ನನಗೆ ಗನ್ ಹಿಡಿಯೊಕ್ಕೆ ಬರೊಲ್ಲ: ಸಂತೋಷ್ ಹೆಗಡೆ

'ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿಯೂ ಈ ಭೇದ ಇತ್ತು. ನಾವು ತೀವ್ರಗಾಮಿಗಳಲ್ಲ. ನಾವು ಗಾಂಧೀಜಿ ಅವರ ತತ್ವಗಳಲ್ಲಿ ನಂಬಿಕೆ ಇಟ್ಟವರು. ನಮಗೆ ಗನ್ ಹಿಡಿಯಲು ಬರುವುದಿಲ್ಲ' ಎಂದು ಅವರು ಮಾರ್ಮಿಕವಾಗಿ ಹೇಳಿದರು.
ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ನಿಂತಿರುವ ಬಾಬಾ ರಾಮದೇವ್ 11 ಸಾವಿರ ಯುವಕರ ಸೈನ್ಯ ಕಟ್ಟುವುದಾಗಿ ಹೇಳಿರುವ ಕುರಿತು ಸುದ್ದಿಗಾರರು ಗಮನ ಸೆಳೆದಾಗ ಈ ರೀತಿ ಪ್ರತಿಕ್ರಿಯಿಸಿದ ಸಂತೋಷ್ ಹೆಗಡೆ, 'ನಮ್ಮ ದೇಶ ಹುಟ್ಟಿದ್ದೇ ಅಹಿಂಸಾತ್ಮಕ ಚಳವಳಿಯಿಂದ' ಎಂದರು.
ರಾಮದೇವ್ ಚಳವಳಿ ದೊಡ್ಡದಿದೆ, ಅವರ ಬೇಡಿಕೆಗಳಿಗೆಲ್ಲ ಬೆಂಬಲ ಕೊಡಲಾಗದು. ಉದಾಹರಣೆಗೆ ಅವರ ಬೇಡಿಕೆಯಂತೆ ಹಿಂದಿ ಭಾಷೆಗೆ ಪ್ರಾಧಾನ್ಯ ನೀಡಿದರೆ ದೇಶ ಇಬ್ಭಾಗವಾಗುತ್ತದೆ ಎಂದರು. ಸರಕಾರದಲ್ಲಿ ಜನಪರವಾದ ಬಿಲ್‌ಗಳು ಪಾಸಾಗುವುದಿಲ್ಲ. ಶಾಸಕರ ಸಂಬಳ ಹೆಚ್ಚಳ, ಅವರ ಊಟದ ಬಿಲ್, ಟೀ ಕಾಫಿ ಬಿಲ್, ಪ್ರವಾಸದ ಬಿಲ್‌ಗಳೆಲ್ಲ ಸರಾಗವಾಗಿ ಪಾಸಾಗುತ್ತವೆ ಎಂದು ಮತ್ತೂಂದು ಪ್ರಶ್ನೆಗೆ ಅವರು ಉತ್ತರಿಸಿದರು












Click it and Unblock the Notifications