ಲೋಕಪಾಲ ಮಸೂದೆ ಸಭೆಗೆ ಬಹಿಷ್ಕಾರ: ಸಂತೋಷ್ ಹೆಗ್ಡೆ

ಬಾಬಾ ರಾಮದೇವ್ ಅವರ ಉಪವಾಸ ಸತ್ಯಾಗ್ರಹಕ್ಕೆ ಕೇಂದ್ರ ಸರಕಾರ ಅಡ್ಡಿ ಮಾಡಿರುವುದೇ ಇದಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ. ಬಾಬಾ ಅವರನ್ನು ಬಂಧಿಸಿದ ರೀತಿ 1975ರ ತುರ್ತು ಪರಿಸ್ಥಿತಿ ದಿನಗಳನ್ನು ನೆನಪಿಸಿದೆ. ಇದು ಜನರ ಮೂಲಭೂತ ಹಕ್ಕನ್ನೇ ಕಸಿದುಕೊಳ್ಳುವ ಪ್ರಯತ್ನ" ಎಂದರು.
"ರಾಮದೇವ್ ರನ್ನು ತುರ್ತಾಗಿ ಬಂಧಿಸುವ ಅಗತ್ಯವೇನಿತ್ತು? ಪ್ರತಿಭಟನಕಾರರಿಗೆ ಈ ರೀತಿಯ ಪ್ರತಿಕ್ರಿಯೆ ನೀಡಬೇಕಿತ್ತೇ? ಇತ್ಯಾದಿ ಹಲವು ಪ್ರಶ್ನೆಗಳಿಗೆ ಸರಕಾರ ಉತ್ತರ ನೀಡಬೇಕಿದೆ. ನನಗೆನಿಸುತ್ತಿದೆ ಸರಕಾರವು ಜನರ ಪ್ರತಿಭಟಿಸುವ ಹಕ್ಕನೇ ಕಿತ್ತುಕೊಳ್ಳುತ್ತಿದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಬಾಬಾ ರಾಮದೇವ್ ಅವರೊಂದಿಗೆ ಸರಕಾರ ಇನ್ನು ಯಾವುದೇ ರೀತಿಯ ಮಾತುಕತೆಗಳನ್ನು ನಡೆಸುವುದಿಲ್ಲವೆಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.












Click it and Unblock the Notifications