ಬೆಂಗಳೂರು: ಬಾಬಾ ಬೆಂಬಲಿಗರಲ್ಲಿ ಐವರು ಅಸ್ವಸ್ಥ

ದೇಶಕ್ಕೋಸ್ಕರ ವಿದ್ಯಾರ್ಥಿಗಳು, ಯುವ ಜನಾಂಗ ಉಪವಾಸ ಕೈಗೊಂಡಿದ್ದಾರೆ. ಯಾರ ಮೇಲೂ ಒತ್ತಡ ಹೇರಿಲ್ಲ. ಪ್ರತಿ ದಿನ ಹೆಚ್ಚೆಚ್ಚು ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿರುವುದು ಸಂತೋಷದ ವಿಷಯ ಎಂದು ಸ್ವಾಮಿ ದಿವ್ಯಾನಂದ ಹೇಳಿದ್ದಾರೆ. ಆದರೆ, ಇಂದು ಮಂಗಳೂರಿನ ಸತೀಶ್ ಬಂಗೇರ, ಪ್ರಶಾಂತ್ ಕಲ್ಮಠ, ಕುಶಾಲನಗರದ ಚಂದ್ರಪ್ಪ ಮಾಸ್ತರ್, ತುಮಕೂರಿನ ಜಯಲಕ್ಷ್ಮೀ, ಬೆಂಗಳೂರಿನ ದಿವ್ಯೇಶ್ ಫ್ರೀಡಂ ಪಾರ್ಕ್ ನಲ್ಲಿ ಉಪವಾಸ ಮಾಡಿ ಬಾಬಾಗೆ ಬೆಂಬಲ ಪ್ರದರ್ಶಿಸುವ ಭರದಲ್ಲಿ ದೈಹಿಕವಾಗಿ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೈ ಜೋಡಿಸಿದ ವಿದ್ಯಾರ್ಥಿಗಳು : ನಮ್ಮನ್ನು ಜೈಲಿಗೆ ಹಾಕಿದ್ರೂ ಹೆದರುವುದಿಲ್ಲ. ನಮ್ಮ ವೈಯಕ್ತಿಕ ಪ್ರಗತಿಗಿಂತ ದೇಶದ ಪರಿಸ್ಥಿತಿ ಸುಧಾರಣೆ ಮುಖ್ಯ ಎಂದು ಶೇಷಾದ್ರಿಪುರಂ ಕಾಲೇಜಿನ ವಿದ್ಯಾರ್ಥಿಗಳ ಗುಂಪು ಘೋಷಿಸಿದ್ದಾರೆ. ಇದುವರೆವಿಗೂ ಬೆಂಗಳೂರಿನಲ್ಲಿ ಉಪವಾಸ ಸತ್ಯಾಗ್ರಹದಿಂದ ಒಟ್ಟು ಏಳು ಜನ ಅಸ್ವಸ್ಥರಾಗಿದ್ದಾರೆ.
ಅತ್ತ ದೆಹಲಿಯಲ್ಲಿ ನಡೆದ ಬಾಬಾ ರಾಮದೇವ್ ಬಂಧನ ಗಲಾಟೆಯಲ್ಲಿ ಲಾಠಿ ಏಟು, ಬೂಟೇಟು ತಿಂದು ಗಾಯಗೊಂಡ ಬಾಬಾ ಅಭಿಮಾನಿಗಳಿಗೆ ಹರಿದ್ವಾರದ ಪತಂಜಲಿ ಯೋಗ ಪೀಠದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ನಡುವೆ ಉಪವಾಸ ಕೈಬಿಡುವಂತೆ ಬಾಬಾ ರಾಮದೇವ್ ತಮ್ಮ ಬೆಂಬಲಿಗರನ್ನು ಕೋರಿದ್ದಾರೆ. ತಾವೊಬ್ಬರೆ ಉಪವಾಸ ಸತ್ಯಾಗ್ರಹ ಮುಂದುವರಿಸುವುದಾಗಿ ಹೇಳಿದ್ದಾರೆ.











Click it and Unblock the Notifications