ಸಕಲೇಶಪುರ ಠಾಣೆ ಪೇದೆಗಳ ಸರಸ ಎಂಎಂಎಸ್

ಇಷ್ಟಕ್ಕೂ ಈ ವಿಡಿಯೋ ತುಣುಕುಗಳು ಈಗ ಯಾಕೆ ಹೊರಬಿದ್ದಿದೆ ಗೊತ್ತಿಲ್ಲ. ಪೇದೆಗಳು ಸಕಲೇಶಪುರ ಠಾಣೆಯಿಂದ ವರ್ಗಾವಣೆಗೊಂಡಿದ್ದಾರೆ. ಆದರೆ, ಎಂಎಂಎಸ್ ಮೂಲಕ ಇನ್ನೂ ಸಕಲೇಶಪುರದಲ್ಲಿ ಕುಖ್ಯಾತಿ ಗಳಿಸುತ್ತಿದ್ದಾರೆ. ಕರ್ತ್ಯವ್ಯ ನಿರತ ಗಂಡು ಪೇದೆ ಕಾಮೋದ್ರೇಕನಾಗಿ ಹೆಣ್ಣು ಪೇದೆ ಮೇಲೆರಗುವ ದೃಶ್ಯಗಳಿವೆ. ಪೇದೆಗಳ ಸರಸ ದೃಶ್ಯಗಳು ಕೆಲವೊಮ್ಮೆ ಸೆನ್ಸಾರ್ ಆಗಿ, ಕೆಲವೊಮ್ಮೆ ಬ್ಲರ್ ಆಗಿ ಮತ್ತೊಮ್ಮೆ ಸಂಪೂರ್ಣ ಸ್ಪಷ್ಟವಾಗಿ ಕಿರುತೆರೆಯಲ್ಲಿ ರಾರಾಜಿಸುತ್ತಿದ್ದು, ಟಿವಿ ಚಾನೆಲ್ ಗಳು ಪೈಪೊಟಿಯಿಂದ ಪ್ರಸಾರ ಮಾಡುತ್ತಿವೆ.
ಡಿವೈಎಸ್ಪಿ ಕಚೇರಿಯ ಮೊದಲ ಮಹಡಿಯಲ್ಲಿ ನಡೆದಿರುವ ಈ ರಾಸಲೀಲೆಯನ್ನು ಸಣ್ಣ ಹ್ಯಾಂಡಿ ಕ್ಯಾಮ್ ನಿಂದ ಚಿತ್ರೀಕರಿಸಿರುವ ಸಾಧ್ಯತೆಯಿದೆ. ಬೆದೆಗೆ ಬಿದ್ದ ಪೇದೆಗಳ ತುಂಟಾಟ, ಓಡಾಟದಲ್ಲಿ ನಾಟಕೀಯತೆ ಎದ್ದು ಕಾಣುತ್ತಿದ್ದು, ಬಲವಂತವಾಗಿ ಏನು ನಡೆದಂತಿಲ್ಲ. ರಾಸಲೀಲೆ ಕಾರಣ ತಪ್ಪು ಒಪ್ಪುಗಳ ಬಗ್ಗೆ ಯಾರಿಗೂ ತಲೆ ಕೆಡಿಸಿಕೊಂಡಿಲ್ಲ. ಮೊಬೈಲ್ ನಿಂದ ಮೊಬೈಲ್ ಗೆ ಎಂಎಂಎಸ್ ಹರಿದಾಡುವಂತೆ ಮಾಡುವಲ್ಲಿ ಪಡ್ದೆಗಳು ಯಶಸ್ವಿಯಾಗಿದ್ದಾರೆ.
ಈ ನಾಚಿಕೆಗೇಡಿನ ಪ್ರಸಂಗದಿಂದ ಸಕಲೇಶಪುರದ ಜನತೆ ಮುಜುಗರ ಅನುಭವಿಸುತ್ತಿದ್ದು, ಪೇದೆಗಳಿಗೆ ಕೊಟ್ಟ ಶಿಕ್ಷೆ ಕಡಿಮೆಯಾಯ್ತು ಎಂದು ಹಲಬುತ್ತಿದ್ದಾರೆ. ಎಂಎಂಎಸ್ ಬಗ್ಗೆ ಸಕಲೇಶಪುರ ಪೊಲೀಸ್ ಸ್ಟೇಷನ್ ನಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.












Click it and Unblock the Notifications