ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಂತನ ಶಿಬಿರ: ಕಾಳಧನದ ವಿರುದ್ಧ ಕಾಂಗ್ರೆಸ್ ಕಸರತ್ತು

By Srinath
|
Google Oneindia Kannada News

Sonia Gandhi
ನವದೆಹಲಿ, ಜೂನ್ 13: ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ಮುನ್ನ ಜುಲೈ ಆರಂಭದಲ್ಲಿ ಕಾಂಗ್ರೆಸ್ ಪಕ್ಷವು ಮಹತ್ವದ ಚಿಂತನ ಶಿಬಿರ' ನಡೆಸುವ ಆಲೋಚನೆಯಲ್ಲಿದೆ. ರಾಜಸ್ತಾನದ ಮೌಂಟ್ ಅಬು ಗಿರಿಧಾಮದಲ್ಲಿ ಉದ್ದೇಶಿತ ಸಮಾವೇಶವನ್ನು ನಡೆಸುವ ಬಗ್ಗೆ ಗಂಭೀರವಾಗಿ ಚಿಂತಿಸಲಾಗುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಗಾಂಧಿವಾದಿ ಅಣ್ಣಾ ಹಜಾರೆ ಹಾಗೂ ಬಾಬಾ ರಾಮದೇವ್ ಅವರು ಭ್ರಷ್ಟಾಚಾರ ನಿಗ್ರಹ ಮತ್ತು ವಿದೇಶದಲ್ಲಿರುವ ಭಾರತೀಯರ ಕಪ್ಪು ಹಣವನ್ನು ವಾಪಸ್ ತರಬೇಕೆಂದು ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆಗಳೇ ಈ ಚಿಂತನ ಶಿಬಿರದ ಆಲೋಚನೆಗೆ ದಾರಿ ಮಾಡಿಕೊಟ್ಟಿವೆ ಎಂದು ಮೂಲಗಳು ವಿವರಿಸಿವೆ.

ಎಂಟು ವರ್ಷಗಳ ನಂತರ ಮತ್ತೆ 2003ರಲ್ಲಿ ಇಂತಹುದೇ ಸಮಾವೇಶವನ್ನು ಶಿಮ್ಲಾದಲ್ಲಿ ನಡೆಸಲಾಯಿತು. ಆಗ ಪಕ್ಷವು ದೇಶದಲ್ಲಿನ ಜಾತ್ಯತೀತ ಶಕ್ತಿಸಂಚಯವನ್ನೇ ಮುಖ್ಯ ವಿಷಯವನ್ನಾಗಿಸಿಕೊಂಡಿತ್ತು. ಪರಿಣಾಮ 2004ರಲ್ಲಿ ಮತ್ತೆ ಅಧಿಕಾರ ಗಳಿಸಿತ್ತು. ನವೆಂಬರ್ ವೇಳೆಗೆ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು ಅದಕ್ಕೂ ಮುನ್ನವೇ ಉತ್ತರ ಪ್ರದೇಶ ಸೇರಿದಂತೆ ಇತರೆಡೆ ನಡೆಯುವ ವಿಧಾನಸಭಾ ಚುನಾವಣೆಗಳ ಬಗ್ಗೆಗೂ ಅಲ್ಲಿ ಚಿಂತಿಸುವುದು ಪಕ್ಷದ ಧ್ಯೇಯೋದ್ದೇಶವಾಗಿದೆ.

ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿಷಯಗಳು ಸದ್ಯಕ್ಕೆ ಕಾಂಗ್ರೆಸ್ ಪಕ್ಷಕ್ಕೆ ತೀರಾ ಸವಾಲಿನ ಸಂಗತಿಗಳಾಗಿ ಪರಿಣಮಿಸಿವೆ. ಪಕ್ಷದೊಳಗಿನ ಹಿರಿಯ ಮತ್ತು ಕಿರಿಯ ನಾಯಕರು ಇನ್ನಿಲ್ಲದಂತೆ ಪಕ್ಷದ ಇಮೇಜನ್ನು ಉಳಿಸಿಕೊಳ್ಳುವ ಪ್ರಯತ್ನಗಳಲ್ಲಿ ನಿರತರಾಗಿದ್ದಾರೆ. ಇವು ರಾಷ್ಟ್ರೀಯ ವಿಷಯಗಳೂ ಆಗಿರುವುದರಿಂದ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರು ಶಿಬಿರವನ್ನು ಶೀಘ್ರವೇ ನಡೆಸುವುದಕ್ಕೆ ಸೈ ಎಂದಿದ್ದಾರೆ ಎಂದು ಮೂಲಗಳು ಹೇಳಿವೆ.

English summary
After wrapping up the five-state Assembly polls on May 13, the Congress is likely to hold a brainstorming session next month at Mount Abu in Rajasthan. This would be the third brainstorming session under Sonia leadership.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X