ಪ್ರಣಯ ಬೇಡವೆಂದ ಮಹಿಳೆ ಮೇಲೆ ಆಸಿಡ್ ಅಟಾಕ್
ಸಂಕೇಶ್ವರ,
ಜೂನ್ 7: ಪ್ರೇಮ-ಪ್ರಣಯಕ್ಕೆ ಒಪ್ಪದ ವಿವಾಹಿತ ಮಹಿಳೆಯ ಮೇಲೆ ಅಸಿಡ್ ಎರಚಿ ಕೊಲೆಗೆ ಭಗ್ನ ಪ್ರೇಮಿಯೊಬ್ಬ ಯತ್ನಿಸಿದ್ದು, ಮಹಿಳೆ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. id="toptextpromo">ಇಲ್ಲಿನ
ಮರಾಠಾ ಬೀದಿಯ ಲಲಿತಾ ಮಲ್ಲಿಕಾರ್ಜುನ ಸಾರವಾಡಿ (35) ಭಾನುವಾರ ರಾತ್ರಿ 9 ಗಂಟೆಗೆ (ಜೂನ್ 5) ಮನೆಗೆ ಬರುವಾಗ ಇಲ್ಲಿನ ಸಂಜು ತಮ್ಮಣ್ಣ ಹಿರೇಮಠ ಎಂಬುವವನು ಅಸಿಡ್ ಎರಚಿದ್ದಾನೆ ಎಂದು ದೂರಲಾಗಿದೆ. ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ಮಹಿಳೆಯನ್ನು ದಾಖಲಿಸಲಾಗಿದ್ದು, ಸಂಜು ಹಿರೇಮಠನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಲಲಿತಾ
ಅವರನ್ನು ಒಂದು ವರ್ಷದಿಂದ ಪ್ರೇಮ-ಪ್ರಣಯಕ್ಕಾಗಿ ಸಂಜು ಪೀಡಿಸುತ್ತಿದ್ದನೆಂದು ಲಲಿತಾ ಪೊಲೀಸರಿಗೆ ದೂರು ನೀಡಿದ್ದಾಳೆ. ಮಹಿಳೆಗೆ ಪತಿ ಹಾಗೂ ಮೂವರು ಮಕ್ಕಳಿದ್ದಾರೆ. ಸ್ಥಳಕ್ಕೆ ಗೋಕಾಕ್ ಡಿ.ಎಸ್‌ಪಿ. ಬಸವರಾಜ ಕಡಕೋಳ, ಹುಕ್ಕೇರಿ ಸಿಪಿಐ ಎಲ್. ವೇಣುಗೋಪಾಲ ಭೇಟಿ ನೀಡಿ ಪರಿಶೀಲಿಸಿದರು. ಸಂಕೇಶ್ವರ ಪಿಎಸ್‌ಐ ಪ್ರಭು ಗಂಗನಹಳ್ಳಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ.











Click it and Unblock the Notifications