ರಜನಿಕಾಂತ್ ಗೆ ಯಶಸ್ವಿ ಶಸ್ತ್ರಚಿಕಿತ್ಸೆ, ಆರೋಗ್ಯ ಸುಧಾರಣೆ

Surgery for Rajinikanth
ಚೆನ್ನೈ, ಮೇ 17: ಮೇರುನಟ ರಜನಿಕಾಂತ್ (61) ಅವರಿಗೆ ಸೋಮವಾರ ಚಿಕ್ಕ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಅವರೀಗ ಆರೋಗ್ಯವಾಗಿದ್ದಾರೆ ಎಂದು ಶ್ರೀ ರಾಮಚಂದ್ರ ಮೆಡಿಕಲ್ ಸೆಂಟರ್ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಶ್ವಾಸಕೋಶದಲ್ಲಿ ಶೇಖರಣೆಯಾಗಿದ್ದ ಹೆಚ್ಚುವರಿ ನೀರನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಲಾಗಿದೆ. ನೆಮೋನಿಯಾ, ಕಿಡ್ನಿ ಮತ್ತು ಲಿವರ್ ಸಮಸ್ಯೆಯಿಂದ ಅವರು ಇತ್ತೀಚೆಗೆ ಚಿಕಿತ್ಸೆ ಪಡೆಯುತ್ತಿದ್ದರು.

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಶಸ್ತ್ರಚಿಕಿತ್ಸೆಗೊಳಗಾದ ರಜನಿಕಾಂತ್ ಅವರನ್ನು ಸೋಮವಾರ ಭೇಟಿಯಾಗಿ, ಆರೋಗ್ಯ ವಿಚಾರಿಸಿಕೊಂಡರು. ಆಸ್ಪತ್ರೆಯಿಂದ ಬಿಡುಗಡೆಯಾಗಗುತ್ತಿದ್ದಂತೆ ವಿಶ್ರಾಂತಿಗಾಗಿ ಸೀದಾ ಗುಜರಾತಿಗೆ ಬರುವಂತೆ ಮೋದಿ ಆಹ್ವಾನ ನೀಡಿದ್ದಾರೆ.

ತಮಿಳುನಾಡಿನ ನೂತನ ಮುಖ್ಯಮಂತ್ರಿ ಜಯಲಲಿತಾ, ಟಿಡಿಪಿ ನಾಯಕ ಎನ್ ಚಂದ್ರಬಾಬು ನಾಯ್ಡು ಸಹ ಆಸ್ಪತ್ರೆಯಲ್ಲಿ ರಜನಿ ಆರೋಗ್ಯ ವಿಚಾರಿಸಿದರು. ರಜನಿಕಾಂತ್ ಅವರ ಎದೆ ಭಾಗದಲ್ಲಿದ್ದ ಹೆಚ್ಚುವರಿ ನೀರು ಶ್ವಾಸಕೋಶ ನಾಳಗಳ ಮೇಲೆ ಒತ್ತಡ ಹಾಕುತ್ತಿದ್ದವು. ಇದರಿಂದ ಅವರಿಗೆ ಉಸಿರಾಡಲು ಕಷ್ಟವಾಗುತ್ತಿತ್ತು. ಈ ಎಲ್ಲ ಸುಗಮವಾಗಿದೆ. ರಜನಿ ನಿರಾಳವಾಗಿದ್ದಾರೆ' ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

ಪ್ರಸ್ತುತ,ರಜನಿ ಅವರ ಕಿಡ್ನಿ ಕಾರ್ಯವನ್ನು ವೈದ್ಯಕೀಯವಾಗಿ ಪೋಷಿಸಲಾಗುತ್ತಿದೆ. ಶಸ್ತ್ರಚಿಕಿತ್ಸೆ ಬಳಿಕ ಉಸಿರಾಟ ಸರಾಗವಾಗಿ ಕಿಡ್ನಿ ಸಮಸ್ಯೆ ನೀಗಬಹುದು ಆಶಿಸಲಾಗಿದೆ. ಇಲ್ಲವಾದಲ್ಲಿ ಅವರಿಗೆ ಡಯಾಲಿಸಿಸ್ ನೀಡಬೇಕಾದ ಸಾಧ್ಯತೆ ಎದುರಾಗಲಿದೆ ಎಂದು ವೈದ್ಯರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+