ಮೈಸೂರು ದಸರಾದಲ್ಲಿ ಏರ್ ಶೋ, ಯುವ ದಸರಾ ಬೇಡ

ಯುವ ದಸರಾ ಮತ್ತು ವೈಮಾನಿಕ ಪ್ರದರ್ಶನದಂತಹ ಕಾರ್ಯಕ್ರಮಗಳನ್ನು ದಸಾರದಿಂದ ಬೇರ್ಪಡಿಸುವಂತೆ ಅವರು ವರದಿಯಲ್ಲಿ ತಿಳಿಸಿದ್ದಾರೆ. ದಸರಾದಲ್ಲಿ ಜಂಬೂ ಸವಾರಿ, ಮೆರವಣಿಗೆ ಇತ್ಯಾದಿ ಸಾಂಪ್ರದಾಯಿಕ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದಿದ್ದಾರೆ.
ಯುವ ದಸರಾದಂತಹ ಕಾರ್ಯಕ್ರಮಗಳನ್ನು ಫೆಬ್ರವರಿಯಲ್ಲಿ ನಡೆಯುವ ಮೈಸೂರು ಜಿಲ್ಲಾ ಉತ್ಸವದಲ್ಲಿ ನಡೆಸಬಹುದು. ಇದರಿಂದ ನಗರಕ್ಕೆ ಹೆಚ್ಚು ಪ್ರವಾಸಿಗರನ್ನು ಸೆಳೆಯಬಹುದು ಎಂದು ಅವರು ತಿಳಿಸಿದ್ದಾರೆ.
ಪಾಸ್ ಕೊರತೆಯಿಂದ ಹೆಚ್ಚಿನ ಪ್ರವಾಸಿಗರಿಗೆ ಜಂಬೂ ಸವಾರಿ ವೀಕ್ಷಣೆ ಸಾಧ್ಯವಾಗುವುದಿಲ್ಲ. ಅರಮನೆಯೊಳಗೆ ಶೇ. 50ರಷ್ಟು ಪಾಸನ್ನು ಪ್ರವಾಸಿಗರಿಗೆ ವಿನಿಯೋಗಿಸುವ ಮೂಲಕ ಈ ಸಮಸ್ಯೆ ಬಗೆ ಹರಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮೈಸೂರು ದಸರಾ ಹೆಚ್ಚು ಸುಸುತ್ರವಾಗಿ ನಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿ ಒದಗಿಸಬೇಕು ಎಂಬ ಬೇಡಿಕೆಯನ್ನೂ ಜಿಲ್ಲಾಧಿಕಾರಿ ಇಟ್ಟಿದ್ದಾರೆ.












Click it and Unblock the Notifications