ಬೆಂಗಳೂರಿನಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆ
ಬೆಂಗಳೂರು,
ಮೇ.1: ಬೆಳಗ್ಗೆಯಿಂದ ಸಂಜೆ ತನಕ ಬಿಸಿಲಿನ ತಾಪಕ್ಕೆ ತತ್ತರಿಸಿದ್ದ ಬೆಂಗಳೂರಿಗರಿಗೆ ಸಂಜೆ ಸುರಿದ ಧಾರಾಕಾರ ಮಳೆ ಕೊಂಚ ತಂಪೆರೆಯಿತು. ಜನಯನಗರ, ಹನುಮಂತನಗರ, ಪದ್ಮನಾಭನಗರ, ಚಾಮರಾಜನಗರ, ಗಿರಿನಗರ, ನಾಯಂಡಹಳ್ಳಿಯಲ್ಲಿ ಭಾರಿ ಮಳೆ ದಾಖಲಾಗಿದೆ. ಸದ್ಯಕ್ಕೆ ಎಷ್ಟು ಪ್ರಮಾಣದ ಮಳೆಯಾಗಿದೆ ಎಂಬ ವಿವರಗಳು ಲಭ್ಯವಿಲ್ಲ. id="toptextpromo">ನಗರದ
ಕೆಲವೆಡೆ ಆಲಿಕಲ್ಲು ಸಮೇತ ಮಳೆ ಬಿದ್ದಿದೆ. ಅಶೋಕ ಪಿಲ್ಲರ್ ಬಳಿ ಮರವೊಂದು ಧರೆಗೆ ಉರುಳಿಬಿದ್ದ ಕಾರಣ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಮಳೆಯ ಕಾರಣ ನಗರದ ಹಲವೆಡೆ ರಸ್ತೆ ಸಂಚಾರದಲ್ಲಿ ವ್ಯತ್ಯಯ ಕಂಡುಬಂತು. ಕೊಂಚ ಬಿಡುವು ತೆಗೆದುಕೊಂಡಿದ್ದ ಮಳೆರಾಯ ಇಂದು ಭಾನುವಾರ ಬೆಂಗಳೂರನ್ನು ತಂಪಾಗಿಸಿದ್ದಾನೆ. id='are-slot-1' class='oiad oi-axt oiadv'> id='top-searched-articles'>ಇಂಡಿಯನ್
ಎಕ್ಸ್‌ಪ್ರೆಸ್, ಬ್ಯಾಟರಾಯನಪುರ, ಶಿವಾಜಿನಗರ ಮುಂದಾದ ಕಡೆಗಳಲ್ಲೂ ಕಾರ್ಮೋಡಗಳು ಕವಿದಿದ್ದು ಗುಡುಗು ಸಹಿತ ಭಾರಿ ಮಳೆಯನ್ನು ನಿರೀಕ್ಷಿಸಲಾಗಿದೆ. ಉಳಿದೆಡೆ ಆಕಾಶ ಶುಭ್ರವಾಗಿದ್ದು ಮೋಡಗಳು ಚದುರಿದ ವಾತಾವರಣ ಕಂಡುಬಂದಿದೆ. ಬೆಂಗಳೂರಿನಲ್ಲಿ ವರುಣ ಅಬ್ಬರ ಮುಂದುವರಿಯುವ ಸಾಧ್ಯತೆಗಳಿವೆ.











Click it and Unblock the Notifications