ತಿರುಪತಿ ವೆಂಕಟೇಶ್ವರನಿಗೆ ಲಕ್ಷುರಿ ಕಾರು ಕಾಣಿಕೆ

ಬಂಗಾರ, ಬೆಳ್ಳಿ, ವಜ್ರ, ನೆಕ್ ಲೇಸ್, ಕಿರೀಟ, ನಾಗೊಂದಿ, ಗೆಜ್ಜೆ, ಕಡಗ, ಚೈನು, ಕ್ಯಾಷು ಮತ್ತು ಮುಡಿ ಕಾಣಿಕೆಯಿಂದ ತೃಪ್ತನಾಗುತ್ತಿದ್ದ ಬಾಲಾಜಿಗೆ ಈಗ ಕಾಣಿಕೆಗಳು ಕಾಲ ದೇಶಕ್ಕೆ ಧರ್ಮಕ್ಕೆ ಅನುಗುಣವಾಗಿ ಬರತೊಡಗಿವೆ ಎನ್ನಬಹುದು. ಯಾರೋ ಒಬ್ಬ ಸದ್ಯದಲ್ಲೇ ತಿಮ್ಮಪ್ಪನಿಗೆ ಐಫೋನ್4 ಕಾಣಿಕೆ ಸಲ್ಲಿಸಿದರೆ ಏನೇನೂ ಆಶ್ಚರ್ಯವಿಲ್ಲ.
ಫ್ಲೂಯೆನ್ಸ್ ಪ್ರೋಫೈಲ್: ರೆನಾಲ್ಟ್ ಇಂಡಿಯಾ ಪರಿಚಯಿಸಿದ ಈ ಕಾರು ಪೆಟ್ರೊಲ್ ಮತ್ತು ಡೀಸಲ್ ಆವೃತ್ತಿಗಳಲ್ಲಿ ದೊರಕುತ್ತಿದೆ. ನೂತನ ಫ್ಲೂಯೆನ್ಸ್ ಕಾರಿನ ಪೆಟ್ರೊಲ್ ಆವೃತ್ತಿಗೆ ಸುಮಾರು 12.99 ಲಕ್ಷ ರು. ಮತ್ತು ಡೀಸಲ್ ಆವೃತ್ತಿಗೆ 14.40 ಲಕ್ಷ ರು. ಆಗಿದೆ.
ನೂತನ ಫ್ಲೂಯೆನ್ಸ್ ಕಾರು 1.5 ಲೀಟರ್ ವಿ4 ಡೀಸಲ್ ಎಂಜಿನ್ ಎಂಜಿನ್ ಮತ್ತು 2.0 ಮಲ್ಟಿ ಪಾಯಿಂಟ್ ಪೆಟ್ರೊಲ್ ಇಂಜೆಕ್ಷನ್ ಎಂಜಿನ್ ನಲ್ಲಿ ದೊರಕುತ್ತಿದೆ. ಡೀಸಲ್ ಆವೃತ್ತಿಯಲ್ಲಿ 6 ಸ್ಪೀಡ್ ಮ್ಯಾನುಯಲ್ ಟ್ರಾನ್ಸ್ ಮಿಷನ್ ಮತ್ತು ಪೆಟ್ರೊಲ್ ಆವೃತ್ತಿಯಲ್ಲಿ 6 ಸ್ಪೀಡ್ ಸಿವಿಟಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಇದೆ.
ಫ್ಲೂಯೆನ್ಸ್ ಕಾರು ಆಕರ್ಷಕವಾಗಿದ್ದು ಹಲವು ಫೀಚರ್ ಗಳೊಂದಿಗೆ ಬಂದಿದೆ. ಬಾಗಿರುವ ಸ್ಟೇರಿಂಗ್ ಮತ್ತು ಟೆಲಿಸ್ಕೋಪಿಕ್ ಫೀಚರ್ ಇಷ್ಟವಾಗುವಂತಿದೆ. ಬ್ಲೂಟೂಥ್ ಕನೆಕ್ಟಿವಿಟಿ, ಸ್ಮಾರ್ಟ್ ಆಕ್ಸೆಸ್ ಸಾಧನ, ಎಂಜಿನ್ ಸ್ಟಾರ್ಟ್ ಮತ್ತು ಸ್ಟಾಪ್ ಮಾಡುವ ಸ್ವಯಂಚಾಲೀತ ಕೀ, ಡ್ಯೂಯಲ್ ಏರ್ ಬ್ಯಾಗ್, ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ ಇತ್ಯಾದಿ ಫೀಚರ್ ಗಳಿವೆ.
ಆರಾಮದಾಯಕತೆ ವಿಷಯದಲ್ಲೂ ಫ್ಲೂಯೆನ್ಸ್ ಕಡಿಮೆಯೇನಿಲ್ಲ. ಐಷಾರಾಮಿ ಇಂಟಿರಿಯರ್, ಸ್ಟೋರೆಜ್ ಬಾಕ್ಸ್, ಟೀಕಪ್ ಹೋಲ್ಡರ್ ಸೇರಿದಂತೆ ಹಲವು ಅನುಕೂಲತೆಗಳಿವೆ. ಅಲಾಯ್ ವೀಲ್ ಕಾರಿಗೆ ಸೆಕ್ಸಿ ಲುಕ್ ನೀಡುತ್ತದೆ.












Click it and Unblock the Notifications