ಬಾಬಾ ರಾಮದೇವ್ ಮೇಲೆ ಕಾಂಗ್ರೆಸ್ ಸೇಡಿನ ಕ್ರಮ?

Ramdev
ನವದೆಹಲಿ ಜೂ 7: ತನ್ನ ಮೇಲೆ ಸವಾಲು ಹಾಕಿದ ಯೋಗ ಗುರು ಬಾಬಾ ರಾಮದೇವ್ ಮೇಲೆ ಕಾಂಗ್ರೆಸ್ ಸೇಡಿನ ರಾಜಕಾರಣ ನಡೆಸಲು ಮುಂದಾಗಿದೆ ಎನ್ನಲಾಗಿದೆ. ರಾಮದೇವ್ ಹೊಂದಿರುವ ಆಸ್ತಿಯ ಮೇಲೆ ಸಿಬಿಐ ಮತ್ತು ಆದಾಯ ತೆರಿಗೆ ದಾಳಿ ನಡೆಸಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ ಎನ್ನುವ ಅಂಶ ಬೆಳಕಿಗೆ ಬಂದಿದೆ.

ಹರಿದ್ವಾರದ ಪತಂಜಲಿ ಯೋಗಾಶ್ರಮ ಇರುವ ಜಾಗದ ಬಗ್ಗೆ ಭೂವಿವಾದ ನ್ಯಾಯಾಲಯದ ಮೆಟ್ಟಲೇರಿದ್ದು ಇದನ್ನು ಬಳಸಿಕೊಂಡು ಕೇಂದ್ರ ಸರಕಾರ ರಾಮದೇವ್ ವಿರುದ್ದ ತಿರುಗಿ ಬೀಳಲು ಪ್ರಯತ್ನ ನಡೆಸುತ್ತಿದೆ. ಅಲ್ಲದೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಗುಪ್ತ ಮಾತುಕತೆ ನಡೆಸಿದ್ದು ಯಾವುದೇ ಕ್ಷಣದಲ್ಲಿ ದಾಳಿ ನಡೆಸಲು ಮುಂದಾಗಿದೆ ಎಂದು ಕೂಡ ತಿಳಿದು ಬಂದಿದೆ.

ಯೋಗಾಶ್ರಮ, ಆಯುರ್ವೇದಿಕ್ ಔಷಧ ತಯಾರಿಕೆ ಕಂಪನಿ ಸೇರಿದಂತೆ ಎಲ್ಲೆಲ್ಲಿ ಅಕ್ರಮ ನಡೆದಿದೆ ಎಂದು ಪತ್ತೆ ಹಚ್ಚಲು ತನಿಖೆಗೆ ಮುಂದಾಗಿದೆ. ಇದಲ್ಲದೆ ದೇಶ ಮತ್ತು ವಿದೇಶಗಳಲ್ಲಿ ಬಾಬಾ ಹೊಂದಿರುವ ಟ್ರಸ್ಟ್ ದೇಣಿಗೆ ಸಂಗ್ರಹ,ಆದಾಯ, ಶೇರು ಬಂಡವಾಳ ಸೇರಿದಂತೆ ಇವರಿಗೆ ಸಂಬಂಧ ಪಟ್ಟ ಎಲ್ಲಾ ವಹಿವಾಟುಗಳ ಲೆಕ್ಕಪತ್ರಗಳ ಪರಿಶೀಲನೆ ನಡೆಸಲು ಕೇಂದ್ರ ಚಿಂತನೆ ನಡೆಸಿದೆ ಎಂದು ಉನ್ನತ ಮೂಲಗಳ ವರದಿ ಆಧಾರಿಸಿ ವಿವಿಧ ವಾರ್ತಾ ಸಂಸ್ಥೆಗಳು ವರದಿ ಮಾಡುತ್ತಿವೆ.

ಪತಂಜಲಿ ಯೋಗಾಶ್ರಮದಲ್ಲಿ ತಯಾರಾಗುವ ಆಯುರ್ವೇದಿಕ್ ಔಷಧಗಳಿಗೆ ಮಾನವ ಎಲುಬು ಮತ್ತು ಮೂಳೆಗಳನ್ನು ಬಳಸುತ್ತಿರುವ ಬಗ್ಗೆ ಈ ಹಿಂದೆ ಕೂಡಾ ವರದಿಯಾಗಿತ್ತು. ಇದನ್ನೇ ಮೂಲವಾಗಿಟ್ಟುಕೊಂಡು ಸಿಬಿಐ ಮತ್ತು ಆದಾಯ ತೆರಿಗೆ ದಾಳಿ ನಡೆಸುವ ಹುನ್ನಾರ ನಡೆದಿದೆ ಎಂದು ಮೂಲಗಳು ಖಚಿತ ಪಡಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+