• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಪ್ಪದೇ ಬನ್ನಿ, ಭಕ್ತ ಪ್ರಹ್ಲಾದ - ಸೂತ್ರದ ಬೊಂಬೆಯಾಟ

By Shami
|

ಭಾರತೀಯ ಪೌರಾಣಿಕ ಕಥಾವಸ್ತುಗಳನ್ನು ಆಧರಿಸಿದ ಬೊಂಬೆಯಾಟಗಳನ್ನು ನೀವು ನೋಡಿದ್ದೀರೇನು? ಪಪ್ಪೆಟ್ ಶೋ ಪ್ರದರ್ಶನಕ್ಕೆ ಹೆಸರುವಾಸಿಯಾದ ಧಾತು ಸಂಸ್ಥೆ ಇಂದು ಗುರುವಾರ ಬೆಂಗಳೂರಿನಲ್ಲಿ ಒಂದು ಪ್ರದರ್ಶನ ನೀಡುತ್ತಿದೆ. ವಿವರಗಳು ಈ ಕೆಳಕಂಡಂತಿವೆ. ನೋಡಿ, ಆನಂದಿಸಿ. ನನಗಂತೂ ಬರಲು ಸಾಧ್ಯವಾಗುತ್ತಿಲ್ಲ.

* ವಿಶ್ವನಾಥ್ ಹುಲಿಕಲ್, ಉತ್ತರ ಕ್ಯಾಲಿಫೋರ್ನಿಯ

* ಭಕ್ತ ಪ್ರಹ್ಲಾದ - ಸೂತ್ರದ ಬೊಂಬೆಯಾಟ

* ಪ್ರಸ್ತುತಿ: ಭಾರತೀಯ ವಿದ್ಯಾ ಭವನ ಮತ್ತು ಇನ್ ಫೋಸಿಸ್ ಪ್ರತಿಷ್ಠಾನ

* ನಿರ್ದೇಶನ: ಅನುಪಮ ಹೊಸಕೆರೆ

* ದಿನಾಂಕ: ಜೂನ್ 9, 2011

* ದಿನ: ಗುರುವಾರ

* ಸಮಯ: ಸಂಜೆ 6.00 ರಿಂದ 7.30 ರವರೆಗೆ

* ಸ್ಥಳ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್

ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ

ಬೆಂಗಳೂರು - 560004

ಸಂಪರ್ಕ: ಧಾತು 6568 3396 ಅಥವ dhaatu@gmail.com ಸರ್ವರಿಗೂ ಸುಸ್ವಾಗತ

ಕಥೆ: ಮಹರ್ಷಿ ವೇದವ್ಯಾಸರು ರಚಿಸಿದ ಭಾಗವತದಿಂದ ಈ ಕಥೆಯನ್ನು ಆರಿಸಲಾಗಿದೆ. ಸ್ವಾರ್ಥಿ, ದುರಹಂಕಾರಿ ಮತ್ತು ಶಕ್ತಿಶಾಲಿ ರಾಕ್ಷಸರ ವಂಶದಲ್ಲಿ ಪ್ರಹ್ಲಾದ ಎಂಬ ಮಗುವಿನ ಜನನವಾಗುತ್ತದೆ. ಬಾಲ್ಯದಿಂದಲೇ ವಿಷ್ಣುವಿನ ಪರಮ ಭಕ್ತನಾದ ಪ್ರಹ್ಲಾದ, ದುಷ್ಟಶಕ್ತಿಗಳ ನಿರ್ಮೂಲನಕ್ಕೆ ಕಾರಣಕರ್ತನಾಗುತ್ತಾನೆ. ಕಂಬದೊಳಗಿಂದ ನರಸಿಂಹ ಪ್ರತ್ಯಕ್ಷವಾಗಿ ಅಸುರನ ವಧೆ ಮಾಡುವ ಮೂಲಕ, ಕಥೆ ರೋಮಾಂಚಕ ಮುಕ್ತಾಯವನ್ನು ಮುಟ್ಟುತ್ತದೆ. ಪ್ರಹ್ಲಾದನ ಈ ರೋಚಕ ಕಥೆ ಅನೇಕ ರೀತಿಯ ಬೊಂಬೆಯಾಟಗಳಿಗೆ ವಸ್ತುವಾಗಿದೆ.

