ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿನ್ನೆ ಲಕ್ಷ ಇಂದು 500 ಕೋಟಿ ಒಡೆಯ ಜಗನ್ ಕಥೆ

By Mahesh
|
Google Oneindia Kannada News

YS Jagan, rich politician, Kadapa
ಕಡಪ, ಏ. 18 : 2004 ರಲ್ಲಿ ಲಕ್ಷಾಧೀಶ 2011ರಲ್ಲಿ ಹೆಚ್ಚುಕಮ್ಮಿ 500 ಕೋಟಿ ರು.ಗಳ ಒಡೆಯ. ಮುಂದೆ ಆಯ್ಕೆಯಾದರೆ ಭಾರತದ ಶ್ರೀಮಂತ ಸಂಸದ ಎಂಬ ಕೀರ್ತಿ ಕಡಪ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವೈಎಸ್ ಆರ್ ಜಗನ್ ಮೋಹನ್ ರೆಡ್ಡಿಗೆ ಸಲ್ಲುತ್ತದೆ. ಚುನಾವಣೆ ಪಮಾಣ ಪತ್ರದಲ್ಲಿ ನೀಡಿರುವ ಆಸ್ತಿ ವಿವರಗಳು ಬಹಿರಂಗಗೊಳ್ಳುತ್ತಿದ್ದಂತೆ ಎರಡೇ ವರ್ಷದಲ್ಲಿ ನಾಲ್ಕು ಪಟ್ಟಿ ಆಸ್ತಿ ಹಿಗ್ಗಿಸಿಕೊಂಡಿರುವ ಜಗನ್ ನಿಜಕ್ಕೂ ಒಳ್ಳೆ ಮ್ಯಾಜಿಕ್ ಮ್ಯಾನ್ ಎಂದು ಟಿಡಿಪಿ ಶ್ರೀಮಂತ ಸಂಸದ ನಾಗೇಶ್ವರ ರಾವ್ ವ್ಯಂಗ್ಯವಾಡಿದ್ದಾರೆ.

ಕಡಪ ಲೋಕಸಬಾ ಕ್ಷೇತದ ನೂತನ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೈಎಸ್ ಜಗನ್ಮೋಹನ್ ರೆಡ್ಡಿ ತಮ್ಮ ಆಸ್ತಿಯನ್ನು ಘೋಷಿಸಿದ್ದು, ಒಟ್ಟು 500 ಕೋಟಿ ರೂಪಾಯಿ ಹೊಂದಿರುವುದಾಗಿ ಚುನಾವಣೆ ಪಮಾಣ ಪತ್ರದಲ್ಲಿ ತಿಳಿಸಿದ್ದಾರೆ. 2004ರಲ್ಲಿ 9.18 ಲಕ್ಷ ರೂಪಾಯಿ, 2009ರಲ್ಲಿ ಜಗನ್‌ಮೋಹನ್ ರೆಡ್ಡಿ ತಮ್ಮ ಆಸ್ತಿ 77 ಕೋಟಿ ರೂಪಾಯಿಗಳಾಗಿವೆ ಎಂದು ಬಹಿರಂಗಪಡಿಸಿದ್ದರು.

ವಿಡಿಯೋ:
ಜಗನ್ ಬಂಡಾಯ, ರಾಜೀನಾಮೆ

ಒಂದು ವೇಳೆ ಲೋಕಸಭೆಗೆ ಆಯ್ಕೆಯಾದಲಿ, ಸಂಸತ್ತಿನಲ್ಲಿ ಶ್ರೀಮಂತ ಸಂಸದ ಎನ್ನುವ ಖ್ಯಾತಿಗೆ ಜಗನ್ ಒಳಗಾಗುತ್ತಾರೆ. ಆದರೂ, ಶ್ರೀಮಂತ ಸಂಸದರಾಗಿ ಕರ್ನಾಟಕದ ಮದ್ಯದ ದೊರೆ ವಿಜಯ್ ಮಲ್ಯ ಅವರ ಹೆಸರೇ ಉಳಿಯಲಿದೆ. ಮಲ್ಯ ಅವರ ಆಸ್ತಿ ಮೌಲ್ಯ ಸುಮಾರು 610 ಕೋಟಿ ರು ಗಳಾಗಿವೆ.

