ಏನಾಗಲಿದೆ ಎಂಬ ಕುತೂಹಲ ನಮಗೂ ಇದೆ; ಎಚ್ಡಿಕೆ
ನವದೆಹಲಿ,
ಮೇ.16: ರಾಜ್ಯದಲ್ಲಿ ಎದುರಾಗಿರುವ ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಎಚ್ ಡಿ ಕುಮಾರಸ್ವಾಮಿ ಅವರು ಕಾದು ನೋಡುವುದಾಗಿ ಹೇಳಿದ್ದಾರೆ. ಮುಂದೇನಾಗುವುದೋ ಎಂಬ ಕುತೂಹಲ ನಮಗೂ ಇದೆ ಎಂದು ಅವರು ದೆಹಲಿಯಲ್ಲಿ ಇಂದು ತಿಳಿಸಿದರು. id="toptextpromo">ಬಿಜೆಪಿ
ಮತ್ತು ಕಾಂಗ್ರೆಸ್ ಎರಡು ರಾಷ್ಟ್ರೀಯ ಪಕ್ಷಗಳು. ನಮ್ಮದು ಸಣ್ಣ ಪಕ್ಷ. ಎರಡು ದೊಡ್ಡ ಪಕ್ಷಗಳು ಮುಂದೇನು ತೀರ್ಮಾನ ತೆಗೆದುಕೊಳ್ಳುತ್ತವೋ ಎಂಬುದನ್ನು ಕಾದು ನೋಡುತ್ತಿದ್ದೇವೆ. ರಾಜ್ಯ ಪಾಲರ ಎಚ್ಚರಿಕೆಯನ್ನು ಕಡೆಗಣಿಸಿದ ಸರ್ಕಾರ ಅವರ ವಿರುದ್ಧ ಧರಣಿ ನಡೆಸಿ,ಅವರನ್ನು ಅವಹೇಳನ ಮಾಡಿದ್ದು ಸರಿಯಿಲ್ಲ ಎಂದರು. id='are-slot-1' class='oiad oi-axt oiadv'> id='top-searched-articles'>ಬಿಜೆಪಿ
ನಾಯಕರ ನಡವಳಿಕೆಗೆ ಧಕ್ಕ್ಕೆ ಬಂದಿದೆಯೇ ವಿನಃ ರಾಜ್ಯದ ಜನತೆಯ ಸ್ವಾಭಿಮಾನಕ್ಕಲ್ಲ.ಕಾನೂನಿನ ಅರಿವಿಲ್ಲದ ಸಣ್ಣಪುಟ್ಟ ಶಾಸಕರು, ಆ ಪಕ್ಷದ ಅಧ್ಯಕ್ಷರು ಹಾಗೂ ಸಿಎಂ ಎಲ್ಲರೂ ಸೇರಿ ಸಂವಿಧಾನದ ಮುಖ್ಯಸ್ಥರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.(ಏಜೆನ್ಸೀಸ್)











Click it and Unblock the Notifications