ಮೈಸೂರು ಬಳ್ಳಾರಿ ಹೊಸೂರು ತುಮಕೂರು ರಸ್ತೆ ಬಂದ್

ಬಳ್ಳಾರಿ ರಸ್ತೆ, ತುಮಕೂರು ರಸ್ತೆ, ಮೈಸೂರು ರಸ್ತೆ ಮತ್ತು ಹೊಸೂರು ರಸ್ತೆಗಳು ಬೆಳಿಗ್ಗೆ 11ರಿಂದ ಅಪರಾಹ್ನ 12ರವರೆಗೆ ಸಾರ್ವಜನಿಕ ಸಂಪರ್ಕದಿಂದ ಕಡಿತಗೊಳ್ಳಲಿವೆ. ಯಾವ ಸ್ಥಳಗಳಲ್ಲಿ ಈ ಬಂದ್ ನಡೆಯಲಿದೆ ಎಂಬ ವಿವರಗಳು ಇನ್ನೂ ಲಭ್ಯವಾಗಿಲ್ಲ. ಒಟ್ಟಿನಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುತ್ತದೋ ಬಿಡುತ್ತದೋ ಬಂದ್ ಮಾಡಿ ಬಿಜೆಪಿಯನ್ನು ಶತಾಯ ಗತಾಯ ತೊಲಗಿಸಲು ಕಾಂಗ್ರೆಸ್ ಸನ್ನದ್ಧವಾಗಿ ನಿಂತಿದೆ. [ಯಡಿಯೂರಪ್ಪಗೆ ಅಗ್ನಿಪರೀಕ್ಷೆ]
ಒಂದು ಆಟೋ ಅಡ್ಡಾದಿಡ್ಡಿ ಚಲಿಸಿದರೆ ಅಥವಾ ಒಂದು ಸಮಾವೇಶ ನಡೆಸಿದರೆ ಸಂಭವಿಸುವ ಟ್ರಾಫಿಕ್ ಜಾಮ್ ನಿಂದ ಎಂತಹ ತೊಂದರೆ ಆಗುತ್ತದೆಂಬುದನ್ನು ನಮ್ಮ ಬೆಂಗಳೂರಿಗರು ಬಲ್ಲರು. ಇನ್ನು ಮಟಮಟ ಮಧ್ಯಾಹ್ನ ಒಂದು ಗಂಟೆ ಬಂದ್ ಆದರೆ ಆಗುವ ತೊಂದರೆಯನ್ನು ರಸ್ತೆಯಲ್ಲಿ ಅಡ್ಡಾಡುವವರೇ ಊಹಿಸಬೇಕು. ಸಾರ್ವಜನಿಕರಿಗೆ ಈ ಬಂದ್ ನಿಂದಾಗುವ ಪೇಚಾಟದ ಬಗ್ಗೆ ನಮ್ಮ ರಾಜಕೀಯ ನಾಯಕರಿಗೆ ಎಳ್ಳಷ್ಟೂ ಕಾಳಜಿ ಇದ್ದಂತಿಲ್ಲ. ಇವರಿಗೆ ತಿಳಿ ಹೇಳುವವರು ಯಾರು? ಈ ನಾಲ್ಕು ಹೆದ್ದಾರಿಗಳಲ್ಲಿ ಅಡ್ಡಾಡುವ ಜನರು ಬಂದ್ ನೋಟೀಸನ್ನು ಗಮನಿಸುವುದು ಒಳಿತು. ಇಲ್ಲದಿದ್ದರೆ, ತೊಂದರೆ ತಪ್ಪಿದ್ದಲ್ಲ. [ರಾಜ್ಯಪಾಲರು ಮಾಡಿದ್ದು ಸರೀನಾ?]
ಬಿಜೆಪಿಯಿಂದ ರಾಜ್ಯವ್ಯಾಪಿ ಪ್ರತಿಭಟನೆ : ಎಲ್ಲ ಚುನಾಯಿತ ಬಿಜೆಪಿ ಪ್ರತಿನಿಧಿಗಳನ್ನು ದೆಹಲಿಗೆ ಕಳಿಸಿದ ನಂತರ ರಾಜ್ಯಪಾಲರ ವಿರುದ್ಧದ ಪ್ರತಿಭಟನೆಯನ್ನು ರಾಜ್ಯವ್ಯಾಪಿ ವಿಸ್ತರಿಸಲು ಬಿಜೆಪಿ ನಿರ್ಧರಿಸಿದೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ರಾಷ್ಟ್ರಪತಿ ಆಳ್ವಿಕೆ ಹೇರುವ ಶಿಫಾರಸನ್ನು ನಿರಾಕರಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ಸಿದ್ಧತೆಗಳನ್ನು ನಡೆಸುತ್ತದೆ. [ರಾಜ್ಯಪಾಲರ ಬಗ್ಗೆ ಈಶ್ವರಪ್ಪ]
ಇಂದು ಶಿವಮೊಗ್ಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡಿದ್ದರು. ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕರ್ತರು ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸಿ ಅವರ ಪ್ರತಿಕೃತಿಯನ್ನು ದಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ಸಮಯದಲ್ಲಿ ಪ್ರತಿಕೃತಿಗೆ ಹಚ್ಚಿದ ಬೆಂಕಿ ಕಾರ್ಯಕರ್ತನಿಗೂ ಹತ್ತಿಕೊಂಡು ಪ್ರತಿಭಟನಾಕಾರರೇ ದಿಕ್ಕೆಡುವಂತೆ ಮಾಡಿತು. [ಜ್ಯೋತಿಷಿ ಹೇಳೋದು ನಿಜವಾಗುವುದಾ?]











Click it and Unblock the Notifications