ಉಡುಪಿ:ಅಪ್ರಾಪ್ತೆಯ ಅತ್ಯಾಚಾರ, ಸಹಮತ ಸೆಕ್ಸ್?

ಹತ್ತನೆ ತರಗತಿ ಪಾಸಾಗಿ ಪಿಯುಸಿಗೆ ಹೋಗಲಿರುವ 16 ವರ್ಷದ ಅಪ್ರಾಪ್ತೆ ಹುಡುಗಿಗೆ ಮೋಡಿ ಮಾಡಿದ ವ್ಯಕ್ತಿಯ ಹೆಸರು ಇಕ್ಬಾಲ್. ಈತ ಪೆರ್ಡೂರು ಪುತ್ತಿಗೆ ನಿವಾಸಿಯಾಗಿದ್ದು, ಮದುವೆ, ಮಕ್ಕಳು ಎಲ್ಲವೂ ಆಗಿ ಸುಖ ಸಂಸಾರವಿದೆ. ಆದರೂ ಆ ಹುಡುಗಿಯ ಮೇಲೆ ಈತನ ಕಣ್ಣು ಬಿದ್ದಿತ್ತು. ಹಿರಿಯಡ್ಕದ ಶೆಡ್ ವೊಂದರಲ್ಲಿ ರಾತ್ರಿ ವೇಳೆ ಏನೋ ಶಬ್ದವಾಗುತ್ತಿದ್ದನ್ನು ಕಂಡ ಸ್ಥಳೀಯರು ಸಂಶಯಗೊಂಡು ಬಂದು ನೋಡಿದಾಗ ಇವರಿಬ್ಬರ ರಾಸಲೀಲೆ ಬಹಿರಂಗವಾಗಿದೆ.
ಗೋಜಲಾದ ರೇಪ್ ಕೇಸ್ : ಇಕ್ಬಾಲ್ ಮೋಡಿಗೆ ಒಳಗಾಗಿರುವ ಹುಡುಗಿ, ಈ ಹಿಂದೆ ಕೂಡಾ ಮನೆಯಲ್ಲಿ ಸುಳ್ಳು ಹೇಳಿ ಈತನ ಜೊತೆ ತಿರುಗಾಡಿದ್ದುಂಟು. ಯಾರದೆ ಬಲವಂತವಿಲ್ಲದೆ ಸ್ವಂತ ಇಚ್ಛೆಯಿಂದ ಈತನ ಜೊತೆ ತೆರಳಿರುವ ಹುಡುಗಿಯನ್ನು ತನ್ನ ಕಾಮತೃಷೆಗೆ ಆತ ನಿರಂತರವಾಗಿ ಬಳಸಿಕೊಂಡಿದ್ದಾನೆ.
ಇಬ್ಬರಿಗೂ ಪರಸ್ಪರ ಒಪ್ಪಿಗೆ ಇದ್ದು ನಡೆದಿರುವ ಕ್ರಿಯೆ ಎಂದು ಮೇಲ್ನೋಟಕ್ಕೆ ಕಂಡು ಬಂದರೂ, ಹುಡುಗಿ ಅಪ್ರಾಪ್ತೆಯಾಗಿರುವ ಕಾರಣ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿ ಆರೋಪಿ ಇಕ್ಬಾಲ್ ನನ್ನು ಸೆರೆಹಿಡಿದು, ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ. ಸದ್ಯ ಇಕ್ಬಾಲ್ ನ್ಯಾಯಾಂಗ ಬಂಧನದಲ್ಲಿದ್ದಾನೆ.












Click it and Unblock the Notifications