ಹಂಪಿಯಲ್ಲಿ ದಂಧೆ ನಿರತ ಬಾಂಗ್ಲಾ ವೇಶ್ಯೆ ಬಂಧನ
ಬಳ್ಳಾರಿ:
ವಿಶ್ವ ಪರಂಪರೆ ಹೊಂದಿರುವ ಹಂಪಿ ಇಂದು ಅಕ್ರಮ ಚಟುವಟಿಕೆ, ಅನೈತಿಕ ಕೂಟವಾಗಿ ಕುಖ್ಯಾತಿ ಗಳಿಸುತ್ತಿದೆ. ಈ ನಡುವೆ ಅಲ್ಲಿನ ಪೋಲಿಸರು ಕೂಡ ಸ್ವಲ್ಪ ಚುರುಕಾಗಿರುವಂತೆ ಕಂಡು ಬರುತ್ತಿದ್ದು ದಂಧೆ ನಿರತರನ್ನು ಬಂಧಿಸುತ್ತಿದ್ದಾರೆ. ನಿನ್ನೆ ಹಂಪಿ ಐತಿಹಾಸಿಕ ತಾಣದ ಆಸುಪಾಸಿನಲ್ಲಿ ವೇಶ್ಯಾವಾಟಿಕೆಯಲ್ಲಿ ನಿರತರಾಗಿದ್ದ ಮೂವರು ಮಹಿಳೆಯರನ್ನು ಪೋಲಿಸರು ಬಂಧಿಸಿದ್ದಾರೆ. id="toptextpromo">ಆಶ್ಚರ್ಯಕರ
ವಿಷಯವೆಂದರೆ ಈ ಮೂವರು ವೇಶ್ಯೆಯರಲ್ಲಿ ಒಬ್ಬಳು ಬಾಂಗ್ಲಾದೇಶದವಳು. ಬಾಂಗ್ಲಾದ ಸೋನಾಲಿ ಎಂಬಾಕೆ ಮೂರು ದಿನದ ಹಿಂದೆ ಕೊಲ್ಕಾತ್ತದಿಂದ ಮಗುವಿನೊಂದಿಗೆ ಪಾಸ್ ಪೋರ್ಟ್ ಇಲ್ಲದೆ ಬಂದಿರುವುದಾಗಿ ತಿಳಿಸಿದ್ದಾಳೆ. ಈಕೆ ಹೊಸಪೇಟೆಯ ಸುಜಾತ ಮತ್ತು ಸಲ್ಮಾ ಎಂಬವರೊಂದಿಗೆ ದಂಧೆ ನಿರತಳಾಗಿದ್ದಳು ಎನ್ನಲಾಗಿದೆ. ಇವರೊಂದಿಗಿದ್ದ ಮೂವರು ಗಂಡಸರು ಪರಾರಿಯಾಗಿದ್ದು, ಅವರ ಹುಡುಕಾಟದಲ್ಲಿರುವುದಾಗಿ ಪೋಲಿಸರು ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಈ
ಹಿಂದೆ ಇಂತಹ ಅಕ್ರಮ ಚಟುವಟಿಕೆಗಳ ತಾಣವಾಗಿದ್ದ ಹಂಪಿ ಸಮೀಪದ ವಿರುಪಾಪುರಗುಡ್ಡೆಯನ್ನು ಸ್ಥಳೀಯರು ಶುಚೀಕರಿಸಲು ಪ್ರಯತ್ನಿಸಿದ್ದರು. ಸ್ಥಳೀಯರ ಈ ನಿರ್ಧಾರದಿಂದ ವಿಶ್ವ ಪರಂಪರೆ ತಾಣವಾದ ಹಂಪೆ ಸಮೀಪದ ಅಕ್ರಮ ರೆಸಾರ್ಟ್ ಗಳನ್ನು ತೆರವುಗೊಳಿಸಲು ವಿಶ್ವಪರಂಪರೆ ಪ್ರಾಧಿಕಾರ ಸೂಚನೆ ನೀಡಿತ್ತು.











Click it and Unblock the Notifications