• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಸಾಮಾ ಬಿನ್ ಲಾಡೆನ್ ಸಾಹೇಬ ಸತ್ತಿದ್ದು ಹೇಗೆ?

By Srinath
|

ಇಸ್ಲಾಮಾಬಾದ್, ಮೇ. 02 : ಪಾಕಿಸ್ತಾನದ ಹೃದಯಭಾಗದಲ್ಲಿ ಬೀಜಾಸುರ ಒಸಾಮಾ ಬಿನ್ ಲಾಡೆನ್ ಹೆಣವಾಗಿದ್ದು ಹೇಗೆ? ನಿಖರ ಮಾಹಿತಿ ಇಲ್ಲಿದೆ. ಸ್ಥಳೀಯ ಕಾಲ ಮಾನದ ಪ್ರಕಾರ ಮೇ 2ರ ಬೆಳಗಿನ ಜಾವ 1.15 ರಿಂದ 2 ಗಂಟೆವರೆಗೆ ಸಲ್ಲುವ ಶುಭ ಲಗ್ನದಲ್ಲಿ ಕಿಲ್ ಲಾಡೆನ್ ಕಾರ್ಯಾಚರಣೆ ಮುಗಿದಿದೆ. ಇದಕ್ಕೆ ತಗುಲಿದ ಸಮಯ 45 ನಿಮಿಷ.

ಕಾರ್ಯಾಚರಣೆಯಲ್ಲಿ ಒಟ್ಟು 20 ಜನ ಸತ್ತರು. ಆಪರೇಷನ್ ಲಾಡೆನ್ ಮುಗಿಯುತ್ತಿದ್ದಂತೆ ಅವನ ಇಬ್ಬರು ಪತ್ನಿಯರು, ನಾಲ್ವರು ಪುತ್ರರನ್ನು ಅಮೆರಿಕದ ಸೈನಿಕರು ಎತ್ತಿಹಾಕಿಕೊಂಡು ಹೋಗಿದ್ದಾರೆ. ಎಲ್ಲಿಗೆ, ಯಾತಕ್ಕೆ ತಕ್ಷಣಕ್ಕೆ ಗೊತ್ತಿಲ್ಲ.

ಅಂದಹಾಗೆ ಲಾಡೆನ್ ಮಾರ್ಚ್ 10, 1957ರಂದು ಸೌದಿ ಅರೇಬಿಯಾದ ರಿಯಾದ್ ನಲ್ಲಿ ಶ್ರೀಮಂತ ಕುಟುಂಬದಲ್ಲಿ ಜನಿಸಿದವ. ಅವರಪ್ಪನಿಗೆ 10 ಹೆಂಡತಿಯರು. ಕೆಲವರು ಹೇಳುವ ಪ್ರಕಾರ ಅವ ಪದವಿ ವರೆಗೂ ಓದಿಕೊಂಡಿದ್ದ. ಅಮೆರಿಕಾ, ಕ್ರಿಶ್ಚಿಯನ್ ಜನರ ಬಗ್ಗೆ ಅವನಿಗೆ ಅಸಹನೆ. ಬೈ ದ ವೇ, 'ಆಪರೇಶನ್ 01/05' ಗೆ ಅಮೆರಿಕದ ಅಧ್ಯಕ್ಷ ಒಬಾಮಾ ಶುಕ್ರವಾರವೇ (ಏಪ್ರಿಲ್ 27) ಸುಪಾರಿ ನೀಡಿದ್ದಾರೆ. ಇನ್ನು, ಅಲಬಾಮಾಗೆ ಪ್ರವಾಸಕ್ಕೆ ತೆರಳುವ ಮುನ್ನ ರಾಜತಾಂತ್ರಿಕ ಕೊಠಡಿಯಲ್ಲಿ ಏಪ್ರಿಲ್ 29ರಂದು ಬೆಳಗ್ಗೆ 8.20 ಕ್ಕೆ ಒಬಾಮಾ ಸುಪಾರಿಗೆ ಅಧಿಕೃತ ಮುದ್ರೆ ಒತ್ತಿದ್ದಾರೆ.

