• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವ 10K ಮ್ಯಾರಥಾನ್ :ಟ್ರಾಫಿಕ್ ವ್ಯವಸ್ಥೆ ಹೀಗಿದೆ

By Mahesh
|

ಬೆಂಗಳೂರು ಜೂ 4: ವಿಶ್ವ 10ಕೆ ಮ್ಯಾರಥಾನ್ ಒಟಕ್ಕೆ ಗಾರ್ಡನ್ ಸಿಟಿ ಸಜ್ಜುಗೊಳ್ಳುತ್ತಿದೆ. ಈ ವಾರ್ಷಿಕ ಓಟಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ಬೆಂಬಲ ಸೂಚಿಸಿದೆ. ಐಎಎಎಫ್ ಮಾನ್ಯತೆಯನ್ನು ಗಿಟ್ಟಿಸಿಕೊಂಡಿರುವ ಈ ಮ್ಯಾರಥಾನ್ ಓಟ ನಗರದ ಶ್ರೀಕಂಠೀರವ ಸ್ಟೇಡಿಯಂನಿಂದ ಆರಂಭವಾಗಿ, ಅಲ್ಲೇ ಸಮಾಪ್ತಿಗೊಳ್ಳಲಿದೆ.

ಆರು ವಿಭಾಗಗಳಲ್ಲಿ ಓಟವನ್ನು ಆಯೋಜಿಸಿರುವ ಪ್ರೊಕಾಮ್ ಇಂಟರ್ ನ್ಯಾಷನಲ್ ಸಂಸ್ಥೆ, ಈಗಾಗಲೇ ಮುಂಬೈ ಮ್ಯಾರಥಾನ್ ಹಾಗೂ ದೆಹಲಿ ಹಾಫ್ ಮ್ಯಾರಥನ್ ಗಳನ್ನು ಯಶಸ್ವಿಯಾಗಿ ಆಯೋಜಿಸಿದೆ. ಕ್ರಿಕೆಟರ್ ಶ್ರೀಶಾಂತ್, ಕೇಂದ್ರ ಪರಿಸರ ಸಚಿವ ಜೈರಾಮ್ ರಮೇಶ್ಸೇರಿದಂತೆ ಹಲವಾರು ನಟ ನಟಿಯರು, ರೇಡಿಯೋ ಮಿರ್ಚಿ ಆರ್ ಜೆ ಗಳು ಮ್ಯಾರಥಾನ್ ನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

