ಬಾಬಾ ರಾಮದೇವ್ ಒಬ್ಬ ಕೊಲೆಗಡುಕ : ಕಾಂಗ್ರೆಸ್
ನವದೆಹಲಿ,
ಜೂನ್ 5: ಕಪ್ಪುಹಣದ ಉಪವಾಸ ಸತ್ಯಾಗ್ರಹ ಆರಂಭಿಸಿದ ಯೋಗ ಗುರು ಬಾಬಾ ರಾಮದೇವ್ ಅವರನ್ನು ಭಾನುವಾರ ಬೆಳಗಿನ ಜಾವ ದೆಹಲಿ ಪೊಲೀಸರು ಬಂಧಿಸಿದ್ದು ಸರಿಯಾದ ಕ್ರಮ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಸಮರ್ಥಿಸಿಕೊಂಡಿದ್ದಾರೆ. ಇದೇ ವೇಳೆ ರಾಮದೇವ್ ಅವರನ್ನು ಕೊಲೆಗಡುಕ ಎಂದೂ ಅವರು ಜರಿದಿದ್ದಾರೆ. id="toptextpromo">'ಯೋಗ
ಶಿಬಿರ ನಡೆಸಲು ಪೊಲೀಸರು ಅನುಮತಿ ನೀಡಲಾಗಿತ್ತು. ಆದರೆ ರಾಮದೇವ್ ಉಪವಾಸ ಸತ್ಯಾಗ್ರಹ ಕೈಗೊಂಡರು. ಇದು ಕಾನೂನಿಗೆ ವಿರೋಧವಾಗಿತ್ತು. ರಾಷ್ಟ್ರದ ರಾಜಧಾನಿಯಲ್ಲಿ ಶಾಂತಿ ಕದಡಲು ಅವರಿಗೆ ಅವಕಾಶ ನೀಡಲಾಗದು. ಆದ್ದರಿಂದ ಪೊಲೀಸರು ತಕ್ಕ ಕ್ರಮ ಕೈಗೊಂಡಿದ್ದಾರೆ' ಎಂದು ಅವರು ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>'ಬಾಬಾ
ಅನೇಕ ವರ್ಷದಿಂದ ಜನರನ್ನು ವಂಚಿಸುತ್ತಿದ್ದಾರೆ. ಈಗ ಸರಕಾರವನ್ನು ಮರಳು ಮಾಡಲು ಯತ್ನಿಸಿದರು. ಬಾಬಾ ರಾಜಕೀಯ ಮಾಡತೊಡಗಿದರು. ಜನರ ಭಾವನೆಗಳೊಂದಿಗೆ ಆಟವಾಡತೊಡಗಿದರು. ಕಳ್ಳನನ್ನು ಹೇಗೆ ವಿಚಾರಿಸಿಕೊಳ್ಳಬೇಕೊ ಹಾಗೆ ಬಾಬಾರನ್ನು ನೋಡಿಕೊಳ್ಳಲಾಗಿದೆ. ಅವರಿಗೆ ತಕ್ಕ ಶಾಸ್ತಿಯಾಗಿದೆ' ಎಂದು ಸಿಂಗ್ ಹರಿಹಾಯ್ದರು.











Click it and Unblock the Notifications