ಬಾರ್ ನಲ್ಲಿ ಮಾನಿನಿಯರ ನೇಮಕಕ್ಕೆ ರೇಣುಕಾ ಅಸ್ತು

ಸಣ್ಣ ಫ್ಲಾಶ್ ಬ್ಯಾಕ್ : ಬಾರ್ ಗಳಲ್ಲಿ ಮಹಿಳೆಯರನ್ನು ಪರಿಚಾರಿಕೆ ಕೆಲಸಕ್ಕೆ ನೇಮಿಸಿಕೊಂಡು ಬೇರೆ ಬೇರೆ ಗುಪ್ತ ಕೆಲಸಗಳನ್ನು ಮಾಡಿಸಿಕೊಳ್ಳುವ ಬಾರ್ ಪಬ್ ವಿರುದ್ಧ ನಗರ ಪೊಲೀಸರು ದಾಳಿ ನಡೆಸಿದ್ದರು. ಆಗ, ಬಾರ್ ಮಾಲೀಕರು ಸಚಿವ ರೇಣುಕಾ ಅವರ ಮೊರೆ ಹೊಕ್ಕರು. ಬಾಲ್ ಮಾಲೀಕರಿಗೆ ಅಭಯ ನೀಡಿದ ಸಚಿವರು, ಪೊಲೀಸರ ಎಲ್ಲ ಕ್ರಮಗಳಿಗೆ ವ್ಯತಿರಿಕ್ತವಾಗಿ ಆದೇಶಗಳನ್ನು ಹೊರಡಿಸುತ್ತಿದ್ದಾರೆ. ಪಬ್ ಅವಧಿ, ಬಾರ್ ವೆಂಡರ್ ನೇಮಕಾತಿ, ಬಾರ್ ಗರ್ಲ್ಸ್ ಗೆ ಡ್ರೆಸ್ ಕೋಡ್, ಲೈಸನ್ಸ್ ವಿಷಯ ಎಲ್ಲದರಲ್ಲೂ ಸಚಿವರು ಹಾಗೂ ಪೊಲೀಸರ ನಡುವೆ ತಿಕ್ಕಾಟ ನಡದೇ ಇದೆ. ಹೊಸ ಪೊಲೀಸ್ ಅಯುಕ್ತ ಮಿರ್ಜಿ ಸಾಹೇಬ್ರ ನಡುವೆ ರೇಣುಕಾ ಅದೇ ಪ್ರಯೋಗ ನಡೆಸಿದ್ದಾರೆ. ಮುಂದೇನು ಆಗುವುದೋ ಕಾದು ನೋಡೋಣ.
ಸಚಿವ ಆದೇಶ ಹೀಗಿದೆ : ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬರುವು ಸುಮಾರು 48 ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಇನ್ನು ಮುಂದೆ ಮಹಿಳೆಯರನ್ನು ನೇಮಿಸಿಕೊಳ್ಳಲು ಅನುಮತಿ ಸಿಕ್ಕಿದೆ. ಆದರೆ ಇಲ್ಲಿ ಮಹಿಳೆಯರು ಮದ್ಯ ಸರಬರಾಜು ಮಾಡಲು ಮಾತ್ರ ಸೀಮಿತವಾಗ ಬೇಕೇ ಹೊರತು ಇತರ "ಕೆಲಸಗಳಿಗೆ" ಬಳಸಿಕೊಂಡರೆ ಅಂತಹ ರೆಸ್ಟೋರೆಂಟ್ ವಿರುದ್ದ ಕಠಿಣ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.
ಮದ್ಯ ಸರಬರಾಜು ಮಾಡುವ ಮಹಿಳೆಯರಿಗೆ ಡ್ರೆಸ್ ಕೋಡ್ ಇಲ್ಲ. ಸಭ್ಯ ಹಾಗೂ ಅಸಭ್ಯ ಉಡುಪುಗಳ ಬಗ್ಗೆ ಸರಿಯಾದ ಸ್ಪಷ್ಟನೆ ಇನ್ನೂ ಅಬಕಾರಿ ಇಲಾಖೆಗೆ ಸಿಕ್ಕಿಲ್ಲ. ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಾರೆ ಸಚಿವ ರೇಣುಕಾ. ಹೈಕೋರ್ಟ್ ಆದೇಶದಂತೆ ಅಬಕಾರಿ ಇಲಾಖೆಯ ಮಾರ್ಗದರ್ಶನದಲ್ಲಿ ತಿದ್ದುಪಡಿ ತರಲಾಗಿದೆ. ಇಂತಹ ರೆಸ್ಟೋರೆಂಟ್ ಗಳಲ್ಲಿ ಲೈವ್ ಬ್ಯಾಂಡ್ ಗೆ ಅವಕಾಶವಿಲ್ಲ ಎಂದು ರೇಣುಕಾಚಾರ್ಯ ಸ್ಪಷ್ಟ ಪಡಿಸಿದ್ದಾರೆ.
ಬಾರ್ ವೆಂಡರ್ ಗಳು ಲೈವ್ ಬ್ಯಾಂಡ್ ನರ್ತಕಿ ಯಾಗಲು ಎಷ್ಟು ಹೊತ್ತು ಬೇಕು. ಪರಿಚಾರಕಿಯರ ಮೇಲೆ ಲೈಂಗಿಕ ಕಿರುಕುಳ, ಯಾವುದೇ ಅಹಿತಕರ ಘಟನೆ ನಡೆದರೆ ಪೊಲೀಸ್ ಇಲಾಖೆಯನ್ನು ದೂರಲಾಗುತ್ತದೆ. ಎಲ್ಲಾ ಬಾರ್ ಗಳಲ್ಲಿ ಸಿಸಿ ಕೆಮೆರಾ ಅಳವಡಿಸಲು ಸೂಚಿಸಲಾಗಿದೆ. ಇದನ್ನು ಅಬಕಾರಿ ಅಧಿಕಾರಿಗಳು ನೋಡಿಕೊಳ್ಳಬೇಕಾಗುತ್ತದೆ. ಪಬ್ ಗಳ ಮೇಲೆ ಅಬಕಾರಿ ಇಲಾಖೆ ದಾಳಿ ನಡೆಸಲು ಮುಂದಾಗುವುದಿಲ್ಲ. ಪೊಲೀಸ್ ಇಲಾಖೆಗೆ ಎಲ್ಲವನ್ನು ವಹಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಜ್ಯೋತಿಪ್ರಕಾಶ್ ಮಿರ್ಜಿ ಹೇಳಿದ್ದಾರೆ.












Click it and Unblock the Notifications