ಕುಮಾರಿ ಜಯಲಲಿತಾ ಮತ್ತೆ ಸರ್ವಾಭರಣ ಭೂಷಿತೆ
ಚೆನ್ನೈ,
ಜೂನ್ 7: ಪಕ್ಷದ ಕಾರ್ಯಕರ್ತರ ಒತ್ತಡಕ್ಕೆ ಮತ್ತೆ ಮಣಿದಿರುವುದಾಗಿ ಅಣ್ಣಾ ಡಿಎಂಕೆ ಅಧಿನಾಯಕಿ ಜಯಲಲಿತಾ ಹೇಳಿಕೊಂಡಿದ್ದಾರೆ. ಈ ಬಾರಿ ತಮ್ಮ ಅಭಿಮಾನಿಗಳು 'ತಾವು ಆಭರಣ ತೊಡಲೇಬೇಕು' ಎಂದು ಒತ್ತಾಯಿಸಿದ್ದರಿಂದ ಇನ್ನು ಮುಂದೆ ಆಭರಣ ತೊಡುವೆ ಎಂದು 63 ವರ್ಷದ ಜಯಾಲಲಿತಾ ಘೋಷಿಸಿದ್ದಾರೆ. id="toptextpromo">ಅಂದಹಾಗೆ,
ಈ ಹಿಂದೆ 1997ರಲ್ಲಿ ಡಿಎಂಕೆ ಸರಕಾರ ಜಯಾ ಅವರ ಆಭರಣಗಳನ್ನು ಮುಟ್ಟುಗೋಲು ಹಾಕಿಕೊಂಡಾಗ ಇನ್ನೆಂದೂ ಆಭರಣ ತೊಡುವುದಿಲ್ಲ ಎಂದು ಅವರು ಶಪಥ ಮಾಡಿದ್ದರು. ಸಾವಿರಾರು ಬೆಲೆಬಾಳುವ ಸೀರೆಗಳು, ಆಭರಣಗಳು, ಚಪ್ಪಲಿಗಳನ್ನು ಹೊಂದಿದ್ದಾರೆಂದು ಆದಾಯ ತೆರಿಗೆ ಇಲಾಖೆ ಜಯಾ ನಿವಾಸದ ಮೇಲೆ ದಾಳಿ ಮಾಡಿದಾಗ ದೊಡ್ಡ ಸುದ್ದಿಯಾಗಿತ್ತು. id='are-slot-1' class='oiad oi-axt oiadv'> id='top-searched-articles'>'ಮೇ
13 ರಂದು ಚುನಾವಣೆ ಫಲಿತಾಂಶವು ಪಕ್ಷದ ಪರ ವಾಲುತ್ತಿದ್ದಂತೆ ಅನೇಕ ಕಾರ್ಯಕರ್ತರು ಮತ್ತೆ ಆಭರಣ ತೊಡುವಂತೆ ದುಂಬಾಲು ಬಿದ್ದರು. ಇಲ್ಲದಿದ್ದರೆ ಆತ್ಮಾಹುತಿ ಮಾಡಿಕೊಳ್ಳುವ ಬೆದರಿಕೆ ಹಾಕಿದರು. ಸಂತೋಷದ ಸಂದರ್ಭದಲ್ಲಿ ಇಂತಹ ಅನಾಹುತಗಳಾಗುವುದನ್ನು ನಾನು ಇಚ್ಛಿಸುವುದಿಲ್ಲ. ಆದ್ದರಿಂದ ಅನಿವಾರ್ಯವಾಗಿ ಆಭರಣ ತೊಟ್ಟಿರುವೆ' ಎಂದು ಸುದ್ದಿಗೋಷ್ಠಿಯಲ್ಲಿ ಜಯಾ ತಿಳಿಸಿದ್ದಾರೆ.











Click it and Unblock the Notifications