ಕನ್ನಿಮೋಳಿ ಜಾಮೀನು ವಿಚಾರಣೆ ಮೇ 20ಕ್ಕೆ ಮುಂದೂಡಿಕೆ
ನವದೆಹಲಿ,
ಮೇ 14 : ತಮಿಳುನಾಡಿನಲ್ಲಿ ಅಧಿಕಾರ ಕಳೆದುಕೊಂಡಿರುವ ಮುಖ್ಯಮಂತ್ರಿ ಎಂ ಕರುಣಾನಿಧಿ ಮಗಳು, ಸಂಸತ್ ಸದಸ್ಯೆ ಕನ್ನಿಮೋಳಿ ಜಾಮೀನು ಅರ್ಜಿ ವಿಚಾರಣೆಯನ್ನು ದೆಹಲಿಯ ವಿಶೇಷ ನ್ಯಾಯಾಲಯ ಮೇ 20ಕ್ಕೆ ಮುಂದೂಡಿದೆ. ಈ ನಿರ್ಣಯದಿಂದ 2ಜಿ ತರಂಗಗುಚ್ಛ ಹಗರಣದಲ್ಲಿ ಎ ರಾಜಾ ಜೊತೆ ಭಾಗಿಯಾಗಿದ್ದಾರೆಂಬ ಆರೋಪ ಹೊತ್ತಿರುವ ಕನ್ನಿಮೋಳಿ ಸದ್ಯಕ್ಕೆ ನಿರಾಳತೆಯಿಂದ ಉಸಿರಾಡಿಸುವಂತಾಗಿದೆ. id="toptextpromo">2ಜಿ
ಹಗರಣದಲ್ಲಿ 1.7 ಲಕ್ಷ ಕೋಟಿ ರು. (ಪುಟ್ಟಪರ್ತಿಯ ಸತ್ಯಸಾಯಿ ಟ್ರಸ್ಟ್ ಆಸ್ತಿ 1.5 ಲಕ್ಷ ಕೋಟಿ ರು.) ನುಂಗಿ ಹಾಕಿರುವ ಡಿಎಂಕೆ ಪಕ್ಷದ ಎ ರಾಜಾನಿಂದ 214 ಕೋಟಿ ರು. ಡೀಲ್ ಪಡೆದಿದ್ದಾರೆಂಬ ಆರೋಪ ಕನ್ನಿಮೋಳಿ ಹೊತ್ತಿದ್ದಾರೆ. ಆ ಹಣ ಡಿಎಂಕೆ ಒಡೆತನದಲ್ಲಿರುವ ಕಲೈಗ್ನರ್ ಟಿವಿ ಚಾನಲ್ಲಿಗೆ ಸಂದಾಯವಾಗಿದೆ. ಆ ಟಿವಿಯಲ್ಲಿ ಕನ್ನಿಮೋಳಿ ಶೇ.20ರಷ್ಟು ಶೇರು ಹೊಂದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಆದರೆ,
ಕನ್ನಿಮೋಳಿ ವಕೀಲ ರಾಮ್ ಜೇಠ್ಮಲಾನಿ ಹೇಳುವುದೇನೆಂದರೆ, ಆ ಹಣಕ್ಕೂ ಕನ್ನಿಮೋಳಿಗೆ ಸಂಬಂಧವೇ ಇಲ್ಲ. ಏಕೆಂದರೆ, ಕಲೈಗ್ನರ್ ಚಾನಲ್ಲಿನ ಯಾವ ಸಭೆಗೂ ಅವರ ಕಕ್ಷಿದಾರಿಣಿ ಹೋಗುತ್ತಿರಲಿಲ್ಲ ಎಂದು ವಾದಿಸಿದ್ದಾರೆ. ಅಲ್ಲದೆ, ಅವರೊಬ್ಬ ಹೆಣ್ಣುಮಗಳಾಗಿದ್ದು, ತಾಯಿಯೂ ಆಗಿರುವುದರಿಂದ ಕೃಪೆ ಮಾಡಿ ಜಾಮೀನು ದಯಪಾಲಿಸಬೇಕು ಎಂದು ವಿಶೇಷ ನ್ಯಾಯಾಲಯವನ್ನು ಜೇಠ್ಮಲಾನಿ ಅಂಗಲಾಚಿದ್ದಾರೆ. ಒಂದು ವೇಳೆ ಜಾಮೀನು ನಿರಾಕರಿಸಿದರೆ ಕನ್ನಿಮೋಳಿ ತಿಹಾರ್ ಜೈಲು ಸೇರುವುದು ಖಚಿತ.











Click it and Unblock the Notifications