ಲಾಡೆನ್‌ನನ್ನು ಸಮುದ್ರಕ್ಕೆ ಎಸೆಯಬಾರದಿತ್ತು: ದಿಗ್ವಿಜಯ್ ಸಿಂಗ್

Digvijay Singh
ನವದೆಹಲಿ, ಮೇ.4: ಇದನ್ನೆ ನೋಡಿ ಸುಮ್ಮನಿರಲಾರದೆ ಮೈಮೇಲೆ ಇರುವೆ ಬಿಟ್ಟುಕೊಂಡರು ಎನ್ನುವುದು. ಪರಮ ಪಾತಕಿ ಒಸಾಮಾ ಬಿನ್ ಲಾಡೆನ್‌ನನ್ನು ಅಮೆರಿಕಾ ಪಡೆಗಳು ಹತ್ಯೆಗೈದ ಬಳಿಕ ಸಮುದ್ರಕ್ಕೆ ಎಸೆದು ಜಲಸಮಾಧಿ ಮಾಡಿ ಕೈತೊಳೆದುಕೊಂಡರು. ಅದರೆ ಈ ಬಗ್ಗೆ ಕಾಂಗ್ರೆಸ್‌ನ ಹಿರಿಯ ಮುಖಂಡ ದಿಗ್ವಜಯ್ ಸಿಂಗ್ ಮಾತ್ರತಕರಾರು ತೆಗೆದಿದ್ದರು. ಲಾಡೆನ್ ಶವವನ್ನು ಸಮುದ್ರಕ್ಕೆ ಎಸೆಯಬಾರದಿತ್ತು. ಇದು ಇಸ್ಲಾಂ ಧರ್ಮಕ್ಕೆ ವಿರುದ್ಧ ಎಂದು ಹೇಳಿ ಭಾರಿ ವಿವಾದವನ್ನೇ ತಮ್ಮ ಮೈಮೇಲೆ ಎಳೆದುಕೊಂಡಿದ್ದಾರೆ.

ಒಸಾಮಾ ಬಿನ್ ಲಾಡೆನ್ ಏನೋ ಅತಿದೊಡ್ಡ ಉಗ್ರ ಇರಬಹುದು. ಆದರೆ ಆತನ ಧರ್ಮವನ್ನು ಅಮೆರಿಕಾದ ಸಿಐಎ ಪಡೆ ಗೌರವಿಸಬೇಕಾಗಿತ್ತು. ಜಲ ಸಮಾಧಿ ಮಾಡದೆ, ಇಸ್ಲಾಂ ಧರ್ಮದ ಪ್ರಕಾರ ಆತನ ಅಂತ್ಯಕ್ರಿಯೆ ಮಾಡಬೇಕಾಗಿತ್ತು ಎಂದು ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದರು. ದಿಗ್ವಿಜಯ್ ಸಿಂಗ್ ಹೇಳಿಕೆ ಹೊಸ ವಿವಾದಕ್ಕೆ ಕಾರಣವಾಗಿದೆ.

ಈ ಕುರಿತು ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ವಿವರಣೆ ನೀಡಿದ್ದು, ಲಾಡೆನ್ ಕುರಿತ ದಿಗ್ವಿಜಯ್ ಸಿಂಗ್ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವಾಗಿದೆಯೇ ವಿನಃ ಪಕ್ಷದ ಅಭಿಪ್ರಾಯವಲ್ಲ ಎಂದಿದ್ದಾರೆ. ದಿಗ್ವಿಜಯ್ ಸಿಂಗ್ ಅವರ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಗೊಂದಲವಿಲ್ಲ. ಲಾಡೆನ್ ಹತ್ಯೆ ಬಗ್ಗೆ ಈಗಾಗಲೆ ಕಾಂಗ್ರೆಸ್ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ ಎಂದಿದ್ದಾರೆ ತಿವಾರಿ.

ಈ ಹಿಂದೆ ಅಫ್ಜಲ್‌ ಗುರು ಗಲ್ಲು ಶಿಕ್ಷೆಗೆ ಸಂಬಂಧಿಸಿದಂತೆ ದಿಗ್ವಿಜಯ್ ಸಿಂಗ್ ಕಾಶ್ಮಿರದ ಮುಸ್ಲಿಮರು ಆಕ್ರೋಶ ವ್ಯಕ್ತಪಡಿಸಲಿದ್ದಾರೆ ಎಂದು ಹೇಳಿದ್ದರು. ಈ ರೀತಿಯ ಹೇಳಿಕೆಗಳನ್ನು ನೀಡುತ್ತಿರುವುದು ಇದೇ ಮೊದಲಲ್ಲ ಬಿಡಿ. ಅವರ ಹೇಳಿಕೆಗಳಿಗೆ ಯಾವುದೇ ಮಹತ್ವವನ್ನು ನೀಡುವ ಅಗತ್ಯವಿಲ್ಲ ಎಂದು ಕಾಂಗ್ರೆಸ್ ಪಕ್ಷ ಸ್ಪಷ್ಟಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+