ವಿಕೃತಕಾಮಿ, ಸೈಕೋಪಾತ್ ಭೀತಿಯಲ್ಲಿ ದಾವಣಗೆರೆ
ದಾವಣಗೆರೆ,
ಮೇ 4: ಸೈಕೋಪಾತ್, ವಿಕೃತಕಾಮಿ ಜೈಶಂಕರ್ ಭೀತಿಯಲ್ಲಿ ದಾವಣಗೆರೆ ಜನರು ಕಳೆಯುತ್ತಿದ್ದಾರೆ. ನಿನ್ನೆ ರಾತ್ರಿ ಆಗುಂತಕನೊಬ್ಬರ ಲಾಯರ್ಸ್ ರಸ್ತೆಯಲ್ಲಿರುವ ಮನೆಯೊಂದಕ್ಕೆ ನುಗ್ಗಿದಾಗ ಅಲ್ಲಿದ್ದ ಪುಟ್ಟ ಹುಡುಗಿ ಜೋರಾಗಿ ಕಿರುಚಿ ಮೂರ್ಚೆ ಹೋದಳು. ಬಾಲಕಿಯ ಕಿರುಚಾಟ ಕೇಳಿ ಮನೆಯೊಳಗಿದ್ದವರು ಮತ್ತು ನೆರೆಹೊರೆಯವರು ಓಡಿಬಂದರು. id="toptextpromo">ಆದರೆ
ಜನರು ಬರುತ್ತಿದ್ದಂತೆ ಆಗುಂತಕ ಅಲ್ಲಿಂದ ಪರಾರಿಯಾದ. ಬಂದಾತ ಸೈಕೋಪಾತ್ ಎಂಬ ವಂದಂತಿ ಕಾಡ್ಗಿಚ್ಚಿನಂತೆ ಹಬ್ಬತೊಡಗಿತು. ಸುದ್ದಿ ತಿಳಿದ ತಕ್ಷಣ ಅಲ್ಲಿಗೆ ಹೆಚ್ಚುವರಿ ಪೋಲಿಸ್ ಸುಪರಿಡೆಂಟ್ ಅಧಿಕಾರಿ ಕುಮಾರ್ ಎಸ್ ಕಾರ್ನಿಂಗ್ ತಮ್ಮ ಸಿಬ್ಬಂದಿಗಳೊಂದಿಗೆ ದೌಡಾಯಿಸಿದರು. ಅಲ್ಲಿದ್ದವರಿಗೆಲ್ಲ ವಿಕೃತಕಾಮಿ ಜೈಶಂಕರ್ ಫೋಟೋ ತೋರಿಸಲಾಯಿತು. ಆದರೆ ಬಂದಾತ ಸೈಕೋಪಾತ್ ಜೈಶಂಕರ್ ಅಲ್ಲವೆಂದು ಆಮೇಲೆ ಸ್ಪಷ್ಟವಾಯಿತು. id='are-slot-1' class='oiad oi-axt oiadv'> id='top-searched-articles'>;ಯಾರವನು
ಸೈಕೋಪಾತ್?: ಇವನ ಹೆಸರು ಎಂ. ಶಂಕರ್ ಆಲಿಯಾಸ್ ಜೈಶಂಕರ್. ಸುಮಾರು 19 ಕೊಲೆ, ಅತ್ಯಾಚಾರಗಳ ಪ್ರಕರಣಗಳಲ್ಲಿ ಪೋಲಿಸರಿಗೆ ಈತ ಮೋಸ್ಟ್ ವಾಂಟೆಡ್ ವ್ಯಕ್ತಿ. ವೃತ್ತಿಯಲ್ಲಿ ಚಾಲಕನಾಗಿದ್ದ ಈತನ ಕಪ್ಪು ಬ್ಯಾಗ್ ನಲ್ಲಿ ಮಚ್ಚು ಸದಾ ಇರುತ್ತದೆ. ಹೈವೇ ಬದಿಗಳಲ್ಲಿರುವ ಒಂಟಿ ಮನೆಗಳಿಗೆ ನುಗ್ಗಿ ಮಹಿಳೆಯರನ್ನು ಅತ್ಯಾಚಾರ ಮಾಡಿ ಕೊಲೆ ಮಾಡುತ್ತಾನೆ. [ಓದಿ: ವಿಕೃತ
ಕಾಮಿ
ಹುಡುಕಾಟಕ್ಕೆ
ಸಹಕರಿಸಿ]












Click it and Unblock the Notifications