ಆದರೆ ಕಾರ್ಯಾಚರಣೆ ಎಷ್ಟು ರಹಸ್ಯವಾಗಿತ್ತೆಂದರೆ ಒಬಾಮಾ ಆಡಳಿತದ ಕೆಲವೇ ಮಂದಿಗೆ ಮಾತ್ರ ಇದರ ಬಗ್ಗೆ ಮಾಹಿತಿ ಇತ್ತು. ಇನ್ನು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವರ ಸಂಖ್ಯೆಯೂ ಕಡಿಮೆಯೇ. ತನಗೆ ಹೆಚ್ಚು ಅನಾಹುತವಾಗುವುದು ಬೇಡ ಎಂಬುದು ಅಮೆರಿಕದ ಲೆಕ್ಕಾಚಾರವಾಗಿತ್ತು. ಕಾರ್ಯಾಚರಣೆಯಲ್ಲಿ ಬಳಸಲಾದ ಹೆಲಿಕಾಪ್ಟರ್ ಗಳು ಎಂಥವು, ಯಾರೆಲ್ಲ ಪಾಲ್ಗೊಂಡಿದ್ದರು ಎಂಬುದರ ಬಗ್ಗೆ ಗೌಪ್ಯತೆ ಕಾಪಾಡಲಾಗಿದ್ದು, ಅವುಗಳ ವಿವರಗಳನ್ನು ಬಹಿರಂಗಪಡಿಸಿಲ್ಲ.ದಾಳಿಯ ವೇಳೆ ಒಂದು ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ನೆಲದ ಮೇಲೆ ಬಿದ್ದಿತ್ತು. ಆದರೆ ಅಮೆರಿಕ ಸೇನೆ ಗೌಪ್ಯತೆಯ ದೃಷ್ಟಿಯಿಂದ ತಕ್ಷಣ ಅದನ್ನು ಸಂಪೂರ್ಣವಾಗಿ ನಾಶಮಾಡಿದೆ.

ಓವರ್ ಟು ಅಬೊತಾಬಾದ್ ನಗರ: ನಗರದ ಹೊರಭಾಗದಲ್ಲಿ ಪಾಕಿಸ್ತಾನದ ಮಿಲಿಟರಿ ಅಕಾಡೆಮಿ ಇದೆ. ಅಲ್ಲಿ ಬ್ರಿಗೇಡಿಯರ್ ಸ್ಥಾನದ ಅಧಿಕಾರಿ ಮತ್ತು ಸಾವಿರಾರು ಯೋಧರು ತರಬೇತಿಯಲ್ಲಿರುತ್ತಾರೆ. ಅಲ್ಲಿಂದ ಕೂಗಳತೆಯಲ್ಲಿ ಕೃಷಿ ಜಮೀನಿನಲ್ಲಿ 18 ಅಡಿ ಎತ್ತರದ ಬಿಳಿ ಗೋಡೆಗಳಿಂದ ಸುತ್ತುವರಿದ ಎರಡು ಅಂತಸ್ತಿನ ಐಷಾರಾಮಿ ಮನೆಯಲ್ಲಿ ಲಾಡೆನ್ ತನ್ನ ಪರಮಾಪ್ತ ಬಂಟರು, ಮಕ್ಕಳು ಮರಿಗಳೊಂದಿಗೆ ವಾಸ್ತವ್ಯ ಹೂಡಿದ್ದ. ಈ ಮನೆಗೆ ದೂರವಾಣಿ, ಟಿವಿ ಸವಲತ್ತುಗಳು ಇರಲಿಲ್ಲ. ಹೆಚ್ಚು ಕಿಟಕಿ, ಬಾಗಿಲುಗಳೂ ಇರಲಿಲ್ಲ. ಕಳೆದ ಆಗಸ್ಟ್ ನಲ್ಲಿ ಅಮೆರಿಕದ ಬೇಹುಗಾರಿಕೆಗೆ ಲಾಡೆನ್ ಇಲ್ಲಿ ಅಡಗಿರುವ ಬಗ್ಗೆ ವಾಸನೆ ಬಡಿದಿತ್ತು.

