ಅಡುಗೆ ಸಿಲಿಂಡರ್ ಖಾಲಿಯಾಯಿತೇ? 89700 24365ಗೆ ಕರೆ ಮಾಡಿ!

ಇಂಡಿಯನ್ ಆಯಿಲ್ ಕಾರ್ಪೊರೇಶನ್ (ಇಂಡೇನ್) ಈ ಹೊಸ ವ್ಯವಸ್ಥೆಯನ್ನು ಆರಂಭಿಸಿದ್ದು, ಬೆಂಗಳೂರು ನಗರ ಮತ್ತು ಗ್ರಾಮಾಂತರ ಭಾಗದ 13 ಲಕ್ಷ ಇಂಡೇನ್ ಅಡುಗೆ ಅನಿಲ ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು. ನಗರದ ಎಲ್ಲ 58 ಇಂಡೇನ್ ವಿತರಣಾ ಕೇಂದ್ರಗಳಲ್ಲಿ ಈ ಪದ್ಧತಿ ದಿನದ 24 ಗಂಟೆಯೂ ಚಾಲೂ ಇರುತ್ತದೆ. ನಡುರಾತ್ರಿಯಲ್ಲೂ ಗ್ರಾಹಕರು ಬುಕ್ ಮಾಡಬಹುದು.
ಮಾಡಬೇಕಾಗಿರುವುದಿಷ್ಟೆ : 89700 24365 ಏರ್ ಟೆಲ್ ಮೊಬೈಲ್ ಸಂಖ್ಯೆಗೆ ಕರೆ ಮಾಡಿ. ಆಗ ರೆಕಾರ್ಡೆಡ್ ಮೆಸೇಜ್ ಮುಖಾಂತರ ಕೇಳುವ ಎಲ್ಲ ಮಾಹಿತಿಗಳನ್ನು ನೀಡುತ್ತಾ ಹೋಗಿ. ಇದು ನೊಂದಾವಣಿ ಮಾಡಿಕೊಳ್ಳುವ ಹಂತ. ನೊಂದಾವಣಿಯಾದ ಮೇಲೆ ಇದೇ ಇಂಟರ್ ಆಕ್ಟೀವ್ ವಾಯ್ಸ್ ರೆಸ್ಪಾನ್ಸ್ ಸಿಸ್ಟಮ್ (ಐವಿಆರ್ಎಸ್) ಸಂಖ್ಯೆಗೆ ಕರೆ ಮಾಡಿ ಗ್ಯಾಸ್ ರಿಫಿಲ್ ಮಾಡಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಂರ್ಕಿಸಿ: IndianOil Customer Service Cell on 080-22130421 or 22239473.












Click it and Unblock the Notifications