ರಾಷ್ಟ್ರದ ಇತಿಹಾಸದಲ್ಲಿಂದು ಕರಾಳ ದಿನ: ನರೇಂದ್ರ ಮೋದಿ

ಭ್ರಷ್ಟತೆ ಮತ್ತು ಕಪ್ಪು ಹಣದ ವಿರುದ್ಧ ಯುವಕರು ಹೋರಾಟ ಮುಂದುವರೆಸುವಂತೆ ಅವರು ಕರೆ ನೀಡಿದ್ದಾರೆ. ಅವರು ಅಹ್ಮದಾಬಾದಿನ ಮನಿನಗರ್ ನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುದ್ದರು.
ಉಪವಾಸ ಸತ್ಯಾಗ್ರಹದಿಂದ ಬಾಬಾ ರಾಮದೇವ್ ಅವರನ್ನು ಬಲವಂತವಾಗಿ ದೆಹಲಿ ಪೊಲಿಸರು ಉಚ್ಚಾಟಣೆ ಮಾಡಿದ್ದಾರೆ. ಇದಕ್ಕೆ ದೆಹಲಿ ಸರಕಾರ ಹೊಣೆಯಾಗುವುದಿಲ್ಲ. ಬದಲಾಗಿ ಡಾ. ಮನಮೋಹನ್ ಸಿಂಗ್ ಸರಕಾರ ಹೊಣೆಯಾಗುತ್ತದೆ ಎಂದಿದ್ದಾರೆ.
"ಕಪ್ಪು ಹಣವನ್ನು ಭಾರತಕ್ಕೆ ತನ್ನಿ ಎಂದರೆ ಕಾಂಗ್ರೆಸ್ ಏತಕ್ಕೆ ಕ್ರೋಧಗೊಳ್ಳುತ್ತಿದೆ. ಡಿಎಂಕೆ ನಾಯಕರನ್ನು ಜೈಲಿಗೆ ಕಳುಹಿಸಿರುವ ಕಾಂಗ್ರೆಸಿಗೆ ಈಗ ಕಪ್ಪು ಹಣದಿಂದಾಗಿ ಜೈಲಿಗೆ ಹೋಗುವ ಭಯ ಉಂಟಾಗಿದೆ" ಎಂದು ಮೋದಿ ಲೇವಡಿ ಮಾಡಿದ್ದಾರೆ.
"ನಿನ್ನೆ ಸಂಜೆಯ ಸಮಯದಲ್ಲಿ ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿ ನಡು ರಾತ್ರಿ ಅವರನ್ನು ಬಂಧಿಸಿದೆ. ರಾಮದೇವ್ ಅವರನ್ನು ಅಮಾನವೀಯವಾಗಿ ಬಂಧಿಸುವ ಜರೂರತ್ತು ಸರಕಾರಕ್ಕೆಏನಿತ್ತು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ನಾನು ಇಡೀ ದೇಶದ ಯುವಕರನ್ನು ಕೇಳಿಕೊಳ್ಳುತ್ತಿದ್ದೇನೆ. ಸರಕಾರದ ಇಂತಹ ಕ್ರಮದ ಕುರಿತು ಪ್ರಬಲವಾಗಿ ಹೋರಾಡಿರಿ. ನಾವೇ ಭ್ರಷ್ಟಚಾರದ ಕುರಿತು ಹೋರಾಟ ಮಾಡದಿದ್ದರೆ ಇನ್ಯಾರು ಈ ದೇಶವನ್ನು ಉಳಿಸುತ್ತಾರೆ" ಎಂದು ಭ್ರಷ್ಟಾಚಾರದ ವಿರುದ್ಧ ಹೋರಾಡುವಂತೆ ಯುವಕರಿಗೆ ಕರೆ ನೀಡಿದ್ದಾರೆ.
ಇದು ಭಾರತಕ್ಕೆ ಕರಾಳ ದಿನವಾಗಿದ್ದು ದೇಶಿಯರು ಯಾವತ್ತೂ ಇದನ್ನು ಮರೆಯುವುದಿಲ್ಲ ಎಂದವರು ಅಭಿಪ್ರಾಯಪಟ್ಟರು.











Click it and Unblock the Notifications