ಬ್ರಿಟನ್ನಿನ ಸೇನಾಧಿಕಾರಿ ಮೇಜರ್ ಜೇಮ್ಸ್ ಅಬೋತ್ ಈ ಪಟ್ಟಣವನ್ನು 1853ರಲ್ಲಿ ನಿರ್ಮಿಸಿದ. ಆತನ ಹೆಸರಿನಲ್ಲಿಯೇ ಇದನ್ನು ಅಬೋತಾಬಾದ್ ಎಂದು ಕರೆಯಲಾಗುತ್ತಿದೆ. ಪಾಕಿಸ್ತಾನ ಮತ್ತು ಚೀನಾವನ್ನು ಸಂಪರ್ಕಿಸುವ ಕಾರಾಕೊರಮ್ ಹೆದ್ದಾರಿಗೆ ಈ ಪಟ್ಟಣ ಹೊಂದಿಕೊಂಡಂತಿದೆ. 2005ರಲ್ಲಿ ಈ ಅಡಗುತಾಣದ ನಿರ್ಮಾಣವಾಗಿತ್ತು. ಆಗಿನಿಂದಲೇ ಇದು ಉಗ್ರರ ಕಾರ್ಖಾನೆ ಆಗಿತ್ತು.

ಒಳಗೆ ವಾಸಿಸುತ್ತಿದ್ದವರು ಸ್ಥಳೀಯ ಜನರ ಜತೆ ಎಂದಿಗೂ ಬೆರೆಯುತ್ತಿರಲಿಲ್ಲ. ಸ್ಥಳೀಯರ ಪ್ರಕಾರ ಮೂರು ಹೆಲಿಕಾಪ್ಟರ್ ಗಳನ್ನು ಕಾರ್ಯಾಚರಣೆಗೆ ಬಳಸಲಾಗಿತ್ತು. ಅನೇಕ ಬಾರಿ ಭಾರಿ ಸ್ಫೋಟಗಳು ಜತೆಗೆ ಭಾರಿ ಗುಂಡಿನ ಕಾಳಗ ನಡೆದಿದೆ. ಕೊನೆಗೆ ಲಾಡೆನ್ ನೆತ್ತಿಗೆ ಗುಂಡು ಬಿದ್ದಾಗ ಸಾವನ್ನಪ್ಪಿದ್ದಾನೆ. ಅವನ ಇಬ್ಬರು ಪತ್ನಿಯರು, ಮಕ್ಕಳು, ಮೊಮ್ಮಕ್ಕಳು ಇದೇ ಸಂದರ್ಭದಲ್ಲಿ ಸಾವಿಗೀಡಾಗಿದ್ದಾರೆ.

ದಾಳಿಯಲ್ಲಿ ಲಾಡೆನ್, ಒಬ್ಬ ಪುತ್ರ, ಇಬ್ಬರು ಸೇವಕರು, ಒಬ್ಬ ಮಹಿಳೆ ಹತ್ಯೆಗೀಡಾಗಿದ್ದಾಳೆ. ಲಾಡೆನ್ ನ ಹೆಂಡತಿಯರು ಎನ್ನಲಾದ ಇಬ್ಬರು ಮಹಿಳೆಯರು ಮತ್ತು ಅವನ ನಾಲ್ವರು ಪುತ್ರರನ್ನು ದಾಳಿಯ ನಂತರ ಈ ಅಡಗುದಾಣದಿಂದ ಕರೆದೊಯ್ಯಲಾಗಿದೆ. ಎಲ್ಲಿಗೆ ಎಂಬ ಬಗ್ಗೆ ಸುಳಿವಿಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Al-Qaeda chief Osama bin Laden was hiding in a massive compound located just 800 yards from the Pakistan Military Academy (PMA) near Abbottabad city when he was killed in a pre-dawn raid by US special forces today (May 2). How the end came?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more