ಪ್ರೇಯಸಿಯನ್ನು ಕೊಂದು ಫ್ರಿಡ್ಜ್‌ನಲ್ಲಿಟ್ಟ ಪಾಪಿ ಪ್ರೇಮಿ

ಈ ಕೃತ್ಯದಲ್ಲಿ ಲೋಕೇಶ್‌ನ ಪತ್ನಿಯ ಕೈವಾಡವೂ ಇದೆ ಎನ್ನಲಾಗಿದೆ. ಈತನ ಪತ್ನಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ವಿವಾಹಿತನನ್ನು ಪ್ರೀತಿಸಿದ್ದೇ ತಪ್ಪಾಯಿತು ಫರಾನ್ ಸಾವಿಗೆ ಕಾರಣವಾಗಿದೆ. ಸ್ವತಃ ಚಂದ್ರದಾಸನೇ ಈ ಎಲ್ಲಾ ವಿವರಗಳನ್ನು ಪೊಲೀಸರಿಗೆ ನೀಡಿ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ.
ಅಪಾರ್ಟ್‌ಮೆಂಟ್‌ನಲ್ಲಿ ಯಾರಿಗೂ ಅನುಮಾನ ಬಾರದಂತೆ ತನ್ನ ಪ್ರೇಯಸಿಯ ಶವವನ್ನು ಫ್ರಿಡ್ಜ್‌ನಲ್ಲಿ ಇಟ್ಟಿದ್ದಾಗಿ ಆರೋಪಿ ಚಂದ್ರದಾಸ ತಿಳಿಸಿದ್ದಾನೆ. ಕೊನೆಗೆ ಬುಧವಾರ ಈ ವಿಷಯವನ್ನು ಪೊಲೀಸರಿಗೆ ತಿಳಿಸುವ ಮೂಲಕ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಅಪಾರ್ಟ್‌ಮೆಂಟ್‌ನ 11 ಮಹಡಿಯಲ್ಲಿ ಈ ಘಟನೆ ನಡೆದಿದೆ.
ಪತ್ನಿಯೊಂದಿಗೆ ಜಗಳವಾಡಿಕೊಂಡಿದ್ದ ಚಂದ್ರದಾಸ ಕೆಲ ದಿನಗಳ ಹಿಂದೆ ಹೃಷಿಕೇಷಕ್ಕೆ ಹೋಗಿದ್ದ. ಅಲ್ಲಿ ಆತನಿಗೆ ಯೋಗ ಕ್ಲಾಸಿನಲ್ಲಿ ಇಸ್ರೇನ್‌ನ ಫರಾನ್ ಪರಿಚಯವಾಗಿದ್ದಳು. ಬಳಿಕ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿದೆ. ತನಗೆ ವಿವಾಹವಾಗಿರುವ ವಿಷಯವನ್ನು ಫರಾನ್‌ಗೆ ತಿಳಿಸದೆ ಗುಟ್ಟಾಗಿ ಇಟ್ಟಿದ್ದ ಚಂದ್ರದಾಸ. ಆಕೆಯನ್ನು ಮದುವೆಯಾಗುವುದಾಗಿಯೂ ನಂಬಿಸಿದ್ದ.
ಬೆಂಗಳೂರಿಗೆ ಹಿಂತಿರುಗಿದ ಬಳಿಕ ಹಂತಹಂತವಾಗಿ ಫರಾಜ್ ಜೊತೆಗಿನ ಸಂಬಂಧವನ್ನು ಕಡಿಮೆ ಮಾಡಿಕೊಳ್ಳುತ್ತಾ ಬಂದ. ಕಡೆಗೆ ಫರಾನ್ ಪ್ರೇಮಿಯನ್ನು ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದಾರೆ. ಆಗ ಆಕೆಗೆ ಚಂದ್ರದಾಸ ಮದುವೆಯಾಗಿರುವ ವಿಷಯ ಗೊತ್ತಾಗಿದೆ. ಈ ವಿಷಯವಾಗಿ ಚಂದ್ರದಾಸ ದಂಪತಿಗಳು ಹಾಗೂ ಫರಾನ್ ನಡುವೆ ಜಗಳವೂ ನಡೆದಿದೆ. ಕಡೆಗೆ ಆಕೆಯ ಕಾಟಕ್ಕೆ ಬೇಸತ್ತು ಹೊಡೆದು ಕೊಲೆ ಮಾಡಿ ಫ್ರಿಡ್ಜ್ ನಲ್ಲಿ ಇಟ್ಟಿದ್ದರು. ಕೊನೆಗೆ ಎಲ್ಲವನ್ನೂ ಪೊಲೀಸರ ಬಳಿ ಹೇಳಿ ತಪ್ಪೊಪ್ಪಿಕೊಂಡಿದ್ದಾರೆ.












Click it and Unblock the Notifications