ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕಿಂತ ಪಾಕಿಸ್ತಾನದಲ್ಲೇ ನೆಮ್ಮದಿ ಜೀವನ

By Mahesh
|
Google Oneindia Kannada News

Pakistanis happier than Indians
ವಾಷಿಂಗ್ಟನ್, ಏ. 21: ಸುಮಾರು 124 ರಾಷ್ಟ್ರಗಳಲ್ಲಿ ನಡೆಸಲಾದ ಸಮೀಕ್ಷೆ ಪ್ರಕಾರ, ಭಾಅತೀಯರಿಗಿಂತ ಪಾಕಿಸ್ತಾನಿಗಳು ಹೆಚ್ಚು ಸುಖ ಸಂತೋಷದಿಂದ ಬಾಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಭಾರತ 71ನೇ ಶ್ರೇಯಾಂಕ ಪಡೆದಿದ್ದು, ಶೇ.17 ರಷ್ಟು ಮಂದಿ ಮಾತ್ರ ನಿರೀಕ್ಷಿತ ಯಶಸ್ಸಿನ ಹಾದಿಯಲ್ಲಿದ್ದಾರೆ ಎನ್ನಲಾಗಿದೆ. ಡೆನ್ಮಾರ್ಕ್ ದೇಶದವರು ಪರಮಸುಖಿಗಳು ಎಂದು ಗಲ್ಲಪ್ ಸಮೀಕ್ಷೆ ಹೇಳಿದೆ.

ಭಾರತೀಯರಿಗಿಂತ ಪಾಕಿಸ್ತಾನಿಗಳ ಹೃದಯ ವಿಶಾಲವಾದದ್ದು ಎಂದಿದ್ದ ಪಾಕಿಸ್ತಾನಿ ಕ್ರಿಕೆಟ್ ನಾಯಕ ಶಹೀದ್ ಅಫ್ರಿದಿ ಮಾತಿಗೆ ಈ ಸಮೀಕ್ಷೆ ಪುಷ್ಟಿ ನೀಡಿದೆ. ಪಾಕಿಸ್ತಾನದಲ್ಲಿ ಏನೇ ಗೊಂದಲ, ಗಲಾಟೆ, ಘರ್ಷಣೆಗಳಿದ್ದರೂ ಜನ ಸಾಮಾನ್ಯರು ಸುಖವಾಗಿದ್ದಾರೆ ಎನ್ನುತ್ತದೆ ಈ ಸಮೀಕ್ಷೆ.

ಡೆನ್ಮಾರ್ಕ್ ನ ಶೇ.72 ರಷ್ಟು ಮಂದಿ ಏಳಿಗೆ ಹಾದಿಯಲ್ಲಿದ್ದಾರೆ. ಸ್ವೀಡನ್ ಹಾಗೂ ಕೆನಡಾ ಶೇ.69 ರಷ್ಟು ಅಂಕಗಳೊಂದಿಗೆ ರೇಸ್ ನಲ್ಲಿವೆ ಎಂದು ಗಲ್ಲಪ್ 2010 ಗ್ಲೋಬಲ್ ವೆಲ್ ಬೀಯಿಂಗ್ ಸಮೀಕ್ಷೆ ಹೇಳಿದೆ. ಜಗತ್ತಿನ ದೊಡ್ಡಣ್ಣ ಅಮೆರಿಕಾ ಶೇ.59 ರಷ್ಟು ಏಳಿಗೆ ಪಡೆದು ಪಟ್ಟಿಯ ಮಧ್ಯ ಭಾಗದಲ್ಲಿದೆ.

ಸಂಕಷ್ಟದಲ್ಲಿ ಭಾರತೀಯ: ಭಾರತದಲ್ಲಿ ಶೇ.64 ರಷ್ಟು ಜನ ಯಶಸ್ಸು ಕಾಣದೆ ಇನ್ನೂ ಕಷ್ಟ ಪಡುತ್ತಿದ್ದೇವೆ ಎಂದಿದ್ದಾರೆ. ಶೇ.19 ರಷ್ಟು ಮಂದಿ ತೀವ್ರ ಸಂಕಷ್ಟದಲ್ಲಿದ್ದಾರೆ. ಭಾರತಕ್ಕೆ ಹೋಲಿಸಿದರೆ ಪಾಕಿಸ್ತಾನ 40 ನೇ ಶ್ರೇಯಾಂಕದಲ್ಲಿದ್ದು, ಶೇ.32ರಷ್ಟು ಮಂದಿ ಯಶಸ್ಸಿನ ಹಾದಿಯಲ್ಲಿದ್ದಾರೆ. ಭಾರತದ ನೆರೆ ರಾಷ್ಟ್ರ ಬಾಂಗ್ಲಾದೇಶದ ಶೇ.13 ರಷ್ಟು ಮಂದಿ ಯಶಸ್ಸಿನ ಹಾದಿಯಲ್ಲಿದ್ದು 89ನೇ ಶ್ರೇಯಾಂಕ ಪಡೆದಿದೆ. ಚೀನಾ 92 ನೇ ಸ್ಥಾನದಲ್ಲಿದ್ದು ಶೇ.12 ರಷ್ಟು ಮಂದಿ ಮಾತ್ರ ಸುಖ ಜೀವನ ನಡೆಸುತ್ತಿದ್ದಾರೆ.

2010ರಲ್ಲಿ ಸಮೀಕ್ಷೆ ನಡೆಸಿದ ಗಲ್ಲಪ್, ಪ್ರತಿ ದೇಶದಲ್ಲೂ ಸುಮಾರು ಸಾವಿರಕ್ಕೂ ಹೆಚ್ಚು ವಯಸ್ಕರು, ಯುವಕರು ಹಾಗೂ ವಯೋವೃದ್ಧರನ್ನು ಟೆಲಿಫೋನಿಕ್ ಸಂದರ್ಶನ ಮೂಲಕ ಸಂಪರ್ಕಿಸಿ ಅಭಿಪ್ರಾಯ ಸಂಗ್ರಹಿಸಿತ್ತು. ಈಜಿಪ್ಟ್ ಕೀನ್ಯಾ ಹಾಗೂ ಚಡ್ ದೇಶಗಳು ಅತ್ಯಂತ ದುಃಖಭರಿತ ಜನರನ್ನು ಹೊಂದಿದೆ ಎಂದು ಸಮೀಕ್ಷೆ ಹೇಳುತ್ತದೆ.

English summary
Gallup survey: Denmark on the top spot. India has ranked 71st and Pakistan was ranked 40th in the new study of well-being and happiness. In India 19 percent are suffering and 64 percent believe they are struggling.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X