ಮಾತೃಪಕ್ಷಕ್ಕೆ ವಾಪಸಾದ ಉಮಾ ಭಾರತಿ
ನವದೆಹಲಿ,
ಜೂನ್ 7: ಬಿಜೆಪಿಯ ವಿವಾದಿತ ನಾಯಕಿ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಅವರು 6 ವರ್ಷಗಳ ಬಳಿಕ ಮಾತೃಪಕ್ಷಕ್ಕೆ ಮಂಗಳವಾರ ಮರಳಿದ್ದಾರೆ. ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ಅವರು ಹೂಗುಚ್ಛ ನೀಡಿ ಉಮಾ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು. 2005ರ ಡಿಸೆಂಬರ್ ನಲ್ಲಿ ಪಕ್ಷವು ಅವರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಉಚ್ಛಾಟಿಸಿತ್ತು. id="toptextpromo">ಇತ್ತೀಚೆಗೆ
ಲಕ್ನೋದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಮಿತಿ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಮುಂದಿನ ವರ್ಷ ರಾಜ್ಯ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಉತ್ತರ ಪ್ರದೇಶದಲ್ಲಿ ಪಕ್ಷದ ಪರ ಪ್ರಚಾರ ಕಾರ್ಯಭಾರವನ್ನು ಉಮಾಗೆ ವಹಿಸಲಾಗಿದೆ ಎಂದು ಗಡ್ಕರಿ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಮೊಹಮದ್
ಅಲಿ ಜಿನ್ನಾ ಅವರನ್ನು ಎಲ್.ಕೆ. ಅಡ್ವಾಣಿ ಅವರು ತಮ್ಮ ಪುಸ್ತಕದಲ್ಲಿ ಹಾಡಿಹೊಗಳಿದ್ದನ್ನು ಉಮಾ ತೀವ್ರವಾಗಿ ಖಂಡಿಸಿದ್ದರು. ಅಡ್ವಾಣಿ ಅವರನ್ನು ಪಕ್ಷದಿಂದ ಉಚ್ಛಾಟಿಸುವಂತೆಯೂ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷವು ಅವರನ್ನು ಉಚ್ಛಾಟಿಸಿತ್ತು. ಬಳಿಕ ಉಮಾ ಭಾರತೀಯ ಜನಶಕ್ತಿ ಪಕ್ಷವನ್ನು ಸ್ಥಾಪಿಸಿದ್ದರು.











Click it and Unblock the Notifications