ್ಷೇತ್ರಕ್ಕೆ ಕಾಲಿಟ್ಟ ವಿದೇಶಿ ಹೂಡಿಕೆದಾರರು

Foreign Direct Investment in multi-brand retailing
ನವದೆಹಲಿ ಜೂ 20: ದೇಶದ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆಗೆ ಅನುಮತಿ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಆದರೆ ಈ ಅನುಮತಿ ದೇಶದ ಆರು ಮಹಾನಗರಗಳಾದ ನವ ದೆಹಲಿ, ಕೋಲ್ಕತಾ, ಮುಂಬೈ, ಚೆನ್ನೈ, ಬೆಂಗಳೂರು ಹಾಗೂ ಹೈದರಾಬಾದ್ ನಲ್ಲಿ ಮಾತ್ರ ದೊರೆಯಲಿದೆ.

ಈ ಹಿಂದೆ ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆ 1 ಮಿಲಿಯನ್ ಗೂ ಅಧಿಕ ಜನಸಂಖ್ಯೆಯುಳ್ಳ ನಗರಗಳಲ್ಲಿ ಬಹುಬ್ರಾಂಡ್ ಚಿಲ್ಲರೆ ವಹಿವಾಟಿನಲ್ಲಿ ವಿದೇಶಿ ನೇರ ಹೂಡಿಕೆ(foreign direct investment (FDI))ಗೆ ಶಿಫಾರಸು ಮಾಡಿತ್ತು. ಆದರೆ ಸರ್ಕಾರ ಇದನ್ನು ಅಂಗೀಕರಿಸದೆ ಪ್ರಾಯೋಗಿಕವಾಗಿ 6 ನಗರಗಳಲ್ಲಿ ಮಾತ್ರ ಅನುಮತಿ ನೀಡಲು ಸಜ್ಜಾಗಿದೆ ಎಂದು ಹೇಳಲಾಗಿದೆ.

2001 ರ ಜನಗಣತಿಯ ಪ್ರಕಾರ ದೇಶದ 35 ನಗರಗಳು ಒಂದು ಮಿಲಿಯನ್ ಗೂ ಅಧಿಕ ಜನಸಂಖ್ಯೆಯನ್ನು ಹೊಂದಿವೆ. ಮೊದಲಿಗೆ ಈ ವಹಿವಾಟಿನಲ್ಲಿ ವಿದೇಶಿ ನೇರ ಹೂಡಿಕೆ ಮಿತಿಯನ್ನು ಶೇ 51ಕ್ಕೆ ನಿಗದಿಪಡಿಸಲಾಗಿದ್ದು, ಇತರ ನಗರಗಳಲ್ಲಿ ವಹಿವಾಟು ಆರಂಬ ಅಥವಾ ಹೂಡಿಕೆ ಹೆಚ್ಚಳಕ್ಕೆ ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಡಲಾಗಿದೆ.

ಚೀನಾ ಮಾದರಿ: ವಿದೇಶಿ ನೇರ ಹೂಡಿಕೆ ಕನಿಷ್ಟ ಮಿತಿಯನ್ನು 450೦ ಕೋಟಿ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. ನೆರೆಯ ಚೀನಾದಲ್ಲೂ 1992ರಲ್ಲಿ ಚಿಲ್ಲರೆ ವಹಿವಾಟಿನಲ್ಲಿ ವಿದೇಶಿ ನೇರ ಹೂಡಿಕೆ ಮಿತಿಯನ್ನು ಶೇ.49ರಷ್ಟಕ್ಕೆ ಸೀಮಿತಗೊಳಿಸಿ, ಆರು ಪ್ರಾಂತ್ಯಗಳಲ್ಲಿ ಮಾತ್ರ ಅನುಮತಿ ನೀಡಲಾಯಿತು. ನಂತರ 2004ರಲ್ಲಿ ಮಾತ್ರ ವಿದೇಶೀ ನೇರ ಹೂಡಿಕೆಗೆ ಶೇ 100 ರಷ್ಟು ಮಿತಿ ವಿಸ್ತರಿಸಲಾಯಿತು.

ದೇಶದಲ್ಲಿರುವ 15 ಮಿಲಿಯನ್ ಚಿಲ್ಲರೆ ಅಂಗಡಿಗಳಲ್ಲಿ ಕೇವಲ ಶೇ 4 ರಷ್ಟು ಮಾತ್ರ 500 ಚದರ ಅಡಿಗಳಿಗಿಂತ ವಿಸ್ತಾರದ ಸ್ಥಳವನ್ನು ಹೊಂದಿದ್ದು ಅಸಂಘಟಿತ ವಲಯ(unorganised sector)ಕ್ಕೆ ಸೇರುತ್ತವೆ. ಅನೇಕ ಸಚಿವರ ಪ್ರಕಾರ ಈ ಹೂಡಿಕೆ ಅನುಮತಿಯಿಂದ ದೇಶದ ಹಣದುಬ್ಬರ ಕಡಿಮೆಯಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+