ವೈಷ್ಣೋದೇವಿಗೆ ಮುಂದಿನ ವರ್ಷ ರೈಲಿನಲ್ಲೇ ಹೋಗಬಹುದು

ಕತ್ರಾ ನಿಲ್ದಾಣ ಕೂಡ ಬಹುತೇಕ ಪೂರ್ಣಗೊಂಡಿದ್ದು, ಉಧಂಪುರ - ಕತ್ರಾ ನಡುವಿನ ರೈಲು ಹಳಿ ಮಾರ್ಗದ ಕೆಲಸ ಭರದಿಂದ ಸಾಗುತ್ತಿದೆ. ಈ ರೈಲು ಮಾರ್ಗ 2012ರ ಡಿಸೆಂಬರಿನಲ್ಲಿ ಪೂರ್ಣವಾಗಲಿದೆ ಎಂದು ಈ ಯೋಜನೆಯ ಉಸ್ತುವಾರಿ ವಹಿಸಿರುವ ಹಿರಿಯ ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.
ಜಮ್ಮು- ಉಧಂಪುರ ನಡುವಣ 53 ಕಿ.ಮೀ. ಮಾರ್ಗದಲ್ಲಿ ಈಗಾಗಲೇ ರೈಲು ಓಡಾಟ ಆರಂಭಗೊಂಡಿದೆ. ಉಧಂಪುರ -ಕತ್ರಾ ನಡುವಿನ 25 ಕಿ.ಮೀ. ರೈಲು ಹಳಿ ಪೂರ್ಣಗೊಂಡರೆ ಕತ್ರಾವರೆಗೆ ರೈಲು ಸಂಚಾರ ಸಾದ್ಯವಾಗುತ್ತದೆ ಎಂದು ಅವರು ಹೇಳಿದರು.
ಕತ್ರಾ ಮೂಲ ಶಿಬಿರದಿಂದ ಸುಮಾರು 10 ದಶಲಕ್ಷ ಯಾತ್ರಾರ್ಥಿಗಳು ಪ್ರತಿ ವರ್ಷ ವೈಷ್ಣೋದೇವಿಗೆ ತೆರಳುತ್ತಾರೆ. ಕತ್ರಾ ಯೋಜನೆಗೆ ಸುಮಾರು 960 ಕೋಟಿ ರುಪಾಯಿ ವ್ಯಯವಾಗುವುದೆಂದು ಅಂದಾಜಿಸಲಾಗಿದೆ. ಪೂರ್ಣಗೊಳ್ಳಲಿರುವ 25 ಕಿ.ಮೀ. ರಸ್ತೆಯಲ್ಲಿ 7 ಸುರಂಗಗಳಿವೆ. ಒಟ್ಟು 30 ಸಣ್ಣ ಮತ್ತು ದೊಡ್ಡ ಸೇತುವೆಗಳಿವೆ.












Click it and Unblock the Notifications