ಧಾತು ಬೊಂಬೆಯಾಟ ಸಂಸ್ಥೆ ಬೆಂಗಳೂರಿನ ಪ್ರಮುಖ ಬೊಂಬೆಯಾಟ ಸಂಸ್ಥೆಗಳಲ್ಲಿ ಒಂದು. ಈ ಸಂಸ್ಥೆ ಹಂಪಿ ಉತ್ಸವ, ಸುವರ್ಣ ಕರ್ನಾಟಕ ಮಹೋತ್ಸವ, ಬೆಂಗಳೂರು ಅಂತರರಾಷ್ಟ್ರೀಯ ಕಲಾ ಉತ್ಸವ, ಸಂಸ್ಕೃತ ಪುಸ್ತಕ ಮೇಳ ಮತ್ತು "ರಂಗ ಶಂಕರ"ದ ರಂಗ ಉಗಾದಿ ಕಾರ್ಯಕ್ರಮಗಳಲ್ಲಿ ಪ್ರದರ್ಶನಗಳನ್ನು ನೀಡಿದೆ.

ಧಾತುವಿನ ನಿರ್ದೇಶಕಿ ಶ್ರೀಮತಿ ಅನುಪಮ ಹೊಸಕೆರೆಯವರು ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಸೀನಿಯರ್ ಫೆಲೋಶಿಪ್‌ಗೆ ಭಾಜನರಾಗಿದ್ದಾರೆ. ಶ್ರೀಮತಿಯವರು ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ ಮತ್ತು ಭಾಗವತಗಳಿಂದ ಮೌಲಿಕವಾದ ಕಥೆಗಳನ್ನು ಆರಿಸಿಕೊಂಡು, ಕರ್ನಾಟಕದ ಸುಂದರ ಮತ್ತು ಶಾಸ್ತ್ರೀಯ ಬೊಂಬೆಯಾಟಗಳ ಮೂಲಕ ಇಡೀ ಕುಟುಂಬಕ್ಕೆ ಮನರಂಜನೆಯನ್ನು ಒದಗಿಸುವುದರಲ್ಲಿ ಪರಿಣತರಾಗಿದ್ದಾರೆ.

ಧಾತು ಬೊಂಬೆಯಾಟಗಳು ಸೂಕ್ಷ್ಮ ವಿವರಗಳು ಮತ್ತು ತಾಂತ್ರಿಕ ಪರಿಪಕ್ವತೆಯಿಂದ ಭೂಯಿಷ್ಠವಾಗಿದ್ದು, ವಿಸ್ತೃತರೂಪದಲ್ಲಿ ಪ್ರದರ್ಶನಗೊಳ್ಳುತ್ತವೆ. ಧಾತು ಸಂಸ್ಥೆಯ ಇತರ ಬೊಂಬೆಯಾಟಗಳನ್ನು ಹೆಸರಿಸುವುದಾದರೆ, ವಿಜಯನಗರ ವೈಭವ (ಕನ್ನಡ), ಹರಿಶ್ಚಂದ್ರ (ಕನ್ನಡ ಮತ್ತು ಇಂಗ್ಲೀಷ್), ಅಷ್ಟಾವಕ್ರ (ಕನ್ನಡ, ಇಂಗ್ಲೀಷ್ ಮತ್ತು ಸಂಸ್ಕೃತ), ಧರ್ಮವ್ಯಾಧ (ಇಂಗ್ಲೀಷ್), ನಳ ದಮಯಂತಿ ಮತ್ತು ಶೂರ್ಪಣಖ ಪ್ರಸಂಗ.

ಧಾತು ಸಂಸ್ಥೆಯು ಭಾರತೀಯ ಬೊಂಬೆಯಾಟಗಳಂತಹ ಶ್ರೀಮಂತ ಪ್ರಕಾರವನ್ನು ಬೆಂಗಳೂರಿನ ಮಹಾಜನತೆಗೆ ಪರಿಚಯಿಸಲೋಸುಗ, ಪ್ರತಿ ವರ್ಷವೂ ಧಾತು ಬೊಂಬೆಯಾಟ ಉತ್ಸವವನ್ನು ಏರ್ಪಡಿಸುತ್ತಿದೆ. ಪ್ರಸ್ತುತ ವರ್ಷದಲ್ಲಿ ಈ ಉತ್ಸವ ಡಿಸೆಂಬರ್ 29, 30 ಮತ್ತು ಜನವರಿ 1, 2012 ರಲ್ಲಿ ನಡೆಯಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bhakta Prahlada – A String Puppet Theater by Anumapama Hoskere, Dhaatu. Show in Bangalore on 9 June 2011. Presented by: Bharatiya Vidya Bhavan & Infosys Foundation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more