ಮುಂಬೈನಲ್ಲಿ ಬೆಂಗಳೂರು ವೈದ್ಯೆಯ ಲೈಂಗಿಕ ಪೀಡನೆ

Bangalore dentist molested in Mumbai
ಮುಂಬೈ, ಏ. 29 : ಶಸ್ತ್ರ ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ 26ರ ಹರೆಯದ ಬೆಂಗಳೂರಿನ ದಂತ ವೈದ್ಯೆಯನ್ನು ಗೋರೆಗಾಂವ್ ನ ಖಾಸಗಿ ಆಸ್ಪತ್ರೆಯೊಂದರ ವಾರ್ಡ್ ಬಾಯ್ ಅಸಭ್ಯವಾಗಿ ನಡೆದುಕೊಂಡಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಲೈಂಗಿಕ ಹಿಂಸಾಚಾರಕ್ಕೆ ಒಳಗಾದ ವೈದ್ಯೆ ಬೆಂಗಳೂರಿನಲ್ಲಿ ದಂತ ವೈದ್ಯೆಯಾಗಿ ವೃತ್ತಿನಿರತರಾಗಿದ್ದಾರೆ. ಆಕೆಯ ತಂದೆ ತಾಯಿಯರು ಮುಂಬೈನಲ್ಲಿ ವಾಸವಾಗಿದ್ದಾರೆ. ಅವರು ಲೇಸರ್ ಶಸ್ತ್ರ ಚಿಕಿತ್ರೆಗೆಂದು ಪಶ್ಚಿಮ ಗೋರೆಗಾಂವ್ ನ ಎಂ.ಜಿ. ರಸ್ತೆಯಲ್ಲಿರುವ ಮಲ್ಟಿಸ್ಪೆಷಾಲಿಟಿ ಕಪಾಡಿಯಾ ಆಸ್ಪತ್ರೆಗೆ ಬುಧವಾರ ದಾಖಲಾಗಿದ್ದರು.

ಶಸ್ತ್ರಚಿಕಿತ್ಸೆ ನಡೆಸುವ ಮುನ್ನ ಲೋಕಲ್ ಅನೆಸ್ಥೀಶಿಯಾ ನೀಡಿಲಾಗಿತ್ತು ಮತ್ತು ಸರ್ಜರಿ ನಡೆಯುವಾಗ ಕೂಡ ಸಂಪೂರ್ಣ ಪ್ರಜ್ಞಾವಸ್ಥೆಯಲ್ಲಿದ್ದೆನೆಂದು ವೈದ್ಯೆ ಹೇಳಿದ್ದಾರೆ. ಶಸ್ತ್ರಚಿಕಿತ್ಸೆ ಮುಗಿದ ನಂತರ ಅವರನ್ನು ವಾರ್ಡ್ ಗೆ ಕರೆದೊಯ್ಯುವಾಗ ತಲೆಯ ಹತ್ತಿರವಿದ್ದ ವಾರ್ಡ್ ಬಾಯ್ ಮನೋಜ್ ಸುರ್ವೆ ಹೊದಿಕೆಯನ್ನು ಎಳೆಯುವ ನೆಪದಲ್ಲಿ ಆಕೆಯ ಎದೆಯ ಭಾಗವನ್ನು ಸ್ಪರ್ಶಿಸಿದ್ದಾನೆ. ಇದರಿಂದ ಆಘಾತಕ್ಕೀಡಾದರೂ ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಇದರ ದುರ್ಲಾಭ ಪಡೆದು ವಾರ್ಡ್ ಬಾಯ್ ಮತ್ತೆ ಆಕೆಯ ಎದೆಯ ಭಾಗವನ್ನು ಸ್ಪರ್ಶಿಸಿದ್ದಾನೆ.

ಇದನ್ನು ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಮೋದಿ ದಂಪತಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಇಂಥ ಘಟನೆ ಇಲ್ಲಿ ನಡೆಯಲು ಸಾಧ್ಯವೇ ಇಲ್ಲ ಎಂದು ಕೈತೊಳೆದುಕೊಂಡಿದ್ದಾರೆ. ನಂತರ ವೈದ್ಯೆಯೇ ಪೊಲೀಸರಿಗೆ ದೂರು ನೀಡಿದರು. ಪೊಲೀಸರು ವೈದ್ಯೆಯ ಹೇಳಿಕೆ ತೆಗೆದುಕೊಂಡು, ವಿಚಾರಣೆ ನಡೆಸಿ ಮನೋಜ್ ಸುರ್ವೆಯನ್ನು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+