ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಗಣಿಗಾರಿಕೆ ಸಂಪೂರ್ಣ ಬಂದ್

By Mahesh
|
Google Oneindia Kannada News

Illegal Mining License cancel, Yeddyurappa
ಬೆಂಗಳೂರು, ಏ.19: ಅಕ್ರಮ ಗಣಿಗಾರಿಕೆಯಲ್ಲಿ ಕರ್ನಾಟಕ ದೇಶಕ್ಕೆ ನಂ.1 ಎಂಬ ಪ್ರಮಾಣಪತ್ರ ನೀಡಿದ ರಾಜ್ಯಪಾಲ ಎಚ್ ಭಾರದ್ವಾಜ್ ಅವರ ಹೇಳಿಕೆಯನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಒಪ್ಪಿಕೊಂಡಿದ್ದಾರೆ. ಆದರೆ, ಅಕ್ರಮ ಗಣಿಗಾರಿಕೆ ತಡೆಗಟ್ಟಲು ಕೇಂದ್ರ ಸರ್ಕಾರ ಸೂಕ್ತ ಸಹಕಾರ ನೀಡುತ್ತಿಲ್ಲ. ರಾಜ್ಯದಲ್ಲಿ ಗಣಿಗಾರಿಕೆ ನಡೆಸಲು ನೀಡಿದ್ದ ಅನುಮತಿಯನ್ನು ರದ್ದುಪಡಿಸಲು ಸರ್ಕಾರ ಮುಂದಾಗಿದೆ ಎಂದರು.

ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಕೇಂದ್ರ ಉನ್ನತಾಧಿಕಾರ ಸಮಿತಿ(ಸಿಇಸಿ) ಸಲ್ಲಿಸಿರುವ ವರದಿಯ ಮೇಲೆ ವಿಚಾರಣೆಯನ್ನು ಏ.21, 22ರಂದು ಸುಪ್ರೀಂ ಕೋರ್ಟ್ ನಡೆಸಲಿದೆ. ಸಿಇಸಿ ತನ್ನ ವರದಿಯಲ್ಲಿ ರಾಜ್ಯದ 64 ಗಣಿ ಕಂಪನಿಗಳನ್ನು ಮುಚ್ಚಬೇಕೆಂದು ಶಿಫಾರಸು ಮಾಡಿದೆ. ಇದೇ ವೇಳೆಗೆ ಗಣಿ ಲೈಸನ್ಸ್ ರದ್ದುಪಡಿಸಿ ಸಿಇಸಿ ಶಿಫಾರಸುಗಳನ್ನು ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ ಎಂದು ಕೋರ್ಟ್ ನಲ್ಲಿ ಸರ್ಕಾರ ಪ್ರತಿಪಾದಿಸಲಿದೆ.

ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಯ ಕೆಲವು ಭಾಗಗಳಲ್ಲಿ ಅಕ್ರಮ ಗಣಿಗಾರಿಕೆಗೆ ಸಹಾಯ ಮಾಡುತ್ತಿರುವ ಸರ್ಕಾರಿ ನೌಕರರಿಗೆ ಸರಿಯಾದ ಶಿಕ್ಷೆ ಕಾದಿದೆ. ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವವರು ಯಾರೇ ಆಗಲಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸೂಚಿಸಲಾಗಿದೆ. ರಫ್ತು ನಿಷೇಧ ನಿರ್ಧಾರವನ್ನು ನಮ್ಮ ಸರ್ಕಾರವೇ ಮೊದಲು ಕೈಗೊಂಡಿದ್ದು ಎಂಬುದನ್ನು ರಾಜ್ಯಪಾಲರು ಮರೆಯಬಾರದು ಎಂದು ಯಡಿಯೂರಪ್ಪ ಹೇಳಿದ್ದಾರೆ.

English summary
Karnataka CM BS Yeddyurappa has accepted the allegation made by Governor H Bharadwaj that Karnataka is the No.1 state in illegal Mining. But, Karnataka will cancel all license issued to Mines as mentioned in CEC report he added.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X