* ವಿಶ್ವ 10K>>10 ಕಿ.ಮೀ ದೂರ>>18 ವರ್ಷ ಹಾಗೂ ಮೇಲ್ಪಟ್ಟವರಿಗೆ

* ಮುಕ್ತ 10K ಓಟ>>10 ಕಿ.ಮೀ ದೂರ>> 15 ವರ್ಷ ಹಾಗೂ ಮೇಲ್ಪಟ್ಟವರಿಗೆ

* ಕಾರ್ಪೊರೇಟ್ ಚಾಲೆಂಜ್>> 10 ಕಿ.ಮೀ ದೂರ>>18 ವರ್ಷ ಹಾಗೂ ಮೇಲ್ಪಟ್ಟವರಿಗೆ

* ಮಜಾ ರನ್>>5.7 ಕಿ.ಮೀ ದೂರ>>12 ವರ್ಷ ಹಾಗೂ ಮೇಲ್ಪಟ್ಟವರಿಗೆ

* ಹಿರಿಯ ನಾಗರೀಕರ ರನ್ >>4 ಕಿ.ಮೀ ದೂರ>>60 ವರ್ಷ ಹಾಗೂ ಮೇಲ್ಪಟ್ಟವರಿಗೆ

* ವೀಲ್ ಚೇರ್ ಓಟ>>4 ಕಿ.ಮೀ >>12 ವರ್ಷ ಹಾಗೂ ಮೇಲ್ಪಟ್ಟವರಿಗೆ

ಟ್ರಾಫಿಕ್ ಬದಲಿ ವ್ಯವಸ್ಥೆ: ಜೂ.5ರಂದು ಎಫ್‌ಡಿಎ ಮತ್ತು ಎಸ್‌ಡಿಎ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳು ವಿವಿಧ ಕೇಂದ್ರಗಳಲ್ಲಿ ನಡೆಯಲಿದ್ದು, ಸಂಚಾರ ವ್ಯವಸ್ಥೆಯಲ್ಲಿನ ಬದಲಾವಣೆಗಳನ್ನು ಅಭ್ಯರ್ಥಿಗಳು ಗಮನಿಸುವುದು ಒಳ್ಳೆಯದು. ಜೂ. 5ರಂದು ಬೆಳಿಗ್ಗೆ 6.30ರಿಂದ 11 ಗಂಟೆಯವರೆಗೆ ಕಸ್ತೂರಬಾ ರಸ್ತೆ, ಎಂ.ಜಿ.ರಸ್ತೆ (ಅನಿಲ್ ಕುಂಬ್ಳೆ ವೃತ್ತದವರೆಗೆ), ಕಬ್ಬನ್ ರಸ್ತೆ, ಕಾಮರಾಜ ರಸ್ತೆ. ಡಿಕೆನ್ಸನ್ ರಸ್ತೆ. ಹಲಸೂರು ರಸ್ತೆ, ಕ್ವೀನ್ಸ್ ರಸ್ತೆ, ಅಂಬೇಡ್ಕರ್ ರಸ್ತೆ (ಪೂರ್ವ ಭಾಗ), ಗೋಪಾಲಗೌಡ ವೃತ್ತದಿಂದ ಹಡ್ಸನ್ ವೃತ್ತದವರೆಗೆ, ಕಬ್ಬನ್‌ಪಾರ್ಕ್ ಒಳ ಭಾಗದ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅವಕಾಶವಿಲ್ಲ.

ಪಾರ್ಕಿಂಗ್ ಇಲ್ಲಿ ಮಾಡಿ: ಯುಬಿ ಸಿಟಿ, ಬನ್ನಪ್ಪ ಪಾರ್ಕ್, ಸಿಎಸ್ ಐ ಕಾಪೌಂಡ್(ಮಿಷನ್ ರಸ್ತೆ), ಕೆಂಪೇಗೌಡ ರಸ್ತೆ ಎಡಬದಿಯಲ್ಲಿ ಸ್ಪರ್ಧಿಗಳು ತಮ್ಮ ವಾಹನ ನಿಲುಗಡೆ ಮಾಡಲು ಅವಕಾಶವಿರುತ್ತದೆ. ಕಸ್ತೂರ್ ಬಾ ರಸ್ತೆ, ವಿಠಲ್ ಮಲ್ಯ ರಸ್ತೆ, ಆರ್ ಆರ್ ಎಂಆರ್ ರಸ್ತೆ, ಕ್ವೀನ್ಸ್ ರಸ್ತೆ, ಕಾಮರಾಜ ರಸ್ತೆ, ಅಂಬೇಡ್ಕರ್ ರಸ್ತೆ, ಇನ್ ಫೆಂಟ್ರಿ ರಸ್ತೆ, ಕಬ್ಬನ್ ಪಾರ್ಕ್ ಒಳಗೆ ಪಾರ್ಕಿಂಗ್ ವ್ಯವಸ್ಥೆ ಇರುವುದಿಲ್ಲ.

ಕಿಂಗ್ ಫಿಷರ್ ಪ್ರಶಸ್ತಿ: ಮಜಾರನ್ ಓಡುವವರಿಗೆ ಕಿಂಗ್ ಫಿಷರ್ ಸಕತ್ ಬೆಂಗಳೂರಿಯನ್, ಬೊಂಬಾಬ್ ಬ್ರಿಗೇಡ್ ಎಂಬ ವೈಯಕ್ತಿಕ ಹಾಗೂ ಸಾಂಘಿಕ ಪ್ರಶಸ್ತಿಗಳನ್ನು ಕಿಂಗ್ ಫಿಷರ್ ನೀಡುತ್ತಿದೆ. Run-in-Costume ಎಂಬ ಹೆಸರಲ್ಲಿ ಚಿತ್ರ ವಿಚಿತ್ರ ಉಡುಗೆ ತೊಡಗೆಯಲ್ಲಿ ಕಾಣಿಸಿಕೊಳ್ಳುವ ಸ್ಪರ್ಧಿಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The World 10K that put Bangalore on the global distance-running map will this year be conducted under a new name - TCS World 10K and will be flagged off on June 5. The event supported by the state government and its various agencies is promoted by Procam International. Kingfisher partner of 10K marathon is urges Bangaloreans to 'Run-in-Costume' at the Majja Run.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more