ಮೇ 29ರಿಂದ ಇಂಡಿಯನ್ ವಾಲಿಬಾಲ್ ಲೀಗ್ ಮಹಾಭಾರತ

ಮೇ 29ರಿಂದ ಜೂನ್ 24ರವರೆಗೆ ದೇಶದ 4 ನಗರಗಳಲ್ಲಿ ಅಂದಾಜು 2.7 ಕೋಟಿ ರುಪಾಯಿ ವೆಚ್ಚದೆಲ್ಲಿ ಐವಿಎಲ್ ನಡೆಯಲಿದೆ. ಒಟ್ಟು 27 ದಿನಗಳ ಕಾಲ 6 ತಂಡಗಳು ಸೆಣಸಲಿವೆ. ಐವಿಎಲ್ ವಿಜೇತ ತಂಡಕ್ಕೆ ದಕ್ಕಲಿದೆ ಬರೋಬ್ಬರಿ 22 ಲಕ್ಷ ರುಪಾಯಿ. ಇನ್ನು ಆರೂ ತಂಡಗಳ ಆಟಗಾರರಿಗೆ ತಲಾ 50 ಸಾವಿರ ರುಪಾಯಿ ಸಂದಾಯವಾಗಲಿದೆ.
ಐವಿಎಲ್ ಟೂರ್ನಮೆಂಟ್ ಬೆಂಗಳೂರಿನಲ್ಲಿ ಉದ್ಘಾಟನೆಗೊಂಡು ಹೈದರಾಬಾದಿನಲ್ಲಿ ಸಮಾರೋಪಗೊಳ್ಳಲಿದೆ. ಎಲ್ಲ ಐವಿಎಲ್ ಪಂದ್ಯಗಳೂ ಡಿಡಿ ಸ್ಪೋರ್ಟ್ಸ್ ನಲ್ಲಿ ನೇರ ಪ್ರಸಾರವಾಗಲಿದೆ. ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್ ಕಾರ್ಯದರ್ಶಿ, ಭಾರತೀಯ ವಾಲಿಬಾಲ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ಮತ್ತು ಚೊಚ್ಚಲ ಐವಿಎಲ್ ಸಂಘಟನಾ ಕಾರ್ಯದರ್ಶಿ ನಂದಕುಮಾರ್ ಕರ್ನಾಟಕ ಬುಲ್ಸ್ ತಂಡದ ಮಾಲೀಕರಾಗಿದ್ದಾರೆ.
ಕರ್ನಾಟಕ ಬುಲ್ಸ್ ತಂಡ ಇಂತಿದೆ:
ಸುರೇಶ್, ತೆನ್ನರಸನ್, ಶೆಲ್ವನ್ ಮೋಸಸ್, ಜಗದೀಶ್, ವಿಕ್ರಂ, ರವಿಕುಮಾರ್, ಇಮ್ತಿಯಾಜ್, ವಿನೋದ್, ಅನೂಪ್ ಡಿ ಕೋಸ್ಟ, ಸಂಜಯ್ ಕುಮಾರ್, ದರ್ಶನ್ ಮತ್ತು ದಿಲೀಪ್ ಕೊಯ್ವಲ್.
ಪಂದ್ಯಗಳು ಎಲ್ಲಿ, ಯಾವಾಗ?
* ಬೆಂಗಳೂರು : ಮೇ 29 ರಿಂದ ಜೂನ್ 2
* ಚೆನ್ನೈ : ಜೂನ್ 4 ರಿಂದ 8 ರವರೆಗೆ
* ಯಾನಾಂ (ಪುದುಚೇರಿ): ಜೂನ್ 12 ರಿಂದ 16 ರವರೆಗೆ
* ಹೈದರಾಬಾದ್ : ಜೂನ್ 20ರಿಂದ 24 ರವರೆಗೆ
ಆರು ತಂಡಗಳು ಯಾವುವು?
* ಬೆಂಗಳೂರಿನ ಕರ್ನಾಟಕ ಬುಲ್ಸ್
* ತಮಿಳುನಾಡಿನ ಚೆನ್ನೈ ಸ್ಟ್ರೈಕರ್ಸ್
* ಪುದುಚೇರಿಯ ಯಾನಾಂ ಟೈಗರ್ಸ್
* ಪುಣೆಯ ಮರಾಠಾ ವಾರಿಯರ್ಸ್
* ಆಂಧ್ರದ ಹೈದರಾಬಾದ್ ಚಾರ್ಜರ್ಸ್
* ಕೇರಳದ ಕೇರಳ ಕಿಲ್ಲರ್ಸ್












Click it and Unblock the Notifications