ಎಲ್ಲೆಲ್ಲಿ ಎಷ್ಟೆಷ್ಟು ಆಸ್ತಿ:
ಪ್ರಮಾಣ ಪತ್ರ ಪ್ರಕಾರ, ಜಗನ್ 365.68 ಕೋಟಿ ರೂಪಾಯಿಗಳ ನಗದು ಹಣವನ್ನು ಹೊಂದಿದ್ದಾರೆ. ಅವರ ಪತ್ನಿ ಭಾರತಿ ರೆಡ್ಡಿ 41.33 ಕೋಟಿ ರೂಪಾಯಿ ನಗದು ಮೊತ್ತವನ್ನು ಹೊಂದಿದ್ದಾರೆ. ಷೇರು, ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆಯ ಪ್ರಮಾಣ 359 ಕೋಟಿ ರೂಪಾಯಿಗಳಿಗೂ ಮೀರಿದೆ. ಬ್ಯಾಂಕ್ ಖಾತೆಗಳಲ್ಲಿ (5.52 ಕೋಟಿ ರೂಪಾಯಿ) ಎನ್‌ಎಸ್‌ಎಸ್, ಪೋಸ್ಟಲ್ ಸೇವಿಂಗ್ಸ್, ವಿಮೆ ಪಾಲಿಸಿಗಳು(7.08 ಲಕ್ಷ ರೂಪಾಯಿ) ಆಭರಣಗಳು ಮತ್ತು ಇತರ ಆಸ್ತಿಗಳು (20.56 ಲಕ್ಷ ರೂಪಾಯಿ) ಹೊಂದಿದ್ದಾರೆ.

ಜಗನ್ ಪತ್ನಿ ಭಾರತಿ, ಶೇರುಗಳು ಮ್ಯೂಚುವಲ್ ಫಂಡ್‌ಗಳಲ್ಲಿ 36.1 ಕೋಟಿ ರೂಪಾಯಿಗಳು, ಬ್ಯಾಂಕ್ ಖಾತೆಯಲ್ಲಿ ನಗದು ಮೊತ್ತ 56.46 ಕೋಟಿ ರೂಪಾಯಿ, ಆಭರಣಗಳು, ಚಿನ್ನ ಮತ್ತು ವಜ್ರ ಸೇರಿದಂತೆ ಒಟ್ಟು ಮೊತ್ತ 3.8 ಕೋಟಿ ರೂಪಾಯಿಗಳ ಆಸ್ತಿಯನ್ನು ಘೋಷಿಸಿದ್ದು, ತಾವು ಯಾವುದೇ ವಾಹನ, ಹೆಲಿಕಾಪ್ಟರ್, ಹಡಗುಗಳ ಮಾಲೀಕತ್ವವನ್ನು ಹೊಂದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಉಡುಪಿಯಲ್ಲೂ ಆಸ್ತಿ: ಜಗನ್ ಸ್ಥಿರಾಸ್ತಿಯಲ್ಲಿ ಕೃಷಿ ಭೂಮಿ, ಕೃಷಿಯೇತರ ಭೂಮಿ, ವಾಣಿಜ್ಯ ಭೂಮಿ ಮತ್ತು ವಸತಿ ಭೂಮಿಗಳ ಮೊತ್ತ 150 ಕೋಟಿ ರೂಪಾಯಿಗಳಾಗಿವೆ. ಇಡುಪುಲಪಾಯಾ ಗ್ರಾಮದಲ್ಲಿ 42.44 ಎಕರೆ ಭೂಮಿ, ಶಿವಮೊಗ್ಗದಲ್ಲಿ ಪತ್ನಿ ಭಾರತಿ ಹೆಸರಿನಲ್ಲಿ 9 ಎಕರೆ ಭೂಮಿ, ಉಡುಪಿ ಜಿಲ್ಲೆಯಲ್ಲಿ 0.37 ಏಕರೆ ಭೂಮಿ, ಪುಲಿವೆಂದುಲಾ ಪಟ್ಟಣದಲ್ಲಿ 0.95 ಎಕರೆ ಭೂಮಿ, ಕಡಪ ಜಿಲ್ಲೆಯ ಕಂಚಿವರಿಪಲ್ಲೆ ಪಟ್ಟಣದಲ್ಲಿ 1 ಎಕರೆ ಭೂಮಿಯನ್ನು ಹೊಂದಿದ್ದು ಒಟ್ಟು ಮೊತ್ತ 24 ಕೋಟಿ ರೂಪಾಯಿಗಳಾಗಲಿವೆ ಎಂದು ಆಸ್ತಿ ವಿವರಣೆಯಲ್ಲಿ ಘೋಷಿಸಿಲಾಗಿದೆ.

English summary
Andra Pradesh Politician Jagan Mohan Reddy has declared assets of Rupees 365 crore on his nomination for the May 8 by poll to Kadapa Lok Sabha seat. It has raised many eyebrows since his assets has multiplied four times(around 250 crores) in just two years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X