ಚಿಕಿತ್ಸೆಗಾಗಿ ಶುಕ್ರವಾರ ರಾತ್ರಿ ರಜನಿಕಾಂತ್ ಸಿಂಗಾಪುರ್ ಗೆ
ಚೆನ್ನೈ,
ಮೇ 27: ಅನಾರೋಗ್ಯಪೀಡಿತರಾಗಿರುವ ಸೂಪರ್ ಸ್ಟಾರ್ ರಜನಿಕಾಂತ್ (61) ಅವರು ಹೆಚ್ಚಿನ ಚಿಕಿತ್ಸೆಗಾಗಿ ಶುಕ್ರವಾರ ರಾತ್ರಿ ಸಿಂಗಾಪುರ್ ಗೆ ತೆರಳಲಿದ್ದಾರೆ. ರಜನಿಕಾಂತ್ ಜತೆ ಅವರ ಕುಟುಂಬದವರೂ ಸಿಂಗಾಪುರ್ ಏರ್ ಲೈನ್ಸ್ ಮೂಲಕ ಹೊರಡಲಿದ್ದಾರೆ ಎಂದು ಖಚಿತ ಮೂಲಗಳು ತಿಳಿಸಿವೆ. id="toptextpromo">ಮೇರುನಟ
ರಜನಿಕಾಂತ್ ಅವರ ಆರೋಗ್ಯದಲ್ಲಿ ತೀವ್ರ ಏರುಪೇರು ಕಂಡುಬಂದಿದ್ದರಿಂದ ಅವರನ್ನು ಇತ್ತೀಚೆಗೆ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. ಶ್ವಾಸಕೋಶದಲ್ಲಿ ಹೆಚ್ಚುವರಿ ನೀರು ಶೇಖರಣೆಯಾಗಿ ರಜನಿಕಾಂತ್ ಅವರ ಉಸಿರಾಟಕ್ಕೆ ತೊಂದರೆಯಾಗಿತ್ತು. ಅದನ್ನು ಶಸ್ತ್ರಚಿಕಿತ್ಸೆ ಮೂಲಕ ಇತ್ತೀಚೆಗೆ ತೆಗೆದುಹಾಕಲಾಗಿತ್ತು. ಆದರೆ ಮತ್ತೆ ಅವರಿಗೆ ಮತ್ತೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. id='are-slot-1' class='oiad oi-axt oiadv'> id='top-searched-articles'>ನಿಮೋನಿಯಾ,
ಕಿಡ್ನಿ ಮತ್ತು ಲಿವರ್ ಸಮಸ್ಯೆ ಸಹ ಅವರನ್ನು ಇತ್ತೀಚೆಗೆ ತೀವ್ರವಾಗಿ ಬಾಧಿಸುತ್ತಿದ್ದು, ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಶ್ರೀ ರಾಮಚಂದ್ರ ಮೆಡಿಕಲ್ ಸೆಂಟರ್ ಆಸ್ಪತ್ರೆಯಲ್ಲಿ ಒಂದು ವಾರದಿಂದ ಶುಶ್ರೂಶೆ ಪಡೆಯುತ್ತಿದ್ದಾರೆ.











Click it and Unblock the Notifications