ಪಾಕ್ ನಲ್ಲಿ ಅವಿತಿರುವ 50 ಉಗ್ರರ ಪಟ್ಟಿ ಸಲ್ಲಿಕೆ
ನವದೆಹಲಿ,
ಮೇ 11: ಅತ್ತ ಒಸಾಮಾ ಬಿನ್ ಲಾಡೆನ್ ಎಂಬ ರಣಹೇಡಿಯನ್ನು ಅಮೆರಿಕದ ಮಿಲಿಟರಿ ಪಡೆಗಳು ಹೊಡೆದುರುಳಿಸಿದ್ದೇ ತಡ ಇತ್ತ ಭಾರತ ತನ್ನ ಪುರಾತನ ವೈರಿ ಪಾಕಿಸ್ತಾನದ ವಿರುದ್ಧ ಹೆಚ್ಚಿನ ಒತ್ತಡ ಹೇರತೊಡಗಿದೆ. ಭಾರತದಿಂದ ತಲೆತಪ್ಪಿಸಿಕೊಂಡು ಪಾಕಿಸ್ತಾನದಲ್ಲಿ ಆಶ್ರಯ ಪಡೆದಿರುವ 50 ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯನ್ನು ಭಾರತ ಬುಧವಾರ ಬಿಡುಗಡೆ ಮಾಡಿದೆ. id="toptextpromo">ಪಟ್ಟಿಯಲ್ಲಿನ
ಮೊದಲು ಹೆಸರು ಮುಂಬೈ ಸರಣಿ ಸ್ಫೋಟದ ಕಾರಣಕರ್ತ ಭೂಗತ ಪಾತಕಿ ದಾವೂದ್ ಇಬ್ರಾಹಿಂ. 26/11 ಮುಂಬೈ ದಾಳಿಯ ರೂವಾರಿ ಹಾಗೂ ಲಷ್ಕರೆ ತೊಯ್ಬಾ ಸ್ಥಾಪಕ ಹಫೀಜ್ ಸಯೀದ್, ಝಕಿ ಉರ್ ರೆಹಮಾನ್ ಲಖ್ವಿ ಮುಂತಾದ ಹೆಸರುಗಳನ್ನೊಳಗೊಂಡ ಪಟ್ಟಿಯನ್ನು ಪಾಕ್ ಸರಕಾರಕ್ಕೆ ಭಾರತ ಸಲ್ಲಿಸಿದೆ. ಆದರೆ ಪಾಕಿಸ್ತಾನ ಪಟ್ಟಿಯಲ್ಲಿರುವ ಯಾವುದೇ ಉಗ್ರರು ತನ್ನ ನೆಲದಲ್ಲಿಲ್ಲ ಎಂಬ ಜಾಣ್ಮೆಯ ಉತ್ತರ ಪಾಕಿಸ್ತಾನ ನೀಡಿದೆ. id='are-slot-1' class='oiad oi-axt oiadv'> id='top-searched-articles'>ಕಂದಹಾರ್
ಹೈಜಾಕ್ ಪ್ರಕರಣದಲ್ಲಿ ಒತ್ತೆಯಾಗಿ ಬಿಡುಗಡೆಗೊಂಡ ಖದೀಮ ಮೌಲಾನಾ ಮಸೂದ್ ಅಜರ್ ಹೆಸರೂ ಇದೆ. ಇಲಿಯಾಸ್ ಕಶ್ಮೀರಿ, ಮೆಮನ್ ಇಬ್ರಾಹಿಂ ಅಲಿಯಾಸ್ ಟೈಗರ್ ಮೆಮನ್, ಛೋಟಾ ಶಕೀಲ್, ಅಬ್ದುಲ್ ರಜಾಖ್, ಅನಿಸ್ ಇಬ್ರಾಹಿಂ ಕಸ್ಕರ್ ಷೇಕ್ ಸೆರಿದಂತೆ ಮುಂಬೈ ಸರಣಿ ಸ್ಫೋಟದ ಇನ್ನೂ ಹಲವು ಪಾತಕಿಗಳು ಲಿಸ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ.











Click it and Unblock the Notifications