ಅತ್ಯಾಚಾರ: ಫ್ರಾನ್ಸ್ ಸಚಿವ ಜಾರ್ಜ್‌ಸ್ ಟ್ರಾನ್ ರಾಜೀನಾಮೆ
ಪ್ಯಾರಿಸ್,
ಜೂನ್ 1: ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಫ್ರಾನ್ಸ್ ಮಂತ್ರಿ ಮಂಡಲದ ಸಚಿವರೊಬ್ಬರು ಭಾನುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಫ್ರಾನ್ಸ್ ಸಚಿವಾಲಯ ಭಾನುವಾರ ಬಿಡುಗಡೆ ಮಾಡಿರುವ ತನ್ನ ಪ್ರಕಟಣೆಯಲ್ಲಿ ಸಚಿವರ ರಾಜೀನಾಮೆ ವಿಷಯವನ್ನು ತಿಳಿಸಿದೆ. id="toptextpromo">ನಾಗರಿಕ
ಸೇವಾ ಸಚಿವಾಲಯದ ಮಂತ್ರಿ ಜಾರ್ಜ್‌ಸ್ ಟ್ರಾನ್ ಅವರು ಇಲ್ಲಿನ ಟೌನ್ ಹಾಲ್ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದರು. ಈ ಕುರಿತು ನಡೆದ ಪ್ರಾಥಮಿಕ ತನಿಖೆಗಳು ಘಟನೆಯನ್ನು ದೃಢಪಡಿಸಿದ್ದವು. id='are-slot-1' class='oiad oi-axt oiadv'> id='top-searched-articles'>ಮ್ಯಾನ್‌ಹಟನ್
ಹೋಟೆಲ್ ಪರಿಚಾರಿಕೆಯ ಮೇಲೆ ಐಎಂಎಫ್ ಮಾಜಿ ವ್ಯವಸ್ಥಾಪಕ ನಿರ್ದೇಶಕ ಡೊಮಿನಿಕ್ ಸ್ಟ್ರಾಸ್ ಕಾನ್ ಲೈಂಗಿಕ ದೌರ್ಜನ್ಯ ನಡೆಸಿದ ಆಪಾದನೆ ಮೇಲೆ ಇತ್ತೀಚೆಗಷ್ಟೇ ಪೊಲೀಸ್ ಅತಿಥಿಯಾಗಿದ್ದಾರೆ. ಹೋಟೆಲ್ ಪರಿಚಾರಿಕೆಯ ಉಡುಪಿನ ಮೇಲೆ ಕಾನ್ ವೀರ್ಯಾಣು ಪತ್ತೆಯಾಗಿದೆ ಎಂದು ಅಮೆರಿಕದ ತನಿಖಾಧಿಕಾರಿಗಳು ದೃಢಪಡಿಸಿದ್ದಾರೆ.











Click it and Unblock